ಭಟ್ಕಳ:೨೪,ಭಟ್ಕಳದ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಸಂಸ್ಥೆಯ ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯವು ಇಲೆಕ್ಟ್ರಾನಿಕ್ಸ್ ಮತ್ತು ಕ,ಮ್ಯುನಿಕೇಷನ್ ವಿಭಾಗ ಹಾಗೂ ಟೆಕ್ನೋವೇಟ್ ವಿದ್ಯಾರ್ಥಿ ಕೂಟವು ಇತ್ತಿಚೆಗೆ ಡಿಜಿಟಲ್ ಇಮೇಜ ಪ್ರೋಸೆಸಿಂಗ್ ವಿಷಯದ ಮೇಲೆ ಒಂದು ದಿನದ ರಾಜ್ಯ ಮಟ್ಟದ ಕಾರ್ಯಗಾರವನ್ನು ಆಯೋಜಿಸಿತ್ತು.
ಕಾರ್ಯಗಾರವನ್ನು ಉದ್ಘಾಟಿಸಿ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಫ್ರೋ. ಡಾ. ಪಿ.ಎಸ್. ಹಿರೇಮಠ ಇಮೇಜ್ ಪೋಸೆಸಿಂಗ ನಲ್ಲಿ ಬಳಕೆಯಾಗುವ ತಂತ್ರಜ್ಞಾನದ ಕುರಿತು ಮಾತನಾಡಿದರು.
ಪ್ರಾಚಾರ್ಯ ಡಾ. ನೂರ ಆಹ್ಮದ್ ಇಂತಹ ಕಾರ್ಯಗಾರಗಳ ಪ್ರಯೋಜವನ್ನು ಪಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾಯಕ್ರಮದ ಅಧ್ಯಕ್ಷತೆಯನ್ನು ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಡಿ.ಎಚ್. ಶಬ್ಬರ್ ವಹಿಸಿದ್ದರು. ಸಂಸ್ಥೆಯ ಆಡಳಿತ ಮಂಡಳಿಯ ಝಫರ್ ಅಲಿ ಮುಅಲ್ಲಿಮ್, ಪ್ರಧಾನ ಕಾರ್ಯದರ್ಶಿ ಜುಕಾಕೋ ಅಬ್ದುಲ್ ರಹೀಮ್, ಕಾಸಿಮ್‌ಜಿ ಮುಹಮ್ಮದ್ ಅನ್ಸಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಧಾರವಾಡದ ಎಸ್.ಡಿ.ಎಂ ಕಾಲೇಜಿನ ಡಾ. ಜಗದೀಶ್ ಪುಜಾರಿ, ಕರ್ನಾಟಕ ವಿ.ವಿ. ದ ಡಾ. ಶಿವಶಂಕರ್ ಹಾಗೂ ಮಣಿಪಾಲ ಎಮ್.ಐ.ಟಿ ಯ ಡಾ,. ಕೆ.ಎಸ್. ಹರೀಶ್ ವಿವಿಧ ವಿಷಯಗಳ ಬಗ್ಗೆ ಪ್ರಬಂಧವನ್ನು ಮಂಡಿಸಿದರು.
ಇಲೆಕ್ಟ್ರಾನಿಕ್ಸ್ ಮತ್ತು ಕ,ಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಫ್ರೋ. ರಾಜಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ನವೀನ್ ಕಾಸಿಮ್ ಧನ್ಯವಾದವಿತ್ತರು. ಸೈಯ್ಯದ್ ಫಹಾದ್ ಕಾರ್ಯಕ್ರಮವನ್ನು ನಿರೂಪಿಸಿದರು.
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ