ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆಂಗಳೂರು: ಕಾರು ತೊಳೆಯುವಾಗ ಎಕ್ಸಿಲೇಟರ್ ತುಳಿದ ಬಾಲಕ: ರಸ್ತೆಯಲ್ಲಿ ಆಡುತ್ತಿದ್ದ 5 ವರ್ಷದ ಮಗು ದುರ್ಮರಣ

ಬೆಂಗಳೂರು: ಕಾರು ತೊಳೆಯುವಾಗ ಎಕ್ಸಿಲೇಟರ್ ತುಳಿದ ಬಾಲಕ: ರಸ್ತೆಯಲ್ಲಿ ಆಡುತ್ತಿದ್ದ 5 ವರ್ಷದ ಮಗು ದುರ್ಮರಣ

Mon, 13 May 2024 00:12:14  Office Staff   SO News Service

ಬೆಂಗಳೂರು: ನಗರದ ಓಲ್ಡ್ ಏರ್ ಪೋರ್ಟ್ ರಸ್ತೆ ಮುರುಗೇಶಪಾಳ್ಯದಲ್ಲಿ ತಂದೆ ಜತೆ ಕಾರು ತೊಳೆಯುವಾಗ 15 ವರ್ಷದ ಬಾಲಕ ಏಕಾಏಕಿ ಎಕ್ಸಿಲೇಟರ್‌ ತುಳಿದಿದ್ದರ ಪರಿಣಾಮ ಮನೆಯಾಂಗಳದಲ್ಲಿ ಆಟವಾಡುತ್ತಿದ್ದ 5 ವರ್ಷದ ಮಗುವಿನ ಮೇಲೆ ಕಾರು ಹರಿದು ಮೃತಪಟ್ಟಿದೆ.

ಈ ಸಣ್ಣ ನಿರ್ಲಕ್ಷ್ಯದಲ್ಲಿ ಐದು ವರ್ಷ ಮಗು ಆರವ್ ಮೃತಪಟ್ಟಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಬೆಳಗ್ಗೆ 10.30ರ ಸುಮಾರಿಗೆ ಈ ದುರಂತ ನಡೆದಿದೆ.

ಕಾರಿನ ಡ್ರೈವಿಂಗ್‌ ಸೀಟ್‌ನಲ್ಲಿ ಕುಳಿತಿದ್ದ 15 ವರ್ಷದ ಬಾಲಕ ಏಕಾಏಕಿ ಎಕ್ಸಿಲೇಟರ್ ತುಳಿದಿದ್ದಾನೆ. ಪರಿಣಾಮ ಕಾರು ರಭಸವಾಗಿ ಮುನ್ನುಗಿದೆ. ಆ ಸಂದರ್ಭದಲ್ಲಿ ರಸ್ತೆಯಲ್ಲಿ ಆಡುತ್ತಿದ್ದ ಮಗುವಿಗೆ ಕಾರು ಡಿಕ್ಕಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ಆರವ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸದ್ಯ ಮೃತದೇಹವನ್ನು ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


Share: