ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ದಾಂಡೇಲಿ ನದಿಯಲ್ಲಿ ಮುಳುಗಿ ಆರು ಪ್ರವಾಸಿಗರ ದುರ್ಮರಣ

ದಾಂಡೇಲಿ ನದಿಯಲ್ಲಿ ಮುಳುಗಿ ಆರು ಪ್ರವಾಸಿಗರ ದುರ್ಮರಣ

Mon, 22 Apr 2024 04:52:28  Office Staff   S O News

ದಾಂಡೇಲಿ : ತಾಲೂಕಿನ ಅಕೋಡಾ ಗ್ರಾಮದ ಬಿರಿಯಂಪಲ್ಲಿ ಕಾಳಿ ನದಿಯಲ್ಲಿ ಮುಳುಗಿ ಆರು ಪ್ರವಾಸಿಗರು ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.

ಹುಬ್ಬಳ್ಳಿಯ ಈಶ್ವರ ನಗರದ ಒಂದೇ ಕುಟುಂಬದ ಆರು ಜನರ‌ ಸಾವನ್ನಪ್ಪಿದವರು. ನಜೀರ್ ಅಹ್ಮದ್ (40), ಅಲ್ಛೀಯಾ ಅಹ್ಮದ್ (10), ಮೋಹಿನ್ ಅಹ್ಮದ್ (6), ರೇಷಾ ಉನ್ನಿಸಾ (38), ಇಫ್ರಾ‌ಅಹ್ಮದ್ (15),
ಅಬೀದ್ ಅಹ್ಮದ್ (12) ಮೃತ ದುರ್ದೈವಿಗಳಾಗಿದ್ದಾರೆ.

ಪ್ರವಾಸಕ್ಕೆಂದು ಅಕೊಡಕ್ಕೆ ಎಂಟು ಜನರು ಬಂದಿದ್ದರು. ಬಾಲಕಿಯೋರ್ವಳು ನೀರಿಗೆ ಬಿದ್ದಾಗ ರಕ್ಷಿಸಲು ಐವರು ದುಮುಕಿದ್ದಾರೆ. ಆಗ ಆರು ಜನರು ಸಾವು ಕಂಡಿದ್ದಾರೆನ್ನಲಾಗಿದೆ

ಆರು ಜನರು ಮೃತದೇಹ ಹೊರತೆಗೆಯಲಾಗಿದ್ದು. ದಾಂಡೇಲಿ ಆಸ್ಪತ್ರೆಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: