ಸಕಲೇಶಪುರ, ಡಿಸೆಂಬರ್ ೧೮:ಕಾಂಗ್ರೇಸ್ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಡಿ. 20 ರಿಂದ 22 ರವರೆಗೆ ತಾಲ್ಲೂಕು ಪ್ರವಾಸ ಕೈಗೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಮಸ್ತಾರೆ ಲೋಕೇಶ್ ತಿಳಿಸಿದರು.
ಶನಿವಾರ ಅವರು ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.22ರಂದು ಬೆಳಿಗ್ಗೆ 9.30 ಕ್ಕೆ ಹೆಗ್ಗದ್ದೆ ಗ್ರಾಮದಿಂದ ಆರಂಭವಾಗುವ ಈ ಪ್ರವಾಸ, ಸುಮಾರು ೨೫ ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾಗಿ ಡಿ.22 ರ ಸಂಜೆ ವಣಗೂರು ಕೂಡಿಗೆಯಲ್ಲಿ ಮುಕ್ತಾಯವಾಗಲಿದೆ ಎಂದರು.
ಈ ಪ್ರವಾಸದಲ್ಲಿ ಪಕ್ಷದ ಕಾರ್ಯಕರ್ತರಿಗೆ ಈಗಾಗಲೇ ನೀಡಲಾಗಿರುವ ರಾಷ್ಟ್ರೀಯ ಕಾಂಗ್ರೇಸ್ ಸಮಿತಿ ಸದಸ್ಯತ್ವದ ನೊಂದಾಣಿ ಪುಸ್ತಕಗಳನ್ನು ಪಡೆಯಲಾಗುವುದು, ಹಾಗೂ ರಾಜೀವ್ಗಾಂದಿ ಪಂಚಾಯತ್ ರಾಜ್ ಸಂಘಟನೆಯ ನೂತನ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು.
ರಾಜೀವ್ಗಾಂದಿ ಪಂಚಾಯತ್ ರಾಜ್ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಹಾನುಬಾಳ್ ಭಾಸ್ಕರ್ ಮಾತಾನಾಡಿ, ಈ ಸಂಘಟನೆಗೆ ಎಲ್ಲರು ಸದಸ್ಯರಾಗಬಹುದು ಹಾಲಿ-ಮಾಜಿ, ಗ್ರಾಮಪಂಚಾಯತ್, ಪುರಸಭೆ, ತಾ ಪಂ, ಜಿ ಪಂ, ಸದಸ್ಯರುಗಳನ್ನು ಸೇರಿಸಿಕೊಳ್ಳಲಾಗುತ್ತದೆ ಎಂದರು.
ಪಕ್ಷದ ನಗರ ಘಟಕದ ಅಧ್ಯಕ್ಷ ತುಳಸಿ ಮಾತನಾಡಿ, ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಆದೇಶಕ್ಕೆ ವಿರುದ್ದವಾಗಿ ನಡೆದುಕೊಂಡವರ ಬಗ್ಗೆ ದೂರುಗಳು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾ ಈ ಪ್ರವಾಸದಲ್ಲಿ ತಾಲ್ಲುಕು ಹಾಗೂ ಜಿಲ್ಲಾ ಮುಖಂಡರು ಭಾಗವಹಿಸುತ್ತಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ತಾಲ್ಲೂಕು ಉಪಾಧ್ಯಕ್ಷ ಮನ್ಸೂರ್, ನಗರ ಘಟಕದ ಪೇಪರ್ ಮಂಜು, ಮಂಜುನಾಥ್ ಮತ್ತು ಜಗದೀಶ್ ಇದ್ದರು.