ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪತಂಜಲಿ ವಿರುದ್ಧ ಮೌನ ವಹಿಸಿದ್ದ ಕೇಂದ್ರ ಸರಕಾರಕ್ಕೂ ಸುಪ್ರೀಂ ತರಾಟೆ

ಪತಂಜಲಿ ವಿರುದ್ಧ ಮೌನ ವಹಿಸಿದ್ದ ಕೇಂದ್ರ ಸರಕಾರಕ್ಕೂ ಸುಪ್ರೀಂ ತರಾಟೆ

Thu, 04 Apr 2024 01:54:13  Office Staff   Vb

ಹೊಸದಿಲ್ಲಿ: ತನ್ನ ಉತ್ಪನ್ನಗಳು ಕೋವಿಡ್ -19 ಸೋಂಕುರೋಗವನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆಯೆಂದು ಘೋಷಿಸಿಕೊಂಡಿದ್ದ ಪತಂಜಲಿ ಆಯುರ್ವೇದ ಸಂಸ್ಥೆಯ ವಿರುದ್ದ ಕೇಂದ್ರ ಸರಕಾರವು ಯಾಕೆ ಯಾವುದೇ ಕಾನೂನು ಕ್ರಮವನ್ನು ಕೈಗೊಂಡಿಲ್ಲವೆಂದು ಪ್ರಶ್ನಿಸಿದೆ.

ಕೋವಿಡ್ ಸೋಂಕಿಗೆ ಸಂಬಂಧಿಸಿ ಪತಂಜಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಉತ್ಪನ್ನಗಳನ್ನು ಇತರ ಔಷಧಿಗಳ ಜೊತೆ ಪೂರಕವಾಗಿ ಮಾತ್ರವೇ ತೆಗೆದುಕೊಳ್ಳಬಹುದೆಂದು ಆಯುಷ್ ಇಲಾಖೆಯ ಸಮಿತಿಯು ವರದಿ ನೀಡಿದ್ದರೂ, ಕೇಂದ್ರ ಸರಕಾರ ಪತಂಜಲಿಯ ಘೋಷಣೆಗಳ ಬಗ್ಗೆ ಯಾವುದೇ ಕಾನೂನುಕ್ರಮ ಕೈಗೊಂಡಿಲ್ಲವೆಂದು ನ್ಯಾಯಪೀಠ ತಿಳಿಸಿತು.

ಅಲೋಪಥಿ ಔಷಧಿಯನ್ನು ಟೀಕಿಸುವ ಹಾಗೂ ತನ್ನ ಉತ್ಪನ್ನಗಳು ಕೆಲವು ನಿರ್ದಿಷ್ಟ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿವೆಯೆಂದು ಘೋಷಿಕೊಂಡಿರುವ ಪತಂಜಲಿ ಸಂಸ್ಥೆಯ ವಿರುದ್ದ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆಯೆಂಬ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂಕೋರ್ಟ್ ನ್ಯಾಯಪೀಠವು ಕೇಂದ್ರ ಸರಕಾರಕ್ಕೆ ಫೆ.27ರಂದು ನೋಟಿಸ್ ಜಾರಿಗೊಳಿಸಿತ್ತು. ಮಾರ್ಚ್ 19ರ ಆಲಿಕೆಯ ಸಂದರ್ಭದಲ್ಲಿ ಕೇಂದ್ರ ಸರಕಾರವು ಇನ್ನೂ ಅಫಿಡವಿಟ್ ಸಲ್ಲಿಸದೆ ಇರುವ ಬಗ್ಗೆ ಗಮನಸೆಳೆದ ನ್ಯಾಯಾಲಯವು ಈ ಬಗ್ಗೆ ಪ್ರತಿ ಅಫಿಡವಿಟ್ ಸಲ್ಲಿಸುವುದಕ್ಕೆ ಕೊನೆಯ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಆಯುಷ್ ಸಚಿವಾಲಯವು ಮಂಗಳವಾರ 42 ಪುಟಗಳ ಅಫಿಡವಿಟ್ ಸಲ್ಲಿಸಿತ್ತು.


Share: