ಬೆಂಗಳೂರು, ಅ.6: ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ಹಾವಳಿಯಿಂದ ಸುಮಾರು ೧೬,೮೦೦ ಕೋಟಿ ಹಾನಿ ಸಂಭವಿಸಿದೆ ಎಂದು ಕಾನೂನು ಮತ್ತು ಸಂಸದಿಯ ವ್ಯವಹಾರ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಗರದ ವಕೀಲರ ಭವನದಲ್ಲಿ ಬೆಂಗಳೂರು ವಕೀಲರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರವಾಹ ಪೀಡಿತ ಸಂತ್ರಸ್ತರ ಪರಿಹಾರ ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಹಿಂದೆಂದಿಗಿಂತಲೂ ಭೀಕರ ನೆರೆ ಹಾವಳಿ ಇದಾಗಿರುವುದರಿಂದ ಅಪಾರ ಪ್ರಮಾಣ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ. ಪರಿಹಾರ ನಿಧಿಗೆ ಹೆಚ್ಚಿನ ದೇಣಿಗೆ ನೀಡುವ ಮೂಲಕ ಸಂತ್ರಸ್ತರ ಪುನರ್ವಸತಿಗೆ ಸಹಕರಿಸಬೇಕು ಎಂದು ವಕೀಲರಿಗೆ ಕರೆ ನೀಡಿದರು.
ಸಂಘದ ಅಧ್ಯಕ್ಷ ಕೆ.ಎನ್. ಪುಟ್ಟೇಗೌಡ ಮಾತನಾಡಿ, ವಿಪತ್ತು, ಅನಾಹುತಗಳ ಸಂದರ್ಭದಲ್ಲಿ ವಕೀಲರು ಸಹಾಯ ಮಾಡಿದ್ದಾರೆ. ಈ ಬಾರಿ ಹೆಚ್ಚಿನ ಅನಾಹುತ ಸಂಭವಿಸಿರುವುದರಿಂದ ಹೆಚ್ಚಿನ ಧನ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಪರಿಹಾರ ನಿಧಿ ಸಂಗ್ರಹ ಕಾರ್ಯಕ್ರಮ ಈ ತಿಂಗಳ ೨೦ ರವರೆಗೆ ನಡೆಯಲಿದ್ದು, ಇದರಲ್ಲಿ ವಕೀಲರು ಆಸಕ್ತಿ ಮತ್ತು ಕಾಳಜಿಯಿಂದ ಭಾಗವಹಿಸುವಂತೆ ಅವರು ಕರೆ ನೀಡಿದರು.
ಹಿರಿಯ ವಕೀಲ ಬಿ.ಎನ್.ಎಸ್ ರಾವ್ ಪರಿಹಾರ ನಿಧಿಗೆ ನೀಡಿದ ಒಂದು ಲಕ್ಷ ರೂ. ಚೆಕ್ ಸ್ವೀಕರಿಸುವ ಮೂಲಕ ನಿಧಿ ಸಂಗ್ರಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ವಕೀಲರ ಸಹಕಾರ ಸಂಘದಿಂದ ಪರಿಹಾರ ನಿಧಿಗೆ ಐವತ್ತು ಸಾವಿರ ರೂ. ನೀಡಲು ನಿರ್ಧರಿಸಲಾಯಿತು.
ಕಾರ್ಯಕ್ರಮದ ನಂತರ ಸಂಘದ ಸದಸ್ಯರು ಮತ್ತು ಇತರ ವಕೀಲರು ತಂಡ ರೂಪದಲ್ಲಿ ನಿಧಿ ಸಂಗ್ರಹ ಪೆಟ್ಟಿಗೆಗಳನ್ನು ಹಿಡಿದು ನ್ಯಾಯಲಯದ ಆವರಣದಲ್ಲಿ ವಕೀಲರು ಮತ್ತು ಸಾರ್ವಜನಿಕರಿಂದ ಹಣ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಅನೇಕ ವಕೀಲರು ಹಾಜರಿದ್ದರು.