ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ತಾಲ್ಲೂಕಿನಾದ್ಯಂತ ಪಡಿತರ ಚೀಟಿ ವಿತರಣೆಯಲ್ಲಿ ಭಾರೀ ಅವ್ಯವಸ್ಥೆ

ಭಟ್ಕಳ: ತಾಲ್ಲೂಕಿನಾದ್ಯಂತ ಪಡಿತರ ಚೀಟಿ ವಿತರಣೆಯಲ್ಲಿ ಭಾರೀ ಅವ್ಯವಸ್ಥೆ

Wed, 13 Jan 2010 16:43:00  Office Staff   S.O. News Service
ಭಟ್ಕಳ, ಜನವರಿ 13:  ಭಟ್ಕಳ ತಾಲೂಕಿನಾದ್ಯಂತ ಪಡಿತರ ಚೀಟಿ ವಿತರಣೆಯಲ್ಲಿ ಭಾರಿ ಅವ್ಯೆವಸ್ಥೆ ಉಂಟಾಗಿದ್ದು ಈ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ ನೂರಾರು ಜನ ಮಹಿಳೆಯರು ಪಡಿತರ ಚೀಟಿ ವಿತರಣಾ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿ ತಹಸಿಲ್ದಾರ್ ಕಛೇರಿಗೆ ಮುತ್ತಿಗೆಯನ್ನು ಪ್ರತಿಭಟನೆಯನ್ನು ವ್ಯಕ್ತಪಡಿದ್ದಾರೆ. 
 
ಕಳದೆರಡು ದಿನಗಳಿಂದ ಭಾರತ ಕಮ್ಯುನಿಷ್ಟ್ ಪಕ್ಷದ ಪ್ರತಿಭಟನೆಯು ತಹಸಿಲ್ದಾರ್ ಕಾರ್ಯಲಯದ ಮುಂದೆ ಜರುಗುತ್ತಿದ್ದು ಇದರಲ್ಲಿ ಭಾಗವಹಿಸಲು ಬಂದ ನೂರಾರು ಮಹಿಳೆಯರು ರೇಷನ್ ಕಾರ್ಡ ವಿತರಣೆಯನ್ನು ತಮಗೆ ಅನ್ಯಾಯವಾಗಿದೆ ಅದನ್ನು ಕೂಡಲೆ ಸರಿಪಡಿಸಬೆಕೆಂದು ಆಗ್ರಹಿಸಿದರು. ಬಿಪಿ‌ಎಲ್ ಕಾರ್ಡ್ ವಿತರಣೆಯನ್ನು ಅಧಿಕಾರಿ ಅಕ್ರಮವನ್ನು ಎಸಗಿದ್ದಾರೆ ಎಂದು ಅವರು ಅರೋಪಿಸಿದ್ದು ಕೂಡಲೆ ತಮಗೆ ಬಿಪಿ‌ಎಲ್ ಕಾರ್ಡನ್ನು ನೀಡಲೇಬೆಂದು ಪಟ್ಟು ಹಿಡಿದು ಕುಳಿತರು.

ಈ ಕುರಿತು ಅಧಿಕಾರಿಗಳಿಂದ ಯಾವುದೆ ಸಮರ್ಪಕವಾದ ಉತ್ತರ ಬಾರದೆ ಇದ್ದುದರಿಂದ ಕುಪಿತಗೊಂಡ ಪ್ರತಿಭಟನೆ ನಿರತ ಮಹಿಳೆಯರು ನೇರವಾಗಿ ತಹಸಿಲ್ದಾರ್ ಛೇಂಬರಿನತ್ತ ನಡೆದು ಅಲ್ಲಿ ಮುತ್ತಿಗೆಯನ್ನು ಹಾಕಿದರು. ಆಕ್ರೋಶಿತ ಮಹಿಳೆಯರು ತಮಗೆ ಮೊದಲು ನೀಡಿದ್ದ ಬಿಪಿ‌ಎಲ್ ಕಾರ್ಡನ್ನು ರದ್ದುಗೊಳಿಸಿ ಎಪಿ‌ಎಲ್ ಕಾರ್ಡ ನೀಡಿದ್ದಾರೆ. ಉಳ್ಳವರಿಗೆ,ಶ್ರೀಮಂತರಿಗೆ ಬಿಪಿ‌ಎಲ್ ಕಾರ್ಡ್ ನೀಡಿದ್ದು ಬಡವರಿಗೆ ಎಪಿ‌ಎಲ್ ಕಾರ್ಡನ್ನು ನೀಡಿದ್ದಾರೆ. ಇದರಲ್ಲಿ ಅಧಿಕಾರಿಗಳು ಭಾರಿ ಅಕ್ರಮ ಎಸಗಿರುವ ಸಾಧ್ಯತೆ ಇದೆ ಎಂದು ಆಕ್ರೋಶಿತ ಮಹಿಳೆಯರು ಆರೋಪಿಸಿದ್ದಾರೆ. ಕಾರ್ಡ ವಿತರಣೆಯಲ್ಲಿ ಆದ ಗೊಂದಲ ಹಾಗೂ ಅಕ್ರಮವನ್ನು ತಡೆಯದಿದ್ದರೆ ಮುಂದಿನ ದಿನಗಳಲ್ಲಿ ರೇಷನ್ ಅಂಗಡಿಗಳ ಮುಂದೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ. 
ಈ ಸಂದರ್ಭದಲ್ಲಿ ಮಹಿಳೆಯರ ಸಮಸ್ಯೆಯನ್ನು ಆಲಿಸಿದ ತಹಸಿಲ್ದಾರ ಎಸ್. ಎಮ್. ನಾಯ್ಕ ಹಾಗೂ ಡಿ.ಜೆ. ಹಗಡೆ ಸರಕಾರದ ಮಾನದಂಡದಂತೆ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ ನಿಮಗೇನಾದರೂ ದೂರುಗಳಿದ್ದಲ್ಲಿ ಲಿಖಿತ ರೂಪದಲ್ಲಿ ನೀಡಿದ್ದೇ ಆದಲ್ಲಿ ಅದನ್ನು ಪರಿಗಣನೆಗೆ ತೆಗದುಕೊಳ್ಳಬಹುದು ಎಂದಾಗ ಇದಕ್ಕೆ ಅಸಮಧಾನವನ್ನು ವ್ಯಕ್ತಪಡಿಸಿದ ಮಹಿಳೆಯರು ಈ ಮೊದಲಿನಂತೆ ಎಲ್ಲರಿಗೂ ಬಿಪಿ‌ಎಲ್ ಕಾರ್ಡನ್ನೆ ನೀಡಬೇಕು ಎಂದು ಪಟ್ಟು ಹಿಡಿದರು. ನಂತರ ಮಹಿಳೆಯರು ಎರಡು ಗಂಟೆಗಿಂತಲೂ ಹೆಚ್ಚು ಸಮಯ ಕಛೇರಿಯ ಮುಂದೆ ಪ್ರತಿಭಟನೆಯನ್ನು ನಡೆಸಿದರು.

ಈ ಕುರಿತು ತಮ್ಮ ಪ್ರತಿಕ್ರಯೆಯನ್ನು ವ್ಯಕ್ತಪಡಿಸಿದ ತಹಸಿಲ್ದಾರರು ತಾಲೂಕಿನಲ್ಲಿ ಶೇ ೭೨ ರಷ್ಟು ಬಿಪಿ‌ಎಲ್ ಕಾರ್ಡನ್ನು ವಿತರಿಸಲಾಗಿದ್ದು ಸರಕಾರದ ಮಾನದಂಡದಂತೆ ಸಮೀಕ್ಷೆಯನ್ನು ಮಾಡಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ತಾಲೂಕಿನಲ್ಲಿ ಪ್ರಸ್ತುತ ೨೦೫೩೬ ಬಿಪಿ‌ಎಲ್, ೧೭,೦೧೦ ಎಪಿ‌ಎಲ್ ಹಾಗೂ ೧೭೪೪ ಅಂತ್ಯೋದಯ ಫಲಾನುಭವಿಗಳಿದ್ದಾರೆ ಯಾವುದೆ ರೀತಿಯಲ್ಲಿ ವಂಚಿತರಾದವರು ತಮಗೆ ನೇರವಾಗಿ ಅರ್ಜಿಯನ್ನು ನೀಡಿದ್ದಲ್ಲಿ ಆ ಕುರಿತು ಸಮರ್ಪಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.  


Share: