ಭಟ್ಕಳ:೨೪,ಮಂಗಳವಾರ ಸಂಜೆ ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಶಾಸಕ ಜೆ.ಡಿ. ನಾಯ್ಕರ ಅಧ್ಯಕ್ಷತೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಜರುಗಿದ ಶಾಂತಿ ಸಭೆಯಲ್ಲಿ ಕೇವಲ ಮುಸ್ಲಿಮ್ ಸಮುದಾಯದವರು ಮಾತ್ರ ಹಾಜರಿದ್ದುದು ಹಿಂದುಗಳು ಸಹ ಭಾಗವಹಿಸಿದ್ದರೆ ಭವಿಷ್ಯ ಇಲ್ಲಿನ ವಾತವರಣವು ತಿಳಿಗೊಳಿಸುವಲ್ಲಿ ಸಹಕಾರಿಯಾಗುತ್ತಿತ್ತು.
ಕಳೆದ ಒಂದು ವಾರದೊಳಗೆ ಪೋಲಿಸ್ ಇಲಾಖೆಯು ಜುರುಗಿಸಿದ್ದ ಮೂರನೆಯ ಶಾಂತಿ ಸಭೆ ಇದಾಗಿದ್ದು ಇದರಲ್ಲಿಯು ಹಿಂದು ಸಮುದಾಯದ ಅನೇಕರು ಭಾಗವಹಿಸದೆ ಒಂದು ರೀತಿಯ ಬಹಿಷ್ಕಾರವನ್ನು ಹಾಕಿದಂತೆ ಕಾಣುತ್ತಿತ್ತು.

ಭಟ್ಕಳದಲ್ಲಿ ಜಾನುವಾರು ಸಾಗಾಟಕ್ಕೆ ಸಂಬಂಧಿಸಿದಂತೆ ಭಜರಂಗಿಗಳ ದಾಂಧಲೆಯು ಹೆಚ್ಚಾದ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯದವರು ಪೋಲಿಸ್ ಠಾನೆಗೆ ಮುತ್ತಿಗೆ ಹಾಕಿದೆ ಘಟನೆಗೆ ಸಂಬಂಧಿಸಿದಂತೆ ಉಂಟಾದ ಪ್ರಕ್ಷುಬ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನ.೧೮ ರಂದು ಕರೆದ ಶಾಂತಿ ಸಭೆಯಲ್ಲಿ ಹಿಂದು ಸಂಘಟನೆಯವರು ಭಾಗವಹಿಸದೆ ಬಹಿಷ್ಕಾರ ಹಾಕಿದ್ದರು. ಎಲ್ಲಿಯವರೆಗೆ ಗೋಹತ್ಯೆ ನಿಲ್ಲುವುದಿಲ್ಲವೂ ಅಲ್ಲಿಯವರೆಗೆ ತಾವು ಯಾವುದೆ ಶಾಂತಿಪಾಲನ ಸಭೆಯಲ್ಲಿ ಭಾಗವಹಿಸುದಿಲ್ಲ ಎಂಬ ಸಂದೇಶವನ್ನು ಅವು ಪರೋಕ್ಷವಾಗಿ ನೀಡದ್ದವು. ಈ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯು ಹಿಂದುಗಳದ್ದೆ ಬೇರೆ ಶಾಂತಿ ಸಭೆಯನ್ನು ಕರೆದು ಅದರಲ್ಲಿ ಶಾಂತಿಪಾಲನೆಯ ಕುರಿತು ಮಾತನಾಡಿದ್ದರು ಎನ್ನಲಾಗಿದೆ. ಈ ರಿತಿಯಾಗಿ ಹಿಂದು ಮತ್ತು ಮುಸ್ಲಿಮರ ಶಾಂತಿ ಸಭೇಯೆಂದು ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಈ ನಿಟ್ಟಿನಲ್ಲಿ ಇಂದು ಭಟ್ಕಳದ ಎಲ್ಲ ನಾಗರಿಕರ ಶಾಂತಿ ಸಭೆಯನ್ನು ಕರೆಯಲಾಗಿದ್ದರೂ ಸಹ ಹಿಂದು ಸಮುದಾಯದ ಯಾವೊಬ್ಬ ಮುಖಂಡನೂ ಇದರಲ್ಲಿ ಪಾಲ್ಗೊಳ್ಳದೆ ಪೋಲಿಸ್ ಇಲಾಖೆಗೆ ಮುಜುಗರವನ್ನುಂಟು ಮಾಡಿದೆ.

ಶಾಂತಿ ಸಭೆಯಲ್ಲಿ ನಡೆದಿದ್ದೇನು?: ಶಾಸಕ ಜೆ.ಡಿ.ನಾಯ್ಕ, ಕಾಂಗ್ರೇಸ್ ಮುಖಂಡ ದಾಮೋದರ್ ಗರ್ಡಿಕರ ಸಿ.ಪಿ.ಐ ಮುಖಂಡ ಸುಭಾಸ್ ಕೊಪ್ಪಿಕರ್ ರನ್ನು ಹೊರತುಪಡಿಸಿ ಯಾವೊಬ್ಬ ಹಿಂದು ಮುಖಂಡನೂ ಈ ಸಭೆಯಲ್ಲಿ ಭಾಗವಹಿಸಲಿಲ್ಲ. ಇದರಿಂದಾಗಿ ಇಲ್ಲಿನ ಮುಸ್ಲಿಮ್ ಮುಖಂಡರು ಬೇಸರವನ್ನು ವ್ಯಕ್ತಪಡಿಸಿದ್ದು ಶಾಂತಿ ಬೇಕಾಗಿರುವುದು ಕೇವಲ ಮುಸ್ಲಿಮರಿಗಲ್ಲ ಇಲ್ಲಿನ ಸಮಸ್ತ ನಾಗರೀಕರಿಗೆ ಶಾಂತಿ ಬೇಕಾಗಿದೆ ಈ ನಿಟ್ಟಿನಲ್ಲಿ ಇಂದಿನ ಶಾಂತಿ ಸಭೆಯಲ್ಲಿ ಹಿಂದುಗಳು ಭಾಗವಹಿಸದಿರುವುದು ತಮಗೆ ಬೇಸರವನ್ನುಂಟು ಮಾಡಿದೆ ಎಂದು ಶಾಂತಿಸಭೆಯಲ್ಲಿ ಭಾಗವಹಿಸಿದ್ದ ತಂಝೀಮ್ ಅಧ್ಯಕ್ಷ ಡಾ.ಬದ್ರುಲ್ ಹಸನ್ ಮುಅಲ್ಲಿಮ್ ಬೇಸರವನ್ನು ವ್ಯಕ್ತಪಡಿಸಿದ್ದು ಇದರ ಹಿಂದಿರುವ ರಹಸ್ಯವೇನು ಎಂದು ಸಭೆಯಲ್ಲಿ ಪ್ರಶ್ನಸಿದರು. ಶಾಸಕ ಜೆ.ಡಿ.ನಾಯ್ಕ ಮಾತನಾಡಿ ಇಲ್ಲಿ ಗಲಭೆಯನ್ನು ಸೃಷ್ಟಿಸುವವರು ಯಾರು ಎನ್ನವುದು ಪೊಲಿಸರು ಚೆನ್ನಾಗಿಬಲ್ಲರು ಅವರ ಮೇಲೆ ನಿಗಾವಹಿಸಿ ಅವರು ದುಷ್ಕೃತ್ಯ ಮಾಡದಂತೆ ಎಚ್ಚರಿಕೆಯನ್ನು ವಹಿಸಬೇಕೆಂದರು.ಮುಸ್ಲಿಮರ ಹಬ್ಬದ ನಂತರ ಹಿಂದುಗಳ ಹಬ್ಬವು ಸಹ ಬರುತ್ತದೆ ಆದ್ದರಿಂದ ನಗರದಲ್ಲಿ ಶಾಂತಿ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೆಲವು ಪೋಲಿಸರು ಒಂದು ಕೊಮಿನ ಪರವಾಗಿ ಕೆಲಸಮಾಡುತ್ತಿದ್ದಾರೆಂಬುದು ತಮ್ಮ ಗಮನಕ್ಕೆ ಬಂದಿದ್ದು ಯಾವುದೆ ರಾಜಕೀಯ ಒತ್ತಡಗಳಿಗೆ ಮಣಿದು ಈ ರೀತಿಯಾಗಿ ವರ್ತಿಸಿದ್ದಲ್ಲಿ ತಾನು ಗೃಹ ಸಚಿವರ ಮನೆಯ ಮುಂದೆ ಧರಣಿ ನೀಡುವುದಾಗಿ ತಿಳಿಸಿದರು.
ಪುರಸಭಾ ಸದಸ್ಯ ಸನಾವುಲ್ಲಾ ಗವಾಯಿ ಮಾತನಾಡಿ ಭಟ್ಕಳದಲ್ಲಿ ಯಾರೂ ಸಹ ಗೋವುಗಳನ್ನು ವಧಿಸುವುದಿಲ್ಲ ನಾವು ಸಹ ಗೋವಿನ ರಕ್ಷೆಯನ್ನು ಮಾಡುತ್ತೇವೆ ಇಲ್ಲಿ ಎಲ್ಲರೂ ಎತ್ತು ಕೋಣವನ್ನೇ ಬಲಿ ನೀಡುತ್ತಾರೆ ಮಾಧ್ಯಮಗಳಲ್ಲಿ ಇದು ತಪ್ಪಾಗಿ ಗೋವು ಎಂಬ ಪದವನ್ನು ಬಳಸಲಾಗುತ್ತಿದೆ ಹಾಗೆಯೆ ಪೋಲಿಸರು ಸಹ ಗೋವು ಸಾಗಾಟ ಎಂದು ಪ್ರಕರಣ ದಾಖಲಿಸಿಕೊಳ್ಳುತ್ತಾರೆ ಎಂದರು.
ಪುರಸಭಾ ಅಧ್ಯಕ್ಷ ಪರ್ವೇಜ್ ಕಾಸಿiಜಿ ಮಾತನಾಡಿ ಮುಂದೆ ಹಿಂದುಗಳ ಹಬ್ಬವು ಸಹ ಬರುತ್ತದೆ ಆಗ ನಾವು ಶಾಂತಿ ಸಭೆಯನ್ನು ಬಹಿಷ್ಕಾರ ಮಾಡದೆ ಶಾಂತಿ ಸಭೇಯಲ್ಲಿ ಭಾಗವಹಿಸುತ್ತೇವೆ ಅವರು ಭಹಿಷ್ಕರಿಸಿದರೆ ನಾವ್ಯಾಕೆ ಬಹಿಷ್ಕರಿಸಬೇಕು ಎಂದರು.
ಸಭೆಯಲ್ಲಿ ಸಹಾಯಕ ಕಮಿಷನರ್ ತ್ರಿಲೋಕಚಂದ್ರ, ಡಿವೈಎಸ್‌ಪಿ ವೇದಮೂರ್ತಿ, ಸಿ.ಪಿ.ಐ.ಗುರುಮತ್ತೂರು, ತಂಝೀಮ್ ಪ್ರಧಾನ ಕಾರ್ಯದರ್ಶಿ ಎಸ್.ಜೆ.ಖಾಲಿದ್, ಎಸ್.ಎಮ್. ಅಬ್ದುಲ್ ಅಝೀಮ್ ಅಂಬಾರಿ, ಅಬ್ದುಲ್ ರಖೀಬ್ ಎಮ್.ಜೆ. ಮತ್ತಿತರು ಉಪಸ್ಥಿತರಿದ್ದರು.
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ