ಬೆಂಗಳೂರು, ನವೆಂಬರ್ 11: ರಾಜ್ಯ ವಿಧಾನ ಮಂಡಲ ಅಧಿವೇಶನ ನಿಗದಿ ಕುರಿತುಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ
ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ನವೆಂಬರ್ನಲ್ಲಿ ೨೦ ದಿನ ವಿಧಾನಮಂಡಲ ಅಧಿವೇಶನಕರೆಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದೆ ಹೇಳಿದ್ದರು. ಬದಲಾದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ೧೦ ಅಥವಾ ೧೫ ದಿನ ಅಧಿವೇಶನ ಕರೆಯುವ ಸಾಧ್ಯತೆಯಿದೆ. ವರ್ಷಕ್ಕೆ ಕನಿಷ್ಠ ೬೦ ದಿನ ಅಧಿವೇಶನ ನಡೆಸಬೇಕು ಎಂಬ ನಿಯಮವಿದೆ.ಆದರೆ, ಈ ವರ್ಷ ಅಷ್ಟು ದಿನ ಅಧಿವೇಶನ ನಡೆಯದ ಕಾರಣ ನವೆಂಬರ್ನಲ್ಲಿ ಕನಿಷ್ಠ ಹತ್ತು ದಿನ ಅಧಿವೇಶನ ನಡೆಸುವುದು ಅನಿವಾರ್ಯವಾಗಿದೆ. ಚಿಕ್ಕಬಳ್ಳಾಪುರದ ಸರ್ ಎಂ.ವಿಶ್ವೇಶ್ವರಯ್ಯ ಮುನ್ಸಿಪಲ್ ಸಂಜೆ ಕಾಲೇಜನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ಪ್ರಸ್ತಾವನೆ ಕಳುಹಿಸಿದೆ. ನಗರದ ಕುಮಾರಕೃಪ ಅತಿಥಿ ಗೃಹದ ಪಕ್ಕದಲ್ಲಿ ರುವ ೨.೦೯ಎಕರೆ ಭೂಮಿಯನ್ನು ಚಿತ್ರಕಲಾ ಪರಿಷತ್ತಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವುದನ್ನು ನವೀಕರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಉಳಿದಂತೆ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿರುವ ವಿಜಾಪುರ ಸಾರಿಗೆ ವಿಭಾಗವನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಗೆ ಸೇರಿಸುವ ಕೆಎಸ್ಆರ್ಟಿಸಿ ಪ್ರಸ್ತಾವನೆ.
ಹಿರಿಯೂರು ಬಳಿ ರಾಜ್ಯ ಹೆದ್ದಾರಿ ಶ್ರೀರಂಗಪಟ್ಟಣ -ಜೇವರ್ಗಿ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ-೪ನ್ನು ಜೋಡಿಸುವ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ (ಅಂದಾಜು ೧೪.೨೨ ಕೋಟಿ ರೂ.)ಗೆ ಅನುಮೋದನೆ.
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಹಾಗೂ ಇತರ ಸ್ವಚ್ಛತೆ ಕೆಲಸ ಹೊರ ಗುತ್ತಿಗೆ ನೀಡುವ ಮತ್ತು ನಾನಾ ಕಾಮಗಾರಿಗಳ ೭ಕೋಟಿ ರೂ. ಯೋಜನೆಗೆ ಅನುಮೋದನೆ.
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ, ಘನ ತ್ಯಾಜ್ಯ ವಸ್ತು ನಿರ್ವಹಣೆ ಕಾಮಗಾರಿಗೆ ೧೧.೫೦ ಕೋಟಿ ರೂ.ಅಂದಾಜು ಪಟ್ಟಿಗೆ ಅನುಮೋದನೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ವಿಶೇಷ ಅಭಿವೃದ್ಧಿ ಯೋಜನೆಯಡಿ ೪೦ ಕೋಟಿ ರೂ. ವೆಚ್ಚದಲ್ಲಿ ೧,೦೮೨ ಅಂಗನವಾಡಿ ಕಟ್ಟಡ ನಿರ್ಮಾಣ.
ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಗೆ ಶೇ.೧೧ರಿಂದ ಶೇ.೧೩ಕ್ಕೆ ಹೆಚ್ಚುವರಿ ಮನೆ ಬಾಡಿಗೆ ಭತ್ಯೆ ನೀಡಲು ಅನುವಾಗುವಂತೆ ಆಯೋಗದ ಸೇವಾ ಷರತ್ತು ನಿಯಮ ೧೯೫೭ಕ್ಕೆ ತಿದ್ದುಪಡಿ.
ಮಾಜಿ ಸಚಿವ ವೈಜನಾಥ್ ಪಾಟೀಲ್ ಸರಕಾರಕ್ಕೆ ಪಾವತಿಸಬೇಕಿರುವ ಬಾಕಿ ಮನ್ನಾ.
ಕರ್ನಾಟಕ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಹೆಸ ರನ್ನು ಡಾ.ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದಿಟಛಿ ನಿಗಮ ನಿಯಮಿತ ಎಂದು ಮರುನಾಮಕರಣ.
೮ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ಹಂಚಿಕೆ ಯನ್ನು ೨೦೦೯-೧೦ನೇ ಸಾಲಿನಲ್ಲಿ ಮುಂದುವರಿಕೆ ಕುರಿತು
ನಿವೃತ್ತ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿ,
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಅಭಿವೃದಿಪಡಿಸಿರುವ ರಸ್ತೆಗಳ ಮೇಲೆ ಶುಲ್ಕ ಹಾಗೂ ಮುಖ್ಯಮಂತ್ರಿಯವರ ಸಣ್ಣ ಮತ್ತು ಮಧ್ಯಮ ಪಟ್ಟಣಗಳ
ಅಭಿವೃದಿ ಕಾರ್ಯಕ್ರಮಕ್ಕೆ ಹಣಕಾಸು ಸಂಸ್ಥೆಗಳಿಂದ ೭೦೦
ಕೋಟಿ ರೂ. ಸಾಲ ಪಡೆಯಲು ಅನುಮೋದನೆ ನೀಡುವ ಪ್ರಸ್ತಾವನೆ ಸೇರಿದಂತೆ ಅನೇಕ ವಿಷಯಗಳು ಚರ್ಚೆಗೆ ಬರಲಿವೆ.
ಸೌಜನ್ಯ: ವಿಜಯ ಕರ್ನಾಟಕ