ಭಟ್ಕಳ, ಜನವರಿ 8: ತಾಲ್ಲೂಕು ಪತ್ರಕರ್ತರ ಸಂಘದ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಅಧ್ಯಕ್ಷರಾಗಿ ಕರಾವಳಿ ಅಲೆ ಮತ್ತು ಜನಾಂತರಂಗ ಮಾಧ್ಯಮಗಳ ಶ್ರೀ ರಾಘವೇಂದ್ರ ಹೆಬ್ಬಾರ್ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ವಾರ್ತಾ ಭಾರತಿ ಪತ್ರಿಕೆಯ ಪತ್ರಕರ್ತ ಮುಹಮ್ಮದ್ ರಜಾ ಮಾನ್ವಿಯವರನ್ನು ಸಂಘದ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಸಿಯಾಸತ್ ಉರ್ದು ಪತ್ರಿಕೆಯ ಪತ್ರಕರ್ತ ನಿಸಾರ್ ಅಹ್ಮದ್ ರುಕ್ನುದ್ದೀನ್ ಖಜಾಂಜಿಯಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಪ್ರಕ್ರಿಯೆ ವೇಳೆಯಲ್ಲಿ ಸಂಘಟನೆಯ ಎಲ್ಲಾ ಹನ್ನೆರೆಡು ಸದಸ್ಯರು ಉಪಸ್ಥಿತರಿದ್ದರು