ಮಂಜೇಶ್ವರ, ಜನವರಿ ೦೪ : ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳು ಮಹೋನ್ನತ ಕೊಡುಗೆ ನೀಡಿದೆಯೆಂದು ಪತ್ರಕರ್ತ ಹಷಾದ್ ವರ್ಕಾಡಿ ಹೇಳಿದ್ದಾರೆ.
ಅವರು ಮಚ್ಚಂಪಾಡಿ ಮೌಲಾನಾ ಅಬ್ದುಲ್ ಕಲಾಂ ಆಝಾದ್ ಮೆಮೋರಿಯಲ್ ಆರ್ಟ್ಸ & ಸ್ಪೋರ್ಟ್ಸ ಕ್ಲಬ್ ಮಚ್ಚಂಪಾಡಿಯಲ್ಲಿ ಆಯೋಜಿಸಿದ್ದ ಉತ್ತಮ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಚರಿತ್ರೆಯುದ್ದಕ್ಕೂ ಮಾಧ್ಯಮಗಳು ಜವಾಬ್ದಾರಿ ಯುತ ಕರ್ತವ್ಯವನ್ನು ನಿರ್ವಹಿಸಿಕೊಂಡಿದೆ. ಅಂತೂ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಹೋರಾಟ ರಂಗದಲ್ಲಿ ಅಸಾಮಾನ್ಯ ಕೊಡುಗೆಯನ್ನು ನೀಡಿದೆ ಎಂದ ಅವರು ಜಗತ್ತಿನ ಅವಿಭಾಜ್ಯ ಅಂಗವಾದ ಮಾಧ್ಯಮ ರಂಗ ಮೌಲ್ಯಯುತ ಸಾಮಾಜಿಕ ವಾತಾವರಣ ನಿರ್ಮಾಣಕ್ಕೆ ಅಡಿಪಾಯವನ್ನು ಹಾಕಿದೆ. ಮಾಧ್ಯಮಗಳು ಕೇವಲ ವಾರ್ತಾ ವಿಸ್ತರಣೆಗೆ ಮಾತ್ರ ಸೀಮಿತ ಗೊಳ್ಲದೆ ಉತ್ತಮ ನಾಗರಿಕ ಬದುಕು ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಸಮಾಜದಲ್ಲಿನ ಅರಾಜಕತ್ವ ,ಅನೀತಿ , ದೌರ್ಜನ್ಯ ,ಹಿಂಸಾಚಾರಗಳನ್ನು ತಡಗಟ್ಟಿ ನಿಗ್ರಹಿಸುವಲ್ಲಿ ಮಾಧ್ಯಮಗಳು ಗಮನಾರ್ಹ ಪಾತ್ರ ವಹಿಸಿದೆ ಎಂದರು.
ಕಾರ್ಯಾಗಾರವನ್ನು ಉದ್ಗಾಟಿಸಿ ಮಾತನಾಡಿದ ಯು.ಕೆ ಸೈಫುಲ್ಲಾ ತಂಙಳ್ ಉದ್ಯಾವರ ಇಡೀ ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಹೋಲಿಸಿದರೆ ಇಂತಹಾ ಕಾರ್ಯಕ್ರಮಗಳು ವಿರಳ ಈ ನಿಟ್ಟಿನಲ್ಲಿ ಆಝಾದ್ ಕ್ಲಬ್ ಪದಾಧಿಕಾರಿಗಳನ್ನು ಅಭಿನಂದಿಸೂವುದು ಅನಿವಾರ್ಯ ಇಂತಹಾ ಉಪನ್ಯಾಸಗಳಿಂದ ಜನ ಸಾಮಾನ್ಯರನ್ನು ಪ್ರಜ್ಞಾವಂತರನ್ನಾಗಿಸಲು ಸಾದ್ಯ ಎಂದರು.ಯಂಗ್ ಮೆನ್ಸ್ ಅಸೋಶಿಯೆಶನ್ ಅಧ್ಯಕ್ಷ ಬಿ.ಕೆ ಮೊಯ್ದೀನ್ , ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಾರ್ಯದರ್ಶಿ ಇಸ್ಮಾಯಿಲ್ , ಕುಡೇಲು ಫ್ರಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಗಟ್ಟಿ ಮೊದಲಾದವರು ಉಪಸ್ತಿತರಿದ್ದರು. ಕ್ಲಬ್ ಗೌರವಾಧ್ಯಕ್ಷ ಕಲೀಲ್ ಬಜಾಲ್ ಅಧ್ಯಕ್ಷತೆ ವಹಿಸಿದರು. ಅಧ್ಯಕ್ಷ ಆರಿಫ್ ಮಚ್ಚಂಪಾಡಿ ಸ್ವಾಗತಿಸಿ ಕಾರ್ಯದರ್ಶಿ ಬಶೀರ್ ಪಳ್ಲಂ ವಂದಿಸಿದರು.