ಮೈಸೂರು: ಮೈಸೂರಿನಲ್ಲಿ ಎಸ್ಡಿಪಿಐ ಕಾರ್ಯಕರ್ತ ಹಾಗೂ ಧಾರ್ಮಿಕ ನೇತಾರರಾಗಿದ್ದ ವ್ಯಕ್ತಿಯೋರ್ವರರನ್ನು ನಡುರಸ್ತೆಯಲ್ಲೇ ಅಪರಿಚಿತ ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದ ಬಗ್ಗೆ ವರದಿಯಾಗಿದೆ.
ಹತ್ಯೆಗೊಳಗಾದ ವ್ಯಕ್ತಿಯನ್ನು ಎಸ್ಡಿಪಿಐ ಸಕ್ರಿಯ ಕಾರ್ಯಕರ್ತ ಹಾಗೂ ಮೈಸೂರು ನಗರದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಮೌಲಾನಾ ಹಾಫಿಲ್ ಅಕ್ಮಲ್ ಪಾಷಾ ಎಂದು ಗುರುತಿಸಲಾಗಿದೆ.
ಇಲ್ಲಿನ ರಾಜೀವ್ ನಗರದ ನಿಮ್ರಾ ಮಸೀದಿ ಬಳಿ ಶುಕ್ರವಾರ ರಾತ್ರಿ 9ರ ಸುಮಾರಿಗೆ ಈ ಘಟನೆ ನಡೆದಿದೆ. ಹತ್ಯೆಗೀಡಾದ ಅಕ್ಮಲ್ ಅವರು ಮಾಜಿ ಕಾರ್ಪೊರೇಟರ್ ಅಯಾಝ್ ಪಂಡು ಅವರ ಸಹೋದರ ಎಂದು ತಿಳಿದುಬಂದಿದೆ.