ಭಟ್ಕಳ, ಜನವರಿ 21:ಮೊಗೇರರಿಗೆ ಜಾತಿ ಪ್ರಮಾಣ ನೀಡದಿರುವಂತೆ ಸರಕಾರದ ನಿರ್ದೇಶನ ಇಲ್ಲದೇ ಇದ್ದರೂ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ಕರ್ತವ್ಯ ಲೋಪ ಎಸಗುತ್ತಾ ಬಂದಿದ್ದಾರೆ ಎಂದು ಸದಸ್ಯ ಪರಮೇಶ್ವರ ದೇವಾಡಿಗ ಸಭೆಯಲ್ಲಿ ಕಿಡಿ ಕಾರಿದರು.
ಜಾರಿ ನಿರ್ದೇಶನಾಲಯಕ್ಕೆ ಆ ಕುರಿತಂತೆ ನಿರ್ದೇಶನ ನೀಡಲು ಯಾವುದೇ ಹಕ್ಕೂ ಇಲ್ಲ. ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಮೊಗೇರರನ್ನು ಪರಿಶಿಷ್ಟರೆಂದು ಪರಿಗಣಿಸಿ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗುತ್ತಿದ್ದರೂ, ಸಮಾಜ ಕಲ್ಯಾಣ ಇಲಾಖೆ ಮಾತ್ರ ಹಾಸ್ಟೇಲ್ ನೇಮಕಾತಿ ವಿಷಯದಲ್ಲಿ ನಿರಾಕರಣೆ ಧೋರಣೆ ತೋರುತ್ತಿರುವುದರ ಹಿನ್ನೆಲೆಯಾದರೂ ಏನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ತಹಸೀಲ್ದಾರರ ಸಮಕ್ಷಮದಲ್ಲಿ ಆದೇಶದ ಕುರಿತಂತೆ ಕೆಲವೇ ದಿನಗಳಲ್ಲಿ ಸ್ಪಷ್ಟ ಉತ್ತರ ನೀಡುವುದಾಗಿ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ ಭರವಸೆ ನೀಡುವುದರೊಂದಿಗೆ ವಿಷಯಕ್ಕೆ ಮಂಗಳ ಹಾಡಲಾಯಿತು.