ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮೂಡಿಗೆರೆ: ಮನೆಬಾಡಿಗೆ ನೀಡಲು ಅಣ್ಣನ ಕೊಲೆ

ಮೂಡಿಗೆರೆ: ಮನೆಬಾಡಿಗೆ ನೀಡಲು ಅಣ್ಣನ ಕೊಲೆ

Wed, 07 Oct 2009 02:57:00  Office Staff   S.O. News Service
ಮೂಡಿಗೆರೆ, ಅ.6: ಸಹೋದರನನ್ನೇ ಕೊಲೆ ಮಾಡಿದ ಆರೋಪದಲ್ಲಿ ಓರ್ವ ಮಹಿಳೆ ಹಾಗೂ ಆಕೆಯ ಗಂಡನನ್ನು ಮೂಡಿಗೆರೆ ಪೊಲೀಸರು ಬಂಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮೃತರನ್ನು ಹ್ಯಾಂಡ್ ಪೋಸ್ಟ್‌ನ ದಾರದಹಳ್ಳಿ ಕ್ರಾಸ್ ನಿವಾಸಿ ಕೃಷ್ಣ(40) ಎಂದು ಗುರುತಿಸ ಲಾಗಿದ್ದು, ಇವರನ್ನು  ಕೊಲೆ ಮಾಡಿದ ಆರೋಪದಲ್ಲಿ ಇವರ ಸಹೋದರಿ ಪುಷ್ಪಾ ಹಾಗೂ ಆಕೆಯ ಪತಿ ಚಳ್ಳಕೆರೆ ನಿವಾಸಿ ಮೋನಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಪುಷ್ಪಾ ತನ್ನ ಅಣ್ಣನ ಮನೆ ಸಮೀಪದಲ್ಲೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಪುಷ್ಪಾಳಿಗೆ ಮನೆಯ ಬಾಡಿಗೆ ನೀಡಲು ಕಷ್ಟವಾದುದುರಿಂದ ಅಣ್ಣ ಮನೆಯನ್ನು ಲಪಟಾಯಿಸುವ ಉದ್ದೇಶದಿಂದ ಪತಿ ಮೋನಪ್ಪನೊಂದಿಗೆ ಸೇರಿ ಈ ಕೊಲೆ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮದ್ಯವ್ಯಸನಿಯಾಗಿದ್ದ ಕೃಷ್ಣ  ಕಳವು ಕೃತ್ಯವನ್ನೂ ನಡೆಸುತ್ತಿದ್ದ ಎನ್ನಲಾಗಿದ್ದು, ಇದನ್ನೆ ಬಂಡವಾಳವಾಗಿಸಿಕೊಂಡ ಆರೋಪಿಗಳು 2009 ರ ಸಪ್ಟೇಂಬರ್ 27ರಂದು ರಾತ್ರಿ ಸಮೀಪವಿರುವ ತೋಟದಲ್ಲಿರುವ ಬಾಳೆಹಣ್ಣು ಕದಿಯಲು ಕರೆದು ಕೊಂಡು ಹೋಗಿ  ರಾತ್ರಿ 11.30 ರ ಸುಮಾರಿಗೆ ಕತ್ತಿಯಿಂದ ಕುತ್ತಿಗೆ ಕಡಿದು ಕೊಲೆ ಮಾಡಿ ಶವವನ್ನು  ತೋಟದಲ್ಲಿಯೇ ಬಿಟ್ಟು ಬಂದಿದ್ದರು.

2 ದಿನಗಳ ನಂತರ ಮೂಡಿಗೆರೆ ಪೊಲಿಸರಿಗೆ ದಾರಿ ಹೊಕರೋರ್ವರು ತೊಟದ ಕಾಲು ದಾರಿಯಲ್ಲಿ ಕೊಲೆಯಾದ ಕೃಷ್ಣನ ಶವವಿರುವುದನ್ನು ತಿಳಿಸಿದರು.

ಕೂಡಲೇ ಸ್ಥಳಕ್ಕಾಗಿಮಿಸಿ ಪರಿಶೀಲನೆ ನಡೆಸಿದ ಪೊಲಿಸರಿಗೆ ಕೊಲೆಗಾರರ ಸುಳಿವು ದೊರೆತಿರ ಲಿಲ್ಲ. ನಿರಂತರ ವಿಚಾರಣೆ ಹಾಗೂ ತನಿಖೆಯ ಬಳಿಕ ಪೊಲೀಸರಿಗೆ ಕೊಲೆಯಲ್ಲಿ ಕೃಷ್ಣನ ತಂಗಿಯ ಪಾತ್ರವಿರುವ ಸುಳಿವು ದೊರೆಯಿತೆನ್ನಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಎನ್. ನಾಗರಾಜ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಮುತ್ತುರಾಯ, ಉಪಾಧಿಕ್ಷಕ ಪುಟ್ಟಮಾದಾ ಯ್ಯರ ಮಾರ್ಗದರ್ಶನದಲ್ಲಿ ಮೂಡಿಗೆರೆ ವೃತ್ತ ನಿರೀಕ್ಷಕ ಜಿ.ಟಿ.ಸ್ವಾಮಿ, ಠಾಣಾಧಿಕಾರಿ ಎ.ಶಿವಲಿಂಗಯ್ಯ ನೇತೃತ್ವದಲ್ಲಿ ಕೃಷ್ಣಮೂರ್ತಿ, ರುದ್ರೇಶ್, ಮಹಿಳಾ ಪೇದೆ ಪವಿತ್ರಾ, ವೈಟಿ ಮಂಜುನಾಥ್ ಆರೋಪಿಗಳನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

Share: