ಮಂಗಳೂರು, ಮೇ ೩: ಜಿಲ್ಲೆಯಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ ಜನಪ್ರಿಯವಾಗಿದ್ದು, ಈ ಪದ್ಧತಿಯ ಬೆಳವಣಿಗೆಗೆ ಅಗತ್ಯ ಸೌಕರ್ಯ ಹಾಗೂ ಕಟ್ಟಡ ನಿರ್ಮಾಣಕ್ಕೆ ೫೦ ಲಕ್ಷ ರೂ.ಗಳ ಹೆಚ್ಚುವರಿ ಅನುದಾನವನ್ನು ಒದಗಿಸಲಾಗುವುದು ಎಂದು ರಾಜ್ಯ ಆಯುಷ್ ನಿರ್ದೇಶಕರಾದ ಜಿ. ಎನ್. ಶ್ರೀಕಂಠಯ್ಯ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಈ ಬಗ್ಗೆ ವಿಚಾರ ವಿನಿಮಯ ನಡೆಸಿದ ಅವರು, ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗವನ್ನು ಸಂದರ್ಶಿಸಿದರು. ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಅಯುಷ್ ಅಧಿಕಾರಿ ಡಾ.ಸದಾಶಿವಾನಂದ್ ಉಪಸ್ಥಿತರಿದ್ದರು.