ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಂಗಾರದ ಅಂಗಡಿ ಕಳ್ಳತನ ಮಾಡಿದ ಕುಖ್ಯಾತ ಕಳ್ಳರ ಬಂಧನ.

ಬಂಗಾರದ ಅಂಗಡಿ ಕಳ್ಳತನ ಮಾಡಿದ ಕುಖ್ಯಾತ ಕಳ್ಳರ ಬಂಧನ.

Sun, 19 May 2024 03:50:47  Office Staff   SO News

ಹೊನ್ನಾವರ :  ಉತ್ತರಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಏಪ್ರಿಲ್ 30ರಂದು ಮಂಕಿಯ ಗುಳದಕೇರಿಯಲ್ಲಿರುವ
ಭವಾನಿ ಕಾಂಪ್ಲೆಕ್ಷನಲ್ಲಿರುವ ಅಣ್ಣಪ್ಪ ಪ್ರಭಾಕರ ಶೇಟ್ ಅವರ ಶ್ರೀ ಕಾಮಾಕ್ಷಿ ಜ್ಯೂವೆಲ್ಲರ್ಸ್ ಅಂಗಡಿಯಲ್ಲಿ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ದೂರು ದಾಖಲಾಗಿ ಪೊಲೀಸರು ತನಿಖೆ ನಡೆಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಏಳು ಜನ ಕಳ್ಳರನ್ನು ಬಂಧಿಸಿ ಬಂಧಿತರಿಂದ  230 ಗ್ರಾಂ ತೂಕದ ಗಟ್ಟಿ ಬಂಗಾರ ಹಾಗೂ ಬಂಗಾರದ ಆಭರಣಗಳು 05 ಕೆ,ಜಿ ಬೆಳ್ಳಿಯ ಆಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಸ್ಕೂಟರ್ ಮತ್ತು ಕೃತ್ಯಕ್ಕೆ ಬಳಸಿದ ಆಯುಧ/ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ 13,30,050 ರೂ ಆಗಿದೆ.  ಭಟ್ಕಳ ಗ್ರಾಮಾಂತರ ವೃತ್ತ ಸಿಪಿಐ ಮತ್ತು ಮಂಕಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿಯಾಗಿ ಪ್ರಕರಣ ಭೇದಿಸಿದೆ.


Share: