ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹಾಸನ: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ನೂತನ ಸಮಿತಿ ಪ್ರಕಟ

ಹಾಸನ: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ನೂತನ ಸಮಿತಿ ಪ್ರಕಟ

Sat, 02 Jan 2010 02:36:00  Office Staff   S.O. News Service
ಸಕಲೇಶಪುರ, ಜನವರಿ 1:  ಹಾಸನ ಜಿಲ್ಲಾ ಎಸ್.ಎಸ್.ಎಫ್.ನ ೨೦೦೮-೦೯ನೇ ಸಾಲಿನ ಸಮಿತಿಗೆ ಪಿ.ಎಂ.ಸೈದಲವಿ ಸಖಾಫಿ ಕಾಡುಮನೆ ಅಧ್ಯಕ್ಷರಾಗಿ, ಎಂ.ಬಿ.ಎ.ರಹ್ಮಾನ್ ಟೈಲರ್ ಹಾನುಬಾಳು ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ಜೆ.ಎಸ್. ಮುಹಮ್ಮದ್ ಇಸ್ಮಾಯಿಲ್ ಕುಡುಗರಹಳ್ಳಿ ಕೋಶಾಧಿಕಾರಿಯಾಗಿ, ಕೆ.ಎ.ಹಸೈನಾರ್ ಆನೇಮಹಲ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.  
 
ಮಹಾಸಭೆಯು ಇಲ್ಲಿನ ಆಶ್ರಿತಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.  ರಾಜ್ಯ ಚುನಾವಣಾ ವೀಕ್ಷಕರಾಗಿ ಎಸ್.ಎಸ್.ಎಫ್.ರಾಜ್ಯ ಸಂಘಟನಾ ಕಾರ್ಯದರ್ಶಿ ಶಾಫಿ ಸ‌ಅದಿ ನಂದಾವರ, ಬೆಂಗಳೂರು ಆಗಮಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ವಳವೂರು ಮುಹಮ್ಮದ್ ಸ‌ಅದಿ ಉದ್ಘಾಟಿಸಿದರು.

ಎಸ್.ಎಸ್.ಎಫ್. ಜಿಲ್ಲಾ ಗೌರವಾಧ್ಯಕ್ಷ ಎ.ಹೆಚ್. ಅಬೂಬಕರ್ ಹಾಜಿ ಅಧ್ಯಕ್ಷತೆ ವಹಿಸಿದ್ದರೆ, ಪಿ.ಎಂ.ಎಸ್. ಅಲವಿ ಸಖಾಫಿ, ಎಂ.ಹಸೈನ್ ಅಚ್ಚು, ಸಕಲೇಶಪುರ ಬಿ.ಜೆ.ಎಂ. ಕತೀಬ್ ಬಶೀರ್ ಸ‌ಅದಿ ಅಲ್ ಅಫ್‌ಳಲಿ, ಝಾಕಿರ್ ಯಾದ್‌ಗಾರ್, ಜಾವಿದ್ ರಝಾರಝ್ವಿ ಚನ್ನರಾಯಪಟ್ಟಣ, ಬಶೀರ್ ಹಾಜಿ ಹಾಸನ ಮತ್ತಿತರರು ಉಪಸ್ಥಿತರಿದ್ದರು.  ೨೦೦೮-೦೯ನೇ ಸಾಲಿನ ವರದಿಯನ್ನು ಪತ್ರಿಕಾ ಕಾರ್ಯದರ್ಶಿ ಎ.ಕೆ. ಉಮರುಲ್ ಫಾರೂಖ್ ಬಿಕ್ಕೋಡು ಹಾಗೂ ಲೆಕ್ಕಮಮಡನೆಯನ್ನು ಎಂ.ಬಿ.ರಹ್ಮಾನ್ ಹಾನುಬಾಳು ಮಂಡಿಸಿದರು.  ಕೆ.ಎ. ಹಸೈನಾರ್ ಆನೇಮಹಲ್ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು ಹಾಸನ ಜಿಲ್ಲಾ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್.ಎಸ್.ಎಫ್.) ಇದರ ಅಧೀನದಲ್ಲಿ ನಾಲ್ಕು ವಲಯ ಸಮಿತಿಗಳ ರಚಿಸಲಾಯಿತು.

ಸಕಲೇಶಪುರ  ಎಸ್.ಎಸ್.ಎಫ್. ನೂತನ ವಲಯ ಸಮಿತಿ ವಿವರ : 
ಎಂ.ಹಸೈನಾರ್ (ಅಚ್ಚು)- (ಗೌರವಾಧ್ಯಕ್ಷರು), ಎ.ಕೆ. ಹಸೈನಾರ್ ಸಕಲೇಶಪುರ (ಅಧ್ಯಕ್ಷರು), ಅಬ್ಬಾಸ್ ಮುಸ್ಲಿಯಾರ್ ಆಚಂಗಿ ಹಾಗೂ ಮುಸ್ತಫಾ (ಪುತ್ತು) ಜನ್ನಾಪುರ (ಉಪಾಧ್ಯಕ್ಷರುಗಳು), ಅಬ್ದುಲ್ ರಶೀದ್ ಮುಸ್ಲಿಯಾರ್ ಕುಡುಗರಹಳ್ಳಿ (ಪ್ರಧಾನ ಕಾರ್ಯದರ್ಶಿ), ಶರೀಫ್ ಬಂದಿಹಳ್ಳಿ ಹಾಗೂ ಅಬ್ದುಲ್ ಅಝೀಜ್ ಆಚಂಗಿ (ಸಹ ಕಾರ್ಯದರ್ಶಿಗಳು), ನವಾಬ್ ಕುಡುಗರಹಳ್ಳಿ (ಕೋಶಾಧಿಕಾರಿ), ಅಬ್ದರ್ರಹ್ಮಾನ್ ಮುಸ್ಲಿಯಾರ್ ಜನ್ನಾಪುರ (ಸಂಘಟನಾ ಕಾರ್ಯದರ್ಶಿ), ಅಶ್ರಫ್ ಮಾಸ್ಟರ್ ಸಕಲೇಶಪುರ (ಪತ್ರಿಕಾ ಕಾರ್ಯದರ್ಶಿ) ಮತ್ತು ೧೬ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು.

ಹಾನುಬಾಳು ಎಸ್.ಎಸ್.ಎಫ್.ನೂತನ ವಲಯ ಸಮಿತಿ ವಿವರ : 
ಪಿ.ಎಂ. ಸೈದಲವಿ ಸಖಾಫಿ ಕಾಡುಮನೆ (ಗೌರವಾಧ್ಯಕ್ಷರು ), ಕೆ.ಎ. ಹಸೈನಾರ್ ಆನೇಮಹಲ್ (ಅಧ್ಯಕ್ಷರು), ವಿ.ಕೆ. ಸಲೀಂ ಹಾನುಬಾಳು ಹಾಗೂ ಇಸ್ಮಾಯಿಲ್ ಆನೇಮಹಲ್ (ಉಪಾಧ್ಯಕ್ಷರು), ಎಂ.ಬಿ.ಎ. ರಹ್ಮಾನ್ ಟೈಲರ್ ಹಾನುಬಾಳು (ಪ್ರಧಾನ ಕಾರ್ಯದರ್ಶಿ), ಝಬೈರ್ ಮಾರನಹಳ್ಳಿ (ಜೊತೆ ಕಾರ್ಯದರ್ಶಿ), ಅಬೂಬಕರ್ ಸಿದ್ದೀಕ್ ಲತೀಫಿ( ಸಂಘಟನಾ ಕಾರ್ಯದರ್ಶಿ), ಮುಸ್ತಫಾ ಸಿ.ಎ.ದೇಖ್ಲ (ಕೋಶಾಧಿಕಾರಿ) ಹಾಗೂ ೯ ಮಂದಿ ಕಾರ್ಯಕಾರಿ ಸದಸ್ಯರು. 

ಬೇಲೂರು ಎಸ್.ಎಸ್.ಎಫ್.ನೂತನ ವಲಯ ಸಮಿತಿ ವಿವರ : 
ಅಬೂಬಕರ್, ಬೇಲೂರು (ಗೌರವಾಧ್ಯಕ್ಷರು ), ಅಬ್ದುಲ್ ಅಝೀಝ್ ಮುಸ್ಲಿಯಾರ್ ಬಕ್ರವಳ್ಳಿ (ಅಧ್ಯಕ್ಷರು), ಮುಹಮದ್ ಇಕ್ಬಾಲ್ ಬೇಲೂರು ಹಾಗೂ ಅಬೂಬಕರ್ ಸಖಾಫಿ ಅರೇಹಳ್ಳಿ (ಉಪಾಧ್ಯಕ್ಷರು), ಅಮ್ಜದ್ ಬಿಕ್ಕೋಡು (ಪ್ರಧಾನ ಕಾರ್ಯದರ್ಶಿ), ಎ.ಕೆ. ಉಮರುಲ್ ಫಾರೂಕ್ ಬಿಕ್ಕೋಡು (ಸಂಘಟನಾ ಕಾರ್ಯದರ್ಶಿ), ಕೆ.ಎಂ. ಶರೀಫ್ ಮಳವಳ್ಳಿ, ಬೇಲೂರು (ಕೋಶಾಧಿಕಾರಿ), ಹಂಝ, ಬಕ್ರವಳ್ಳಿ ಹಾಗೂ ಇಮ್ತಿಯಾಝ್ ಅರೇಹಳ್ಳಿ (ಜೊತೆ ಕಾರ್ಯದರ್ಶಿಗಳು), ಖಲಂದರ್, ಬಿಕ್ಕೋಡು (ಲೆಕ್ಕ ಪರಿಶೋಧಕರು), ಹಾಗೂ ೪ ಮಂದಿ ಸಲಹಾ ಸಮಿತಿ ಸದಸ್ಯರುಗಳಾಗಿ ಶಫೀ ಉರ್ರಹ್ಮಾನ್ ರಝ್ವಿ, ಬೇಲೂರು. ಅಬ್ದುರ್ರಹ್ಮಾನ್ ಬಾಹಸನಿ ಬಿಕ್ಕೋಡು, ಸಯ್ಯಿದ್ ಭಾಷಾ ರಝ್ವಿ, ನೆಹರೂನಗರ, ಬೇಲೂರು ಹಾಗೂ ಎಸ್.ಎ. ಅಬ್ದುಲ್ ಖಾದರ್ ಹಾಜಿ, ಬೇಲೂರು ಹಾಗೂ ೧೦ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು.

ಆಲೂರು ಎಸ್.ಎಸ್.ಎಫ್.ನೂತನ ವಲಯ ಸಮಿತಿ ವಿವರ : 
ಕೆ.ಹೆಚ್. ಇಬ್ರಾಹಿಂ ಕಾಡ್ಲೂರು (ಗೌರವಾಧ್ಯಕ್ಷರು), ಐಡಿಯಲ್ ಅಬ್ದುಲ್ಲಾ ಪಾಳ್ಯ (ಅಧ್ಯಕ್ಷರು), ಸುಲೈಮಾನ್, ಬಾಖವಿ(ಕಾಡ್ಲೂರು) ಹಾಗೂ ಸುಲೈಮಾನ್ ರಾಯರಕೊಪ್ಪಲು (ಉಪಾಧ್ಯಕ್ಷರು), ಅಯ್ಯೂಬ್ ಬಾಳ್ಳುಪೇಟೆ (ಪ್ರಧಾನ ಕಾರ್ಯದರ್ಶಿ), ಅಬ್ದುರ್ರಝಾಕ್ ಕಾಡ್ಲೂರು ಕೂಡಿಗೆ ಹಾಗೂ ಖದೀರ್ ಪಾಳ್ಯ (ಜೊತೆ ಕಾರ್ಯದರ್ಶಿ) ಎಂ.ಎಸ್.ಕೆ. ಮುಹಮ್ಮದ್ ಸಖಾಫಿ ಪಾಳ್ಯ (ಕೋಶಾಧಿಕಾರಿ), ಆಸೀಫ್ ಬಾಳ್ಳುಪೇಟೆ (ಸಂಘಟನಾ ಕಾರ್ಯದರ್ಶಿ) ಹಾಗೂ ೧೮ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು. 



Share: