ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದುಬೈಯ ಮಣ್ಣಿನಲ್ಲಿ ಲೀನವಾಯಿತು ಕರ್ಮಯೋಗಿ ಖಲೀಲ್ ಸಾಹೇಬರ ಪಾರ್ಥಿವ ಶರೀರ

ದುಬೈಯ ಮಣ್ಣಿನಲ್ಲಿ ಲೀನವಾಯಿತು ಕರ್ಮಯೋಗಿ ಖಲೀಲ್ ಸಾಹೇಬರ ಪಾರ್ಥಿವ ಶರೀರ

Fri, 22 Nov 2024 05:49:17  Office Staff   S O news

ಭಟ್ಕಳ: ಗುರುವಾರ ಬೆಳಗಿನ ಅವಧಿಯಲ್ಲಿ ದುಬೈಯ ಆಸ್ಪತ್ರೆಯೊಂದರಲ್ಲಿ ನಿಧನರಾದ ಭಟ್ಕಳದ ಪ್ರಸಿದ್ಧ ಅನಿವಾಸಿ ಉದ್ಯಮಿ ಕರ್ಮಯೋಗಿ  ಡಾ. ಎಸ್.ಎಂ. ಸೈಯದ್ ಖಲೀಲ್ ರಹ್ಮಾನ್ (ಸಿಎ ಖಲೀಲ್) ಅವರ ಅಂತ್ಯ ಸಂಸ್ಕಾರವು ಗುರುವಾರ ಸಂಜೆ  6:30 ಗಂಟೆಗೆ (ಸೋನಾಪುರ್) ಸಮೀಪದ ಮಸ್ಜಿದಿಯಲ್ಲಿ  ಜನಾಜ ನಮಾಝ್ ಪ್ರಾರ್ಥನೆಯೊಂದಿಗೆ ದುಬಾಯಿಯ ಅಲ್ ಖಿಸೀಸ್ ಕಬ್ರಸ್ತಾನದಲ್ಲಿ ನೆರವೇರಿತು.  

ಈ ಮಾಹಿತಿಯನ್ನು ಭಟ್ಕಳ ಜಮಾಅತ್ನ ಪ್ರಧಾನ ಕಾರ್ಯದರ್ಶಿ ಜೆಲಾನಿ ಮುಹ್ತಶಮ್ ಮಾದ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಮೃತರ ಪುತ್ರಿಯರಿಬ್ಬರು, ಒಬ್ಬರು ಅಮೆರಿಕದಿಂದ ಹಾಗೂ ಇನ್ನೊಬ್ಬರು ಲಂಡನ್‌ನಿಂದ ದುಬಾಯಿಗೆ ಆಗಮಿಸಿದ್ದಾರೆ. ಅವರ ಪುತ್ರ ಎಸ್.ಎಂ. ಸೈಯದ್ ರಯೀಸ್ ಹಾಗೂ ಇನ್ನೊಬ್ಬ ಪುತ್ರಿ ಈಗಾಗಲೇ ದುಬಾಯಿಯಲ್ಲಿದ್ದಾರೆ.

ಮೃತರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಭಾರತ, ಸೌದಿ ಅರೇಬಿಯಾ ಮತ್ತು ಇತರ ದೇಶಗಳಿಂದ ಕುಟುಂಬದ ಸದಸ್ಯರು ಹಾಗೂ ಆಪ್ತರು ದುಬಾಯಿಗೆ ಆಗಮಿಸಿದ್ದು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು. 

ಭಟ್ಕಳದ ಬಹುತೇಕ ಜನರು ದುಬಾಯಿಯ ಅಲ್ ರಾಸ್ ಪ್ರದೇಶದಲ್ಲಿ ವಾಸವಾಗಿರುವುದರಿಂದ, ಜನರು ಸುಲಭವಾಗಿ ಖಲೀಲ್ ಸಾಹೆಬರ ಜನಾಜ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಭಟ್ಕಳ ಮುಸ್ಲಿಮ್  ಜಮಾಅತ್‌ನಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು.

ಡಾ. ಸೈಯದ್ ಖಲೀಲ್ ರಹ್ಮಾನ್ ಅವರ ಅಗಲಿಕೆಯಿಂದ ಕುಟುಂಬಸ್ಥರು ಮತ್ತು ಬಂಧುಗಳು ಆಘಾತದಲ್ಲಿದ್ದು, ದುಬೈ ಹಾಗೂ ಇತರ ದೇಶಗಳಲ್ಲಿ ಅವರ ಆಪ್ತರು ಸಂತಾಪ ಸೂಚನೆ ವ್ಯಕ್ತಪಡಿಸುತ್ತಿದ್ದಾರೆ.


Share: