ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರಿನಲ್ಲಿ ಶೀಘ್ರ ಹಜ್ ಭವನ: ವಕ್ಫ್ ಸಚಿವ

ಬೆಂಗಳೂರಿನಲ್ಲಿ ಶೀಘ್ರ ಹಜ್ ಭವನ: ವಕ್ಫ್ ಸಚಿವ

Sat, 24 Apr 2010 13:16:00  Office Staff   S.O. News Service
ಬೆಂಗಳೂರು, ಏ.24: ಥಣಿಸಂದ್ರದಲ್ಲಿ ಹಜ್ ಭವನ ನಿರ್ಮಿಸಲಾಗುತ್ತದೆ ಎಂದು ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮುಮ್ತಾಜ್ ಅಲಿ ಖಾನ್ ತಿಳಿಸಿದ್ದಾರೆ. ಹಜ್ ಭವನದ ನಿರ್ಮಾಣಕ್ಕಾಗಿ ಬೆಂಗಳೂರಿನ ಥಣಿಸಂದ್ರದಲ್ಲಿ ರು.4 ಕೋಟಿ ವೆಚ್ಚದ ಭೂಮಿ ಖರೀದಿಸಲಾಗಿದೆ ಎಂದು ಅವರು ವಿವರ ನೀಡಿದರು.

ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದ ಸಚಿವರು, ದರ್ಗಾಗೆ ಸೇರಿದ ಭೂಮಿಯನ್ನು ಖರೀದಿಸಲಾಗುತ್ತಿದ್ದು ಶೀಘ್ರದಲ್ಲೇ ಹಜ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗುತ್ತದೆ. ಹಜ್ ಯಾತ್ರೆಗೆ ಹೊರಡುವ ಮುಸ್ಲಿಂ ಬಾಂಧವರ ಅಗತ್ಯಗಳನ್ನು ಈ ಭವನ ಪೂರೈಸಲಿದೆ ಎಂದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧದಿಂದ ಉಂಟಾಗಿರುವ ನಿರುದ್ಯೋಗ ಸಮಸ್ಯೆಗೆ ಪರ್ಯಾಯ ಉದ್ಯೋಗಗಳನ್ನು ಹುಡುಕಲಾಗುತ್ತಿದೆ. ಗೋಹತ್ಯೆ ನಿಷೇಧದಿಂದ ನಿರುದ್ಯೋಗಿಗಳಾಗಿರುವವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

Share: