ಮಹಮೂದ್ ಗಾವಾನ್ ಮದರಸಾದಲ್ಲಿ ಇದೇ ಮೊದಲ ಬಾರಿಗೆ ನಡೆದ ಮುಶಾಯಿರಾ ನಡುರಾತ್ರಿವರೆಗೂ ಸಹೃದಯರನ್ನು ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಯಿತು. ದೇಶದ ಖ್ಯಾತ ಕವಿಗಳಾದ ಡಾ.ರಾಹತ್ ಇಂದೋರಿ, ಮುಂಬಯಿಯ ಲತಾ ಹಯಾ, ಹೀನಾ ತೈಮೂರಿ, ಮಿರಾಜ ಫೈಜಾಬಾದಿ, ಮಂಜರ್ ಬೋಪಾಲಿ, ಸೊಹೇಲ್ ಲಖ್ನವಿ, ಅಶೋಕ ಸಾಹೆಲ್ ಮುಜಫ್ಫರನಗರ, ಸರ್ದಾರ್ ಪಂಚಿ ಲೂಧಿಯಾನ, ಮುಹೀಬ್ ಕೌಸರ್ ಗುಲ್ಬರ್ಗಾ, ಅಹ್ಮದ್ ಫರ್ವಾಜ್ ನಾಂದೇಡ್, ಸ್ಥಳೀಯ ಕವಿಗಳಾದ ನಿಸಾರ್ ಅಹ್ಮದ್ ಕಲೀಂ, ಅಮಿರುದ್ದೀನ್ ಇವರ ಕವನಗಳು ಉತ್ಸವಕ್ಕೆ ರಂಗೇರಿಸಿದವು.
ಲತಾ ಹಯಾ ಅವರ
“ಕಭಿ ಸೋಂಚಾ ಹೇ ತುಮ್ನೆ, ಅಗರ್ ಉರ್ದು ನಹೀ ಹೋತಿ
ತೊ ಹಮಾರೀ ಗುಫ್ತಗೂ ಮೆ ಕುಷ್ಬೂ ನಹಿ ಹೋತಿ” ಮೆಚ್ಚುಗೆಗೆ ಪಾತ್ರವಾಯಿತು.
ಅಶೋಕ್ ಸಾಹೆಲ್ ಅವರ ಮೇರಿ
‘ಉರ್ದು ಕೊ ದಹಶದ್ ಗರ್ದ್ ಜಿಸ್ನೆ ಭಿ ಕಹಾ ಹೋಗಾ,
ಕೆ ಉಸ್ಕೊ ಅಪ್ನಿ ಮಾಕಾ ದೂದ್ ಭಿ ಕಡ್ವಾ ಲಗಾ ಹೋಗಾ”
ಧರ್ಮ ಸಾಮರಸ್ಯದ ಕುರಿತಾಗಿ ಮಂಜರ್ ಭೋಪಾಲಿ ಅವರು ಕವನ ಉತ್ತಮ ಸಂದೇಶ ನೀಡುವಲ್ಲಿ ಯಶಸ್ವಿಯಾಯಿತು.
ಮುಶಾಯಿರಾ ಉದ್ಘಾಟಿಸಿ ಕೊನೆ ತನಕವೂ ಕುಳಿತು ಆನಂದಿಸಿದ ಸಂಸದ ಧರಂಸಿಂಗ್ ಮಾತನಾಡಿ, ನನ್ನ ಶಿಕ್ಷಣ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಸಂಪೂರ್ಣ ಉರ್ದು ಮಾಧ್ಯಮದಲ್ಲಿ ಮಾಡಿದ್ದೇನೆ ಎಂದರು. ಅವರ ಕೆಲವು ಶಾಯರಿಗಳು ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು.