ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಸ್ ನಲ್ಲಿ ಚಿನ್ನದ ಸರ್ ಕಳ್ಳತನ: ಇಬ್ಬರು ಮಹಿಳೆಯರ ಬಂಧನ

ಬಸ್ ನಲ್ಲಿ ಚಿನ್ನದ ಸರ್ ಕಳ್ಳತನ: ಇಬ್ಬರು ಮಹಿಳೆಯರ ಬಂಧನ

Wed, 06 Mar 2024 08:06:35  Office Staff   SO News

 

ಭಟ್ಕಳ:ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ  ಶಿಕ್ಷಕಿಯೊರ್ವರ ಕೊರಳಲ್ಲಿದ್ದ ಚಿನ್ನದ ಸರವನ್ನು ಬುರ್ಖಾಧಾರಿ ಮಹಿಳೆಯರು ಕಳುವು ಮಾಡಿರುವ ಪ್ರಕರಣಕ್ಕೆ ಸಂಬಧಿಸಿದತೆ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ಭಟ್ಕಳ ನಗರ ಠಾಣೆ ಪೊಲೀಸರು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನ ಸಂದ್ಯಾ ಸಂಜಯ, ರಾಸಾತಿ ಮುರ್ಗೆ ಬಂಧಿತ ಮಹಿಳೆಯರು. ಪಟ್ಟಣದ ಸೋನಾರಕೇರಿಯ ಶಾಲೆಯ ಶಿಕ್ಷಕಿ ಪುಷ್ಪ ಕೃಷ್ಣ ನಾಯ್ಕ  ಇವರು ಕಳೆದ ತಿಂಗಳ 9 ರಂದು ತಮ್ಮ ಶಾಲೆ  ಮುಗಿಸಿ ಹೊನ್ನಾವರ ಕ್ಕೆ ತೆರಳಲು ಬಸ್ ಹತ್ತುವ  ಸಂದರ್ಭದಲ್ಲಿ ಹಿಂಬದಿಯಲ್ಲಿ ಬಂದಿದ್ದ ಇಬ್ಬರು ಬುರ್ಕಾಧಾರಿ ಹೆಂಗಸರು ಶಿಕ್ಷಕಿ ಕೊರಳಲ್ಲಿದ್ದ ಚಿನ್ನದ  ಸರ ಕಿತ್ತುಕೊಂಡು ಪರಾರಿಯಾಗಿದ್ದು, ಈ ಕುರಿತು ಭಟ್ಕಳ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  
ಇಷ್ಟೆ ಅಲ್ಲದೆ ಅದೆ ದಿನ ಕುಮಟಾ, ಹೊನ್ನಾವರ ಸೇರಿದಂತೆ ವಿವಿದೆಡೆ ಅಂತಹುದೆ ಪ್ರಕರಣಗಳು ದಾಖಲಾಗಿತ್ತು. ಇದರ ಜಾಡು ಹಿಡಿದ ಜಿಲ್ಲೆಯ ಪೊಲೀಸರು ಕುಮಟಾ ಬಸ್ ನಿಲ್ದಾಣದ ಸಿಸಿಟಿವಿ ಪೂಟೇಜ್ ಅನ್ನು ಬಿಡುಗಡೆ ಮಾಡಿದ್ದರು. ತಿಂಗಳ ಬಳಿಕ ಮತ್ತೆ ಅದೆ ಮಹಿಳೆಯರು ಮತ್ತೆ ಅಂತಹ ಕೃತ್ಯಕ್ಕೆ ಹೊಂಚು ಹಾಕಿ ನಿಂತಿದ್ದಾಗ ಕುಮಟಾದಲ್ಲಿ ಬಸ್ ಚಾಲಕ, ನಿರ್ವಾಹಕರು ಇವರ ಮೇಲೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರು ಬುರ್ಖಾದಾರಿ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪಿಂಗರ್ ಪ್ರಿಂಟ್ ಆಧಾರದಲ್ಲಿ ಮಹಿಳೆಯರ ಕಳ್ಳತನ ದೃಡಪಟ್ಟಿದೆ. ಬಳಿಕ ಭಟ್ಕಳದ ಪ್ರಕರಣವೂ ಹೊರಬಿದಿದ್ದು ಹೆಚ್ಚಿನ ತನಿಖೆಗಾಗಿ ಭಟ್ಕಳಕ್ಕೆ ಕರೆತಂದು ವಿಚಾರಣೆ ನಡೆಸಿದ್ದಾರೆ. 
ಈ ಮಹಿಳೆಯರ ವಿರುದ್ದು ಈಗಾಗಲೆ ಹಾಸನ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಳಲ್ಲಿ ಪ್ರಕರಣ ನಡೆಯುತ್ತಿವೆ ಎನ್ನಲಾಗಿದೆ.


Share: