ಮಣಿಪಾಲ,ಡಿಸೆಂಬರ್ 26:ದಿನಾಂಕ ೨೪/೧೨/೦೯ ರಂದು ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಹೆಚ್.ಡಿ.ಕುಲಕರ್ಣಿರವರಿಗೆ ಶಿವಳ್ಳಿ ಗ್ರಾಮದ ಬಾಳಿಗಾ ವಸತಿ ಗೃಹದಲ್ಲಿ ಮಧ್ಯವರ್ತಿಗಳ ಸಹಯೋಗದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರೊಂದಿಗೆ ೨೨:೩೦ ಗಂಟೆಗೆ ಬಾಳಿಗಾ ಹೋಟೆಲಿಗೆ ದಾಳಿ ಮಾಡಿ ಹೋಟೆಲ್ ಮಾಲೀಕ ಸನ್ರಾಜ್ ಬಾಳಿಗಾರವರ ಮಾಲೀಕತ್ವದಲ್ಲಿ ಹೋಟೆಲ್ ಸ್ವಾಗತಕಾರ ಆರೋಪಿ ಯಶವಂತ ಮತ್ತು ಮಧ್ಯವರ್ತಿಗಳಾದ ಪ್ರಶಾಂತ ಮತ್ತು ದಯಾನಂದರ ಸಹಾಯೋಗದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆಹಚ್ಚಿ ಠಾಣಾ ಅಪರಾಧ ಕ್ರಮಾಂಕ ೨೪೪/೦೯ ಕಲಂ ೩, ೪, ೫ ಮತ್ತು ೯ ವೇಶ್ಯಾವಾಟಿಕೆ ನಿರ್ಮೂಲನಾ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಂಧಿತರನ್ನು ೧) ಶಿವಳ್ಳಿಯ ದಯಾನಂದ ಶೆಟ್ಟಿಗಾರ್ (೪೯ ವರ್ಷ), ೨) ೮೨ನೇ ಕುದಿ ಯಶವಂತ ಬಂಗೇರ (೪೨ ವರ್ಷ), ೩) ಕುಂದಾಪುರ ಚಿಕನ್ಸಾಲ್ ರಸ್ತೆಯ ವಿಕ್ರಮ್ (೨೯ ವರ್ಷ) ೪) ತೆಂಕನಿಡಿಯೂರಿನ ರಾಜೇಶ್ (೨೦ ವರ್ಷ), ೫) ಗರಡಿಮಜಲಿನ ಸುಧೀರ್ (೨೪ ವರ್ಷ), ೬) ಉಡುಪಿ ಸಿಟಿಬಸ್ ನಿಲ್ದಾಣದ ಬಳಿಯ ಜನಾರ್ಧನ (೩೪ ವರ್ಷ), ೭) ಕುತ್ಯಾರಿನ ಪ್ರಕಾಶ್ ಸಾಲಿಯಾನ್ (೨೯ ವರ್ಷ), ೮) ದೊಡ್ಡಣ್ಣಗುಡ್ಡೆಯ ಸಂದೀಪ್ (೩೦ ವರ್ಷ), ೯) ಹೆರ್ಗಾದ ಪ್ರಕಾಶ್ ಪೂಜಾರಿ, ೧೦) ದಾಮೋದರ ಬಾಳಿಗಾರವರ ಮಗನಾದ ಸನ್ರಾಜ್ ಬಾಳಿಗ, ೧೧) ಪಶ್ಚಿಮ ಬಂಗಾಲದ ರೂಪಾ (೨೨ ವರ್ಷ), ೧೨) ಶುಭಾ (೨೪ ವರ್ಷ), ೧೩) ಸಲ್ಮಾ (೩೦ ವರ್ಷ), ೧೪) ಮೈನಾ (೨೧ ವರ್ಷ) ಮತ್ತು ೧೫) ದೆಹಲಿಯ ಮೋನಿಕಾ (೨೪ ವರ್ಷ) ಎಂದು ಗುರುತಿಸಲಾಗಿದೆ.
ಚಿತ್ರ, ವರದಿ: ಇಬ್ರಾಹಿಂ, ಗಂಗೊಳ್ಳಿ