ಭಟ್ಕಳ, ಡಿಸೆಂಬರ್ 20:ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಭಟ್ಕಳ ಘಟಕದ ವತಿಯಿಂದ ನೂತನವಾಗಿ ಆರಂಭಿಸಲಾದ ಭಟ್ಕಳ-ಬೆಂಗಳೂರು ಮಾರ್ಗದ ಸುಖಾಸೀನ ವೋಲ್ವೋ ಬಸ್ಸಿಗೆ ಶಾಸಕ ಜೆ.ಡಿ.ನಾಯ್ಕ ಹಸಿರು ನಿಶಾನೆ ತೋರಿಸುವುದರ ಮೂಲಕ ಶುಭ ಕೋರಿದರು.
ಈ ಸಂದರ್ಭದಲ್ಲಿ ಆಸೀನ ಮುಂಗಡಕ್ಕೆ ಪರವಾನಿಗೆಯನ್ನು ಪಡೆದಿರುವ ಬಾಬಾನಂದ ಪೈ, ಮೌಲಾನಾ ಇಕ್ಬಾಲ್ ಮುಲ್ಲಾ, ಫಾದರ್ ಅಲ್ಫಾನ್ಸೋ, ಮೌಲಾನಾ ಅಬ್ದುಲ್ ಬಾರಿ, ಇನಾಯಿತುಲ್ಲಾ ಶಾಬಂದ್ರಿ ಮುಂತಾದವರು ಉಪಸ್ಥಿತರಿದ್ದರು.