ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪ್ರವಾದಿ ನಿಂದನೆ ಯತಿ ನರಸಿಂಹನಂದ ಸ್ವಾಮಿ ವಿರುದ್ಧ ದೂರು ದಾಖಲು

ಪ್ರವಾದಿ ನಿಂದನೆ ಯತಿ ನರಸಿಂಹನಂದ ಸ್ವಾಮಿ ವಿರುದ್ಧ ದೂರು ದಾಖಲು

Tue, 15 Oct 2024 00:55:41  Office Staff   SOnews

ಭಟ್ಕಳ: ಇತ್ತಿಚೆಗೆ ಉತ್ತರಪ್ರದೇಶದ ಯತಿ ನರಸಿಂಹನಂದಾ ಸರಸ್ವತಿ ಎಂಬುವವರು ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಅವಹೇಳನ ಮಾಡಿದ್ದು ಆತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಯುಎಪಿಎ ಮತ್ತು ಎನ್.ಎಸ್.ಎ ಕಾಯ್ದೆಯಡಿ ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿ ಭಟ್ಕಳದ ನಗರ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.

ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ನೇತೃತ್ವದಲ್ಲಿ ಭಟ್ಕಳದ ವಿವಿಧ ಸಂಘಸಂಸ್ಥೆಗಳ ಮುಖಂಡರ ನಿಯೋಗವೊಂದು ಸೋಮವಾರ ಭಟ್ಕಳ ನಗರ ಠಾಣೆಗೆ ಭೇಟಿ ನೀಡಿ ಯತಿ ನರಸಿಂಹನಂದಾ ಸ್ವಾಮಿಯ ವಿರುದ್ಧ ದೂರನ್ನು ದಾಖಲಿಸಿದರು.

ಈ ಸಂದರ್ಭದಲ್ಲಿ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಹಾಗೂ ವಿವಿಧ ಜಮಾಅತ್ ನ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

 


Share: