ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೈಕ್ ಸವಾರರ ಮೇಲೆ ಬಿದ್ದ ಬಾರೀ ಗಾತ್ರದ ಮರ. ಸವಾರನಿಗೆ ಗಾಯ. ಆಸ್ಪತ್ರೆಗೆ ದಾಖಲು.

ಬೈಕ್ ಸವಾರರ ಮೇಲೆ ಬಿದ್ದ ಬಾರೀ ಗಾತ್ರದ ಮರ. ಸವಾರನಿಗೆ ಗಾಯ. ಆಸ್ಪತ್ರೆಗೆ ದಾಖಲು.

Fri, 28 Jun 2024 22:26:26  Office Staff   SO News

ಹೊನ್ನಾವರ :   ನಗರಬಸ್ತಿಕೇರಿ ಹೊನ್ನಾವರ ಮಾರ್ಗದಲ್ಲಿ ಬೃಹತ್ ಮರವೊಂದು ಬೈಕ್ ಸವಾರರ ಮೇಲೆ  ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ತಾಲೂಕಿನ ಅನಿಲಗೋಡ ನಿವಾಸಿ, ಬೈಕ್ ಸವಾರ ಬಾಬು ನಾಯ್ಕ (52) ಗಾಯಗೊಂಡವರು. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಅವರ ಪತ್ನಿ ಭಾಗೀರಥಿ ನಾಯ್ಕ ಅದೃಷ್ಟವಶಾತ್ ಪಾರಾಗಿದ್ದಾರೆ.   ನಗರಬಸ್ತಿಕೇರಿಯಲ್ಲಿ ತಮ್ಮ ಸಂಬಂಧಿಯೊಬ್ಬರ ಶವಸಂಸ್ಕಾರಕ್ಕೆಂದು ದಂಪತಿ ಬೈಕಿನಲ್ಲಿ . ವಾಪಸ್ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅದೇ ಮಾರ್ಗದಲ್ಲಿ ಬರುತ್ತಿದ್ದ ಸ್ಥಳೀಯರು, ಬೈಕ್ ಸವಾರರು ಮತ್ತು ಕಾರಿನಲ್ಲಿ ಬರುತ್ತಿದ್ದ ಭಟ್ಕಳದ ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ ಮತ್ತು ಗಣಪತಿ ಗೌಡರು ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯ ಮಾಡಿ, ಗಾಯಳುವನ್ನ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.


Share: