ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ಇಸ್ಪೀಟ್ ಅಡ್ಡೆಯ ಮೇಲೆ ದಾಳಿ: ಏಳು ಮಂದಿ ಬಂಧಿಸಿ,ಬಿಡುಗಡೆ

ಭಟ್ಕಳ:ಇಸ್ಪೀಟ್ ಅಡ್ಡೆಯ ಮೇಲೆ ದಾಳಿ: ಏಳು ಮಂದಿ ಬಂಧಿಸಿ,ಬಿಡುಗಡೆ

Thu, 21 Jan 2010 15:45:00  Office Staff   S.O. News Service
ಭಟ್ಕಳ, ಜನವರಿ 21:ಮುರ್ಡೇಶ್ವರದಲ್ಲಿ ಅಂದರ ಬಾಹರ್ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿದ ಸಿ ಪಿ ಐ ಗುರು ಮಾಥೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಿ ಅವರಿಂದ ನಗದು ಹಣವನ್ನು ವಶಪಡಿಸಿಕೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ.
 
ಬಂಧಿತರನ್ನು ಇಡಗುಂಜಿಯ ಮಂಜುನಾಥ ಲಕ್ಷ್ಮಣ ನಾಯ್ಕ, ಬಸ್ತಿಯ ಸತೀಶ ವೆಂಕಟೇಶ ಆಚಾರಿ, ನ್ಯಾಶನಲ್ ಕಾಲೋನಿಯ ಹೈದರಲಿ, ಮರವೆಂತೆಯ ಹನೀಪ ಅಬ್ಬಾಕ್, ಚಂದ್ರ ಹಿತ್ಲಿನ ಮಾದೇವ ಕುಪ್ಪಯ್ಯ ನಾಯ್ಕ, ಉಪ್ಪುಂದದ ಹಮ್ಮೀದ್ ಹುಸೇನ್ ಬ್ಯಾರಿ, ಮಹ್ಮದ್ ಹಮ್ಮೀದ್ ಬ್ಯಾರಿ ಎಂದು ಹೇಳಲಾಗಿದೆ. ಇವರು ನಿನ್ನೆ ರಾತ್ರಿ ಮುರ್ಡೇಶ್ವರದಲ್ಲಿ ಯಾತ್ರಿ ಹೊಟೆಲ್ ಸನಿಹದ ಖಾಲಿ ಜಾಗದಲ್ಲಿ ಬೀದಿ ದೀಪದ ಬೆಳಕಿನಲ್ಲಿ ಇಸ್ಪೀಟ್ ಎಲೆ ಬಳಸಿ ತಮ್ಮ ಲಾಭಕ್ಕೋಸ್ಕರ ಅಂದರ ಬಾಹರ್ ಜುಗಾರಿ ಆಟ ಆಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ಸಿಪಿ‌ಐ ಗುರು ಮಾಥೂರು ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿತರನ್ನು ಬಂಧಿಸಿದೆ. ಬಂಧಿತರಿಂದ ೩೮೦೦ ರೂ ನಗದು ಹಣ, ಎರಡು ನೋಕಿಯಾ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಮುರ್ಡೇಶ್ವರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ನಿನ್ನೆ ರಾತ್ರಿಯೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.


Share: