ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಗಣ್ಯರಿಂದ ’ಯುಗಾದಿ’ ಹಬ್ಬದ ಶುಭಾಶಯ

ಬೆಂಗಳೂರು: ಗಣ್ಯರಿಂದ ’ಯುಗಾದಿ’ ಹಬ್ಬದ ಶುಭಾಶಯ

Mon, 15 Mar 2010 17:00:00  Office Staff   S.O. News Service

ಬೆಂಗಳೂರು, ಮಾರ್ಚ್ ೧೫, (ಕರ್ನಾಟಕ ವಾರ್ತೆ) - ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ವೀರಣ್ಣ ಮತ್ತಿಕಟ್ಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಜಗದೀಶ್ ಶೆಟ್ಟರ, ನಗರಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಎಸ್. ಸುರೇಶ್‌ಕುಮಾರ್, ಕಾರ್ಮಿಕ ಸಚಿವ ಶ್ರೀ ಬಿ.ಎನ್. ಬಚ್ಚೇಗೌಡ ಅವರು ಸೇರಿದಂತೆ ಹಲವು ಗಣ್ಯರು ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯವನ್ನು ಸಲ್ಲಿಸಿದ್ದಾರೆ.

 

ವಿಧಾನದ ಪರಿಷತ್ತು ಸಭಾಪತಿ ಶ್ರೀ ವೀರಣ್ಣ ಮತ್ತಿಕಟ್ಟಿಯವರ ಶುಭ ಹಾರೈಕೆ

 

ಯುಗಾದಿ ಹಬ್ಬವು ನಾಡಿನ ಜನತೆಗೆ ಸುಖ, ಸಂತೋಷ ಮತ್ತು ಸಮೃದ್ಧಿಯನ್ನು ನೀಡಲೆಂದು ಕರ್ನಾಟಕ ವಿಧಾನದ ಪರಿಷತ್ತು ಸಭಾಪತಿ ಶ್ರೀ ವೀರಣ್ಣ ಮತ್ತಿಕಟ್ಟಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ವಾರ್ತಾ ಸಚಿವ ಶ್ರೀ ಕಟ್ಟಾಸುಬ್ರಮಣ್ಯನಾಯ್ಡು ಅವರ ಶುಭ ಸಂದೇಶ

 

 

ಯುಗಾದಿ ಹಬ್ಬದ ಸಂದರ್ಭದಲ್ಲಿ ನಾಡಿನ ಜನತೆಗೆ ಬೇವು ಬೆಲ್ಲ ಸವಿದು ಸುಖ ಸಂತೋಷ ಸಮೃದ್ದಿ ಉಂಟುಮಾಡಲೆಂದು ಐ.ಟಿ.ಬಿ.ಟಿ. ವಾರ್ತಾ ಹಾಗೂ ಬೆಂಗಳೂರು ನೀರು ಸರಬರಾಜು ಸಚಿವ ಶ್ರೀ ಕಟ್ಟಾಸುಬ್ರಮಣ್ಯನಾಯ್ಡು ಅವರು ಶುಭ ಹಾರೈಸಿದ್ದಾರೆ.

 

ಕಾರ್ಮಿಕ ಸಚಿವ ಶ್ರೀ ಬಿ. ಎನ್. ಬಚ್ಚೇಗೌಡರ ಶುಭ ಸಂದೇಶ

 

ಹೊಸ ವರ್ಷವೂ ಎಲ್ಲರಿಗೂ ಸುಖ, ಶಾಂತಿ ನೆಮ್ಮದಿ ತರಲಿ, ರಾಜ್ಯದಲ್ಲಿ ಒಳ್ಳೆಯ ಮಳೆ, ಬೆಳೆ ಆಗಿ ಸಮೃದ್ಧಿ ಉಂಟಾಗಲಿ ಹಾಗೂ ರಾಜ್ಯದ ಜನತೆ ಕೋಮು ಸೌಹಾರ್ದ ಬೆಳೆಸಿಕೊಂಡು ಸುಖ, ಶಾಂತಿ, ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಲಿ. ಬರಲಿರುವ ವಿಕೃತಿ ನಾಮಸಂವತ್ಸರವು ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ ಎಂದು ನಾಡಿನ ಜನತೆಗೆ ಹಾಗೂ ಕಾರ್ಮಿಕ ಬಂಧುಗಳಿಗೆ ಯುಗಾದಿ ಹಾಗೂ ಹೊಸ ವರ್ಷದ ಶುಭಾಶಯವನ್ನು ಸಚಿವರು ಸಲ್ಲಿಸಿದ್ದಾರೆ.

 

ನಗರಾಭಿವೃದ್ಧಿ ಸಚಿವ ಶ್ರೀ ಎಸ್. ಸುರೇಶ್‌ಕುಮಾರ್ ಸಂದೇಶ

 

ಬೇವು ಬೆಲ್ಲದ ಹಬ್ಬ ಯುಗಾದಿಯ ಸಂದರ್ಭದಲ್ಲಿ ರಾಜ್ಯದ ಜನತೆಗೆ ನಗರಾಭಿವೃದ್ಧಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಎಸ್. ಸುರೇಶ್‌ಕುಮಾರ್ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

 

ಬದಕು ಎಂಬುದು ಸಿಹಿ-ಕಹಿಗಳ ಸಮ್ಮಿಲನ, ಸಿಹಿಗೆ ಹಿಗ್ಗದೆ, ಕಹಿಗೆ ಕುಗ್ಗದೆ, ಸಮಚಿತ್ತದಿಂದಿರಲಿ ನಮ್ಮ ಮನ. ನಾಡಿನ ಜನತೆಗೆ ಯುಗಾದಿ ಹಬ್ಬ ಹೊಸ ಹುರುಪು, ಸ್ಪೂರ್ತಿ ತುಂಬಲಿ, ಸಂಕಷ್ಟಗಳಿಗೆ ಕುಗ್ಗದೆ ಅಭಿವೃದ್ಧಿಯ ಹೊಸಹಾದಿಯತ್ತ ಹೆಜ್ಜೆ ಹಾಕಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

 

 

ಗ್ರಾಮೀಣಾಭಿವೃದ್ಧಿ ಸಚಿವ ಶ್ರೀ ಜಗದೀಶ್ ಶೆಟ್ಟರ ಶುಭ ಹಾರೈಕೆ

 

ನಾಡಿನಾದ್ಯಂತ ಸಂಭ್ರಮ ಮತ್ತು ಸಡಗರದಿಂದ ವಿಕೃತಿ ನಾಮಸಂವತ್ಸರ ಯುಗಾದಿ ಹಬ್ಬವನ್ನು ಆಚರಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಹಿಂದೂಗಳಿಗೆ ಅತ್ಯಂತ ಪ್ರಮುಖ ಹಾಗೂ ವಿಶಿಷ್ಟವಾದ ಹಬ್ಬ ಯುಗಾದಿ. ಹಿಂದೂ ಪಂಚಾಂಗದಲ್ಲಿ ಹೊಸ ವರ್ಷದ ಪ್ರಾರಂಭದ ದಿನವೆಂದು ಬಿಂಬಿತವಾಗಿರುವ ಯುಗಾದಿ ಹಬ್ಬವು ಪ್ರಕೃತಿ ವಿಕೋಪ, ಭಯೋತ್ಪಾದನೆ, ಸಾಮಾಜಿಕ ಪಿಡುಗುಗಳು ಮತ್ತು ರೋಗರುಜಿನಗಳಿಂದ ನಾಡಿನ ಜನತೆಯನ್ನು ಸಂರಕ್ಷಿಸಿ, ಸರ್ವರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಗಳನ್ನು ತರಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಜಗದೀಶ್ ಶೆಟ್ಟರ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

 


Share: