ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನೌಕಾ ನಲೆ ಸುತ್ತಮುತ್ತಲಿನ ಕೃತಕ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ : ಸತೀಶ್ ಸೈಲ್

ನೌಕಾ ನಲೆ ಸುತ್ತಮುತ್ತಲಿನ ಕೃತಕ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ : ಸತೀಶ್ ಸೈಲ್

Fri, 19 Jul 2024 03:17:08  Office Staff   S O News

ಕಾರವಾರ :- ಕಾರವಾರದ ನೌಕಾ ನೆಲೆ ಸಮೀಪದ ಪ್ರದೇಶಗಳಲ್ಲಿನ ಸಾರ್ವಜನಿಕರು ಪ್ರತೀ ಮಳೆಗಾಲದಲ್ಲಿ ಎದುರಿಸುವ ಕೃತಕ ನೆರೆಯ ಸಮಸ್ಯೆ ಶೀಘ್ರದಲ್ಲಿ ಶಾಶ್ವತ ಪರಿಹಾರ ದೊರೆಯಲಿದ್ದು, ಈ ಕುರಿತಂತೆ ಎಲ್ಲಾ ಕಾರ್ಯಗಳು ಭರದಿಂದ ನಡೆಯುತ್ತಿವೆ ಎಂದು ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಹೇಳಿದರು.

ಅವರು ಬುಧವಾರ, ನೌಕಾನಲೆ ಬಳಿ ಕೃತಕ ನೆರೆ ಉಂಟಾಗುವ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದರು.

ಪ್ರತೀ ಮಳೆಗಾಲದ ಸಮಯದಲ್ಲಿ ಅರ್ಗಾ, ಚೆಂಡಿಯಾ, ಇಡೂರು ಪ್ರದೇಶದಲ್ಲಿ ಮಳೇ ನೀರು ಸರಾಗವಾಗಿ ಹರಿದು ಹೋಗದೇ ಕೃತಕ ನೆರೆ ಉಂಟಾಗಿ ಮನೆಗಳಿಗೆ ನುಗ್ಗಿ ಅಪಾರ ಹಾನಿಯಾಗುವುದರ ಜೊತೆಗೆ ಈ ಭಾಗದಲ್ಲಿ ರಸ್ತೆ ಸಂಚಾರಕ್ಕೂ ತೀವ್ರ ಅಡಚಣೆಯಾಗುತ್ತಿದೆ. ಇಲ್ಲಿ ಮಳೆ ನೀರು ಹರಿದು ಸಮುದ್ರ ಸೇರುವ ಮಾರ್ಗದಲ್ಲಿ ನೌಕ ನೆಲೆಯ ಒಳಭಾಗದ ಮೂಲಕ ಹರಿಯುವ ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆಗಳನ್ನು ಒಡೆದು ನೀರು ಹರಿಯುವಂತೆ ಅವಕಾಶ ಮಾಡಿಕೊಡಲು ನೌಕಾನೆಲೆಯ ಅಧಿಕಾರಿಗಳು ಒಪ್ಪಿಗೆ ನೀಡಿದ್ದು, ಅದರಂತೆ ಈ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಅದು ಪೂರ್ಣಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.

ಈಗಾಗಲೇ ಇಲ್ಲಿ ೧೨ ಮೀಟರ್ ಆಗಲದ ರಾಜ ಕಾಲುವೆ ನಿರ್ಮಿಸಲಾಗಿದ್ದು, ಮುಖ್ಯ ರಸ್ತೆ ಅಡ್ಡ ಬಂದಿರುವುದರಿAದ ಕಾಮಗಾರಿ ಪೂರ್ಣಗೊಳಿಸಲು ನೌಕಾನೆಲೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದು, ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಈ ಸಮಸ್ಯೆ ಬಾರದ ಹಾಗೇ ಸಂಪೂರ್ಣವಾಗಿ ಸರಿಪಡಿಸಲಾಗುವುದು ಎಂದು ಹೇಳಿದರು.

ಸೀಬರ್ಡ್ ನಿರಾಶ್ರಿತರಿಗೆ ಕಳೆದ ೪೦ ವರ್ಷದಿಂದ ಪರಿಹಾರವಿಲ್ಲದೇ ೨ ತಲೆಮಾರು ಕಳೆದಿದೆ . ಇದು ಮೂರನೇ ತಲೆಮಾರಿಗೆ ಮುಂದುವರೆಯದAತೆ ಈ ಪ್ರಕರಣಗಳನ್ನು ಮತ್ತು ಕೋಂಕಣ ರೈಲ್ವೆಯ ಪ್ರಕರಣಗಳನ್ನು ಶೀಘ್ರವೇ ಜಿಲ್ಲಾಧಿಕಾರಿಗಳ ಮೂಲಕ ವಿಲೇವಾರಿ ಮಾಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ಮಂಕಾಳ ವೈದ್ಯ ಮಾತನಾಡಿ, ಕೃತಕ ನರೆಯಿಂದಾಗುವ ಸ್ಥಳೀಯರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಲು ಜಿಲ್ಲಾಡಳಿತಕ್ಕೆ ಅಗತ್ಯ ಸೂಚನೆಗಳನ್ನು ನೀಡಿದ್ದು, ಅವುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಆಲಿಗದ್ದಾ ಮತ್ತು ಚೆಂಡಿಯಾ ಪ್ರದೇಶಗಳಿಗೂ ಭೇಟಿ ನೀಡಿದ ಸಚಿವರು ಮತ್ತು ಶಾಸಕರು ಸಾರ್ವಜನಿಕರ ಅಹವಾÀಲುಗಳನ್ನು ಆಲಿಸಿ, ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಲಕ್ಷಿö್ಮಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಕಾರವಾರ ಉಪವಿಭಾಗಾಧಿಕಾರಿ ಕನಿಷ್ಕ, ಸೀಬರ್ಡ್ ಅಧಿಕಾರಿಗಳು , ಗ್ರಾಮಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Share: