ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಟ್ಟಣ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ 2 ಗರಿಗೆದರಿದ ಚುನಾವಣೆ:

ಪಟ್ಟಣ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ 2 ಗರಿಗೆದರಿದ ಚುನಾವಣೆ:

Mon, 19 Aug 2024 01:39:30  Office Staff   Nazeer Tadapatri

ಮುಂಡಗೋಡ : ಮುಂಡಗೋಡ ಪಟ್ಟಣ ಪಂಚಾಯತ್ ಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ  ಮಂಗಳವಾರ ದೊಳಗೆ ಮುಗಿಸ ಬೇಕೆಂದು ಡಿ.ಸಿ ಯವರು ಪಟ್ಟಣ ಪಂಚಾಯತ್‍ಗೆ ನೋಟಿಸ್ ಕೊಟ್ಟಿದ್ದಾರೆ.

ಪಟ್ಟಣ ಪಂಚಾಯತ್ ಬಲಾಬಲ ಬಿಜೆಪಿ 10 ಸ್ಥಾನ ಹಾಗೂ ಕಾಂಗ್ರೆಸ್ 9 ಸ್ಥಾನಗಳು ಪಡೆದಿವೆ. ಒಂದನೆ ಅವಧಿಗೆ ಪಟ್ಟಣ ಪಂಚಾಯತಲ್ಲಿ ಬಿಜೆಪಿ ಪ್ರಾಭಲ್ಯ ಹೊಂದಬೇಕು ಎಂದು ಆ ಸಮಯದಲ್ಲಿ ಶಾಸಕ ಶಿವರಾಮ ಹೆಬ್ಬಾರ ನಿರ್ದೇಶನ ಮೇರೆ  4 ಕಾಂಗ್ರೆಸ್ ಸದಸ್ಯರು  ಬಿಜೆಪಿ ಗೆ ಬೆಂಬಲ ನೀಡುತ್ತಾ ಬಂದಿದ್ದರು. ಬದಲಾದ ರಾಜಕೀಯ ಮೇಲಾಟದಲ್ಲಿ ಕೆಲ ಬಿಜೆಪಿ ಸದಸ್ಯರು ಕಾಂಗ್ರೆಸ್‍ಗೆ ಬೆಂಬಲ ನೀಡಲು ಸಿದ್ದರಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ಬಿಜೆಪಿಗೆ ಬೆಂಬಲ ಸೂಚಿಸಿದ್ದವರಲ್ಲಿ 3 ಜನರು ಮಾತೃಪಕ್ಷಕ್ಕೆ ಮರಳಿದ್ದಾರೆ. ಕಟ್ಟಾ ಬಿಜೆಪಿ ಎಂದು ಗುರುತಿಸಿಕೊಂಡ ಬಿಜೆಪಿ ಪ.ಪಂ ಸದಸ್ಯರು ಹೆಬ್ಬಾರ ನಿರ್ದೇಶನ ಮೆರೆಗೊ ಇಲ್ಲ ತಮ್ಮ ಮನೋಸ್ಥಿತಿ ಬದಲಾವಣೆ ಮಾಡಿಕೊಂಡು ಈಗ 2ನೇ ಅವಧಿಗೆ ಕಾಂಗ್ರೆಸ್‍ನ ಪ.ಪಂ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಕೂಡಲಿ ಎಂಬ ಔಧಾರ್ಯ ತೋರಿ  ಕಾಂಗ್ರೆಸ್‍ಗೆ ಕೆಲ ಬಿಜೆಪಿ ಸದಸ್ಯರು ಮನಸ್ಸು ಬದಲಾವಣೆ ಮಾಡಿಕೊಂಡಿದ್ದಾರೆ ಎಂಬ ಬಲವಾದ ಆಧಾರ ಗೊತ್ತಾಗಿದೆ.

ಇದಕ್ಕೆ ಪುಷ್ಠಿನೀಡುವಂತೆ ಭಾನುವಾರ ಬಿಜೆಪಿ ಕೆಲ ಸದಸ್ಯರು ಹಾಗೂ ಎಲ್ಲ ಕಾಂಗ್ರೆಸ್ ಸದಸ್ಯರು ಶಾಸಕ ಶಿವರಾಮ ಹೆಬ್ಬಾರ ಕಚೇರಿಯಲ್ಲಿ ಕಂಡು ಬಂದಿದ್ದಾರೆ.

9 ಕಾಂಗ್ರೆಸ್ ಸದಸ್ಯರಲ್ಲಿ ಸುವರ್ಣ ಕೊಟಗೊಣಸಿ ಮಾತ್ರ ಗೈರಾಗಿದ್ದು ಕಂಡು ಬಂದಿತು. ಬಿಜೆಪಿಯಿಂದ ಕುಸುಮಾ ಎನ್. ಹಾವಣಗಿ (ಅಧ್ಯಕ್ಷ-ಉಪಾಧ್ಯಕ್ಷ ಗಾದಿ ಪ್ರಭಲ ಅಕಾಂಕ್ಷಿ) ಫಣಿರಾಜ ಹದಳಗಿ, ಜಯಸುಧಾ ಭೋವಿ, ಶೇಖರ ಲಮಾಣಿ, ಕಾಂಗ್ರೆಸ್‍ನ ರಹೀಮಾ ಬಾನು ಆರ್. ಕುಂಕೂರ (ಅಧ್ಯಕ್ಷ-ಉಪಾಧ್ಯಕ್ಷ ಗಾದಿ ಪ್ರಭಲ ಅಕಾಂಕ್ಷಿ),  ಬಿಬಿ ಜಾನ ಮುಲ್ಲಾನವರ, ಮಹ್ಮದಗೌಸ ಮಕಾನದಾರ, ಮಹ್ಮದಜಾಫರ ಹಂಡಿ, ಅಹ್ಮದರಜಾ ಪಠಾಣ, ನಿರ್ಮಲಾ ಬೆಂಡಲಗಟ್ಟಿ, ಶಿವರಾಜ ಸುಬ್ಬಾಯರ, ಪವಾಡಶೆಟ್ಟರ ಒಟ್ಟು 12 ಜನರು ಕಾಂಗ್ರೆಸ್‍ಗೆ ಬೆಂಬಲ ನೀಡಲು ಮುಂದಾಗಿರುವುದು ಕಂಡುಬಂದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ 12 ಪ.ಪಂ ಸದಸ್ಯರು ಶಾಸಕ ಶಿವರಾಮ ಹೆಬ್ಬಾರ, ಮಾಜಿ  ಶಾಸಕ ವಿ.ಎಸ್.ಪಾಟೀಲ, ವಿವೇಕ ಹೆಬ್ಬಾರ, ಜ್ಞಾನೇಶ್ವರ ಗುಡಿಯಾಳ, ಗೋಪಾಲ ಪಾಟೀಲ ಸಿದ್ದಪ್ಪ ಹಡಪದ , ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ಕೃಷ್ಣ ಹಿರಳ್ಳಿ, ಕೆಂಜೋಡಿ ಗಲಿಬಿ ಫೋಟೊ ಶೂಟ್ ಮಾಡಿಸಿಕೊಂಡಿರುವುದು ಜಗಜಾಹೀರವಾಗಿದೆ.

ಶತಾಯ ಗತಾಯ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ನಿಷ್ಠೆಯುಳ್ಳವರಿಗೆ ಯಾವುದೇ ಆಸೆ ಅಕಾಂಕ್ಷೆಗಳಿಗೆ ಒಳಗಾಗದವರಿಗೆ ಕಾಂಗ್ರೆಸ್ ನ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನ ನೀಡಲೇ ಬೇಕು ಎಂದು ಕಾಂಗ್ರೆಸ್ ನಾಯಕರು ಧುರೀಣರು ಹಾಗೂ ಪ.ಪಂ ಸದಸ್ಯರಲ್ಲಿ ನಿಷ್ಠೆಯುಳ್ಳವರು ತಮ್ಮ ನಾಯಕರಿಗೆ ಒತ್ತಾಯ ಮಾಡಿದ್ದಾರೆ. ತಮ್ಮ ಕಾಂಗ್ರೆಸ್ ಪಕ್ಷದ ರಹೀಮಾಬಾನುವರೆಗೆ ಅಧ್ಯಕ್ಷ ನೀಡಬೇಕೆಂದು ಕಾಂಗ್ರೆಸ್ ಐದು ಅಲ್ಪಸಂಖ್ಯಾತ ಸದಸ್ಯರು ಗುಲಬರ್ಗಾಕ್ಕೆ ತೆರಳಿ ಹಜರತ್ ಖ್ವಾಝಾ ಬಂದೆನವಾಜ ಶರೀಫ್ ರಲ್ಲಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಒಬ್ಬರು ಹೋಗಿರುವುದು ಸತ್ಯ ಎಂದು ತಿಳಿಸಿದ್ದಾರೆ.

ಮುಂಡಗೋಡ ಪಟ್ಟಣ ಪಂಚಾಯತ್‍ಗೆ “ಸಾಮನ್ಯ” ಮಹಿಳೆಗೆ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನ “ಅ”  ವರ್ಗ ಮಹಿಳೆಗೆ  ನಿಗದಿಯಾಗಿದೆ.

ಆದ್ದರಿಂದ ಅಧ್ಯಕ್ಷ ಸ್ಥಾನದ ಪ್ರಭಲ ಅಕಾಂಕ್ಷಿಗಳಾಗಿರುವ ಬಿಜೆಪಿಯಿಂದ ಕಾಂಗ್ರೆಸ್‍ಗೆ ಬೆಂಬಲ ನೀಡಲು ಮುಂದಾಗಿರುವ ಕುಸುಮಾ ಹಾವಣಗಿ ಹಾಗೂ ಕಾಂಗ್ರೆಸ್‍ನ ಅತ್ಯಂತ ನಿಷ್ಠೆಯುಳ್ಳ ರಹೀಮಾಬಾನು ಕುಂಕೂರ ಮಧ್ಯ ಪೈಪೋಟಿ ನಡೆಯಲಿದೆ. ಇಬ್ಬರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ದೊರೆತರೆ ಮತ್ತೊಬ್ಬರಿಗೆ ಉಪಾಧ್ಯಕ್ಷ ಸ್ಥಾನ ನಿರಾಯಾಸವಾಗಿ ದೊರೆಯಲಿದೆ.

ಆದರೆ ಏನೇ ಆದರೂ  ಅಧ್ಯಕ್ಷ ಸ್ಥಾನ ಶಿವರಾಮ ಹೆಬ್ಬಾರ ನಿರ್ದೇಶನ ಮೆರೆಗೆ ನಿಗದಿಯಾಗಲಿದೆ. ಅಧ್ಯಕ್ಷ- ಉಪಾಧ್ಯಕ್ಷ  ಸ್ಥಾನ ಯಾರು ಗಾದಿಗೆ ಏರಲಿದ್ದಾರೆ ಎಂಬುದನ್ನು ಮಂಗಳವಾರ ವರೆಗೆ ಕಾಯುವುದು ಎಲ್ಲರಿಗೂ ಅನಿವಾರ್ಯವಾಗಿದೆ.
ಒಟ್ಟಾರೆಯಾಗಿ ಹೇಳಬೇಕಾದರೆ ಶಾಸಕ ಶಿವಾರಾಮ ಹೆಬ್ಬಾರ ರಚಿಸಿದ ಚಕ್ರವ್ಯೂಹ ದೊಳಗೆ  ನಾಲ್ಕು ಬಿಜೆಪಿ ಪ.ಪಂ ಸದಸ್ಯರು ಹಾಗೂ ಬಿಜೆಪಿಗೆ ಬೆಂಬಲ ನೀಡಿದ 3 ಕಾಂಗ್ರೆಸ್ ಸದಸ್ಯರು ಸಿಲುಕಿಸಿದ್ದರಿಂದ ಮುಂಡಗೋಡ ಪಟ್ಟಣ ಪಂಚಾಯತ್ ರಾಜಕೀಯ ಚದುರಂಗದಾಟದಲ್ಲಿ ಶಾಸಕ ಶಿವರಾಮ ಹೆಬ್ಬಾರ ಕೈ ಮೇಲಾಗಲಿದೆ. 
 
ಶಾಸಕ ಶಿವರಾಮ ಹೆಬ್ಬಾರ ಕೈ ಮೇಲಾಗಲಿದೆ ಎಂದು ಸಾಗರ ಸಾಮ್ರಾಟ್ ಪತ್ರಿಕೆ ಅಗಷ್ಟ 14 ರಂದು ರಾಜಕೀಯ ವಿಶ್ಲೇಷಣೆ ಮಾಡಿ ಮುಂದಾಗಬಹುದಾದ ರಾಜಕೀಯ ಮೇಲಾಟಗಳ ಕುರಿತು “ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ: ಸಂಸದ ಕಾಗೇರಿ - ಹೆಬ್ಬಾರ ನಡುವೆ ಮೊದಲ ಹಣಾಹಣಿಯೇ” ಎಂಬ ತಲೆ ಬರಹದಡಿಯಲ್ಲಿ ಪ್ರಕಟಿಸಿತ್ತು. ಶಾಸಕ ಶಿವರಾಮ ಹೆಬ್ಬಾರ ಯಾವ ಪಕ್ಷಕ್ಕೆ ಮೃದುಧೋರಣೆ ತಾಳುತ್ತಾರೋ ಆ ಪಕ್ಷದ ಪ.ಪಂ ಸದಸ್ಯ ಅಧ್ಯಕ್ಷ ಗಾದಿ ಏರುತ್ತಾರೆ. ಚುನಾವಣೆಯಲ್ಲಿ ಸೋಲುವ ಹಂತದಲ್ಲಿದ್ದರು ಆಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಾರೆ ಇದನ್ನು ಅವರು ಮೈಗೊಡಿಸಿಕೊಂಡಿರುವ ರಾಜಕಾರಣಿ. ಪ.ಪಂ ಅಧ್ಯಕ್ಷ ಗಾದಿಗೆ ಶಿವರಾಮ ಹೆಬ್ಬಾರ ಮಾತೆ ಅಂತಿಮವಾಗಲಿದೆ.


Share: