ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಾಂಡ್‌ಗಳ ಮೂಲಕ 6,565 ಕೋ.ರೂ. ಪಡೆದ ಬಿಜೆಪಿ ಕಾಂಗ್ರೆಸ್ ಪಡೆದದ್ದು ಕೇವಲ 1,123 ಕೋ.ರೂ.

ಬಾಂಡ್‌ಗಳ ಮೂಲಕ 6,565 ಕೋ.ರೂ. ಪಡೆದ ಬಿಜೆಪಿ ಕಾಂಗ್ರೆಸ್ ಪಡೆದದ್ದು ಕೇವಲ 1,123 ಕೋ.ರೂ.

Sun, 18 Feb 2024 08:04:22  Office Staff   Vb

ಯೋಜನೆ ಜಾರಿಗೆ ಬಂದ ನಂತರದ ಆರು ವರ್ಷ ಗಳಲ್ಲಿ, ಬಾಂಡ್‌ಗಳ ಮೂಲಕ ನೀಡಲಾದ ದೇಣಿಗೆಗಳ ಅರ್ಧಕ್ಕೂ ಹೆಚ್ಚಿನ ಹಣವನ್ನು ಬಿಜೆಪಿ ಪಡೆದಿದೆ.

ಚುನಾವಣಾ ಆಯೋಗದ ಘೋಷಣೆಗಳ ಪ್ರಕಾರ, 2018ರಿಂದ 2023ರವರೆಗೆ ಬಿಜೆಪಿಯು ಒಟ್ಟು 6,565 ಕೋಟಿ ರೂ.ವನ್ನು ಸ್ವೀಕರಿಸಿದೆ. ಭಾರೀ ಅಂತರದಿಂದ ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್‌ ಈ ಅವಧಿಯಲ್ಲಿ ಒಟ್ಟು 1,123 ಕೋ.ರೂ. ಸ್ವೀಕರಿಸಿದೆ. 2023-24ರ ಹಣಕಾಸು ವರ್ಷದ ರಾಜಕೀಯ ಪಕ್ಷಗಳ ನಿಧಿ ಸ್ವೀಕಾರ ಘೋಷಣೆಗಳನ್ನು ಚುನಾವಣಾ ಆಯೋಗ ಇನ್ನಷ್ಟೇ ಪ್ರಕಟಿಸಬೇಕಾಗಿದೆ. ಆದರೆ, 2018 ಮಾರ್ಚ್ ಮತ್ತು 2024 ಜನವರಿ ನಡುವಿನ ಅವಧಿ ಯಲ್ಲಿ ಒಟ್ಟು 16,518 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್‌ಗಳ ಖರೀದಿಯಾಗಿದೆ.

ಮೂರನೇ ಸ್ಥಾನದಲ್ಲಿರುವ ತೃಣಮೂಲ ಕಾಂಗ್ರೆಸ್ ಆರು ವರ್ಷಗಳ ಅವಧಿಯಲ್ಲಿ 1,093 ಕೋಟಿ ರೂ. ಮೊತ್ತದ ನಿಧಿಯನ್ನು ಚುನಾವಣಾ ಬಾಂಡ್‌ಗಳ ಮೂಲಕ ಸ್ವೀಕರಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಪಶ್ಚಿಮ ಬಂಗಾಳದಲ್ಲಿ 2011ರಿಂದ ಅಧಿಕಾರದಲ್ಲಿದೆ.

ಒಡಿಶಾದಲ್ಲಿ ಆಡಳಿತದಲಿರುವ ಬಿಜು ಜನತಾ ದಳ ಇದೇ ಅವಧಿಯಲ್ಲಿ 774 ಕೋಟಿ ರೂ.ಗಳ ದೇಣಿಗೆ ಪಡೆದಿದೆ.

ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಮ್‌ 2019-20 ರಿಂದ 2022-2023ರವರೆಗಿನ ಅವಧಿಯಲ್ಲಿ 617 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ.

ಭಾರತ ರಾಷ್ಟ್ರ ಸಮಿತಿಯು 384 ಕೋಟಿ ರೂ. ಪಡೆದರೆ, ತೆಲುಗು ದೇಶಮ್ ಪಕ್ಷವು 147 ಕೋಟಿ ರೂ.ಗಳ ನಿಧಿಯನ್ನು ಸ್ವೀಕರಿಸಿದೆ.

ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಆಮ್ ಆದ್ದಿ ಪಕ್ಷವು ಆರು ವರ್ಷಗಳ ಅವಧಿಯಲ್ಲಿ 94 ಕೋಟಿ ರೂ. ಮೊತ್ತದ ನಿಧಿಯನ್ನು ಚುನಾವಣಾ ಬಾಂಡ್‌ಗಳ ಮೂಲಕ ಪಡೆದಿದೆ.

ತಾನು 24 ಕೋಟಿ ರೂ. ದೇಣಿಗೆ ಪಡೆದಿರುವುದಾಗಿ ಬಿಹಾರದಲ್ಲಿ ಹಲವು ವರ್ಷಗಳಿಂದ ಅಧಿಕಾರದಲ್ಲಿರುವ ಜೆಡಿಯು ಘೋಷಿಸಿದೆ.


Share: