ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಉನ್ನತ ಹುದ್ದೆಗೇರಲು ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಸಮಯಪಾಲನೆ ಅತೀ ಅಗತ್ಯ - ಡಾ. ಅಬ್ದುಲ್ ಕರೀಂ

ಭಟ್ಕಳ: ಉನ್ನತ ಹುದ್ದೆಗೇರಲು ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಸಮಯಪಾಲನೆ ಅತೀ ಅಗತ್ಯ - ಡಾ. ಅಬ್ದುಲ್ ಕರೀಂ

Sun, 31 Jan 2010 18:11:00  Office Staff   S.O. News Service

ಭಟ್ಕಳ, ಜನವರಿ 31: ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯ ಪಾಲನೆಯಿದ್ದರೆ ಅವರು ಉನ್ನತ ಹುದ್ದೆಗೆ ತಲುಪಬಹುದು, ಇದಕ್ಕಾಗಿ ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಹುಬ್ಬಳ್ಳಿಯ ಅಂಜುಮನ್ ನೆಹರು ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಅಬ್ದುಲ್ ಕರೀಮ್ ಹೇಳಿದರು. ಅವರು ಇತ್ತಿಚೆಗೆ ಇಲ್ಲಿನ ಅಂಜುಮಾನ್ ಹಾಮಿ-ಎ-ಮುಸ್ಲಿಮೀನ್ ಸಂಸ್ಥೆಯ ಅಂಜುಮನ್ ಪದವಿಪೂರ್ವ ಕಾಲೇಜಿನ ೪೨ನೆ ವಾರ್ಷೀಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ತಮ್ಮ ಜೀವನದ ಒಬ್ಬ ಉನ್ನತ ವ್ಯಕ್ತಿಯನ್ನು ರೋಲ್ ಮಾಡಲ್ ಆಗಿ ಮಾಡಿಕೊಳ್ಳಬೇಕು ಇಂದಿನ ದಿನಗಳಲ್ಲಿ ಹೆಚ್ಚಿನೆಲ್ಲ ಯುವಕರು ಸಿನೆಮಾದ ಹೀರೋಗಳನ್ನು ತಮ್ಮ ರೋಲ್ ಮಾಡನ್ನಾಗಿ ಮಾಡಿಕೊಂಡಿರುತ್ತಾರೆ. ಆದರೆ ನೀವು ನಿಮ್ಮ ಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪಬೇಕು ಎಂದರೆ ನಮ್ಮ ದೇಶದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಗಿಂತ ಉತ್ತಮ ರೋಲ್ ಮಾಡಲ್ ಮತ್ತೊಬ್ಬನಿರಲಾರ ಅವರನ್ನು ನಿಮ್ಮ ರೋಲ್ ಮಾಡಲ್ ಆಗಿ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿ ಮಾತನ್ನು ಹೇಳಿದರು.

 

 

ಶಿಕ್ಷಣ ಪಡೆಯುವುದರ ಉದ್ದೇಶವಾದರೋ ಏನು ಎಂದು ವಿದ್ಯಾರ್ಥಿಗಳಿಗೆ ಪ್ರಶ್ನಿಸಿದ ಕರೀಮ್ ನಾವು ಶಿಕ್ಷಣವನ್ನು ಜ್ಞಾನಾಭಿವೃದ್ಧಿಗಾಗಿ ಪಡೆಯಬೇಕೇ ಹೊರತು ಹಣ ಗಳಿಸಲಿಕ್ಕೆ ಅಲ್ಲ ಜ್ಞಾನಾಭಿವೃದ್ಧಿಯಿಂದಾಗಿ ಹಣ ತನ್ನಿಂದ ತಾನೆ ಬರುವುದು ಎಂದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಸಿದ್ದ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ದಾಮ್ದಾ ಹಸನ್ ಶಬ್ಬರ್ ನಮ್ಮ ವಿದ್ಯಾರ್ಥಿಗಳಲ್ಲಿ ಹಲವಾರು ಪ್ರತಿಭೆಗಳು ಅಡಕಗೊಂಡಿವೆ ಆದರೆ ಅದನ್ನು ಶೋಧಿಸಿ ಹೊರತರುವಂತಹ ಕಾರ್ಯವಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜುಕಾಕೋ ಅಬ್ದುಲ್ ರಹೀಮ್, ಉಪಾಧ್ಯಕ್ಷ(ದ್ವಿ) ಝಫರ್ ಅಲಿ ಮು‌ಅಲ್ಲಿಮ್ ಭಟ್ಕಳ ಸಿ.ಪಿ.ಐ ಗುರುಮತ್ತೂರು, ಸಂದರ್ಭಾನುಸಾರ ಮಾತನಾಡಿದರು. ಪ್ರಾಚಾರ್ಯ ರಿಯಾಝ್ ಆಹ್ಮದ್ ಜಾಗಿರದಾರ ವಾರ್ಷಿಕ ವರದಿಯನ್ನು ಮಂಡಿಸಿದರು.

 

ಕಾರ್ಯಕ್ರಮ ಸಮಿತಿಯ ಸಂಚಾಲಕ ಪ್ರೋ;ರವೂಫ್ ಆಹ್ಮದ್ ಸವನೂರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಪ್ರೋ: ಅಬ್ದುಲ್ ರಹೀಮ್ ಖಾನ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಚಿನ್ ಭಟ್ ವಂದಾರ್ಪಣೆಯನ್ನು ಸಲ್ಲಿಸಿದರು.

 

ಕಾರ್ಯಕ್ರಮದ ಕೊನೆಯಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ,ದ್ವಿತೀಯಾ, ತೃತೀಯಾ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

 

 

 

 

 


Share: