ಮಂಗಳೂರು , ಡಿಸೆಂಬರ್ 17:ದಾದಿಯರ ವೃತ್ತಿ ಘನತೆ ಮತ್ತು ಗೌರವಾನ್ವಿತ ಹಿನ್ನೆಲೆಯ ವೃತ್ತಿಯಾಗಿದ್ದು ಅತ್ಯುನ್ನತ ಜವಾಬ್ದಾರಿಯಿಂದ ಕಾರ್‍ಯ ನಿರ್ವಹಿಸಿ, ತಮ್ಮ ವೃತ್ತಿಯನ್ನು ಸೇವೆ ಹಾಗೂ ಕರ್ತವ್ಯವೆಂದು ಪರಿಗಣಿಸಿ ಅಸ್ವಸ್ಥರ ಆರೈಕೆಗೆ ಶಕ್ತಿ ಮೀರಿ ಶ್ರಮಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ| ಮೋಹನದಾಸ ಭಂಡಾರಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ನಗರದ ಶ್ರೀದೇವಿ ನರ್ಸಿಂಗ್ ಕಾಲೇಜಿನ ತಾ| 17-12-2009 ರಂದು ಜರಗಿದ ದೀಪ ಪ್ರಜ್ವಲನಾ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಸೂದ್ ನರ್ಸಿಂಗ್ ಮಹಾವಿದ್ಯಾಲಯದ ಪ್ರಾಂಶುಪಾಲೆಯಾದ ಪ್ರೊ.| ವೀಣಾ ಗ್ರೆಟ್ಟಾ ತಾವರೊ ಅವರು ಶುಶ್ರೂಕಿಯರು ಫ್ಲೋರೆನ್ಸ್ ನೈಟಿಂಗೇಲ್‌ನ ಆದರ್ಶ, ನೀತಿ ಧ್ಯೇಯವನ್ನು ಪಾಲಿಸಿ ಶ್ರಧ್ಧೆ, ಸಹನೆ, ತಾಳ್ಮೆ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸುವ ಸಂಕಲ್ಪ ತಾಳಬೇಕು ಎಂದು ಹಿತವಚನ ನೀಡಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು.
ಪ್ರಾಂಶುಪಾಲೆ ಶ್ರೀಮತಿ ಬಿಬಿಯಾನ ವಿಜಯ್ ಅವರು ನೂತನ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿವಿದಾನವನ್ನು ನೆರವೇರಿಸಿದರು. ಶ್ರೀದೇವಿ ಶಿಕ್ಞಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸದಾನಂದ ಶೆಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ನಿಧೀಶ್ ಶೆಟ್ಟಿ, ಕಾರ್ಯದರ್ಶಿ ಶ್ರೀಮತಿ ಮೈನಾ ಶೆಟ್ಟಿ ಹಾಗೂ ನಿಕ್ಷೇಪ್ ಶೆಟ್ಟಿ ಉಪಸ್ಥಿತರಿದ್ದರು. ಹರಿಕೃಷ್ಣನ್ ಮತ್ತು ಕು| ಪೂರ್ಣರಾಣಿ ನಿರೂಪಿಸಿದ ಕಾರ್‍ಯಕ್ರಮದಲ್ಲಿ ಗಿರೀಶ್ ಧನ್ಯವಾದ ನೀಡಿದರು.
ಚಿತ್ರ, ವರದಿ: ಎಂ.ವಸಂತ ಮಲ್ಯ, ಮಂಗಳೂರು.