ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಡಾ.ಸಾದಾತ್ ಹುಸೇನ್’ಗೆ ಎಕಾನಾಮಿಕ್ಸ್ ಆಫ್ ಎಜುಕೇಶನ್ ನಲ್ಲಿ ಜೆ.ಎನ್.ಯು ವಿ.ವಿ ದಿಂದ ಡಾಕ್ಟರೇಟ್ ಪದವಿ

ಡಾ.ಸಾದಾತ್ ಹುಸೇನ್’ಗೆ ಎಕಾನಾಮಿಕ್ಸ್ ಆಫ್ ಎಜುಕೇಶನ್ ನಲ್ಲಿ ಜೆ.ಎನ್.ಯು ವಿ.ವಿ ದಿಂದ ಡಾಕ್ಟರೇಟ್ ಪದವಿ

Fri, 12 Jul 2024 17:32:00  Office Staff   SOnews

ಉಡುಪಿ: ಉಡುಪಿ ಜಿಲ್ಲೆಯ ಕಿರಿಮಂಜೇಶ್ವರ ಗ್ರಾಮದ ವಿದ್ಯಾರ್ಥಿ ದೆಹಲಿಯ ಪ್ರತಿಷ್ಠಿತ ಕೇಂದ್ರೀಯ ವಿಶ್ವವಿದ್ಯಾಲಯ ಜೆ.ಎನ್.ಯು ನಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ‌.

ಝಕೀರ್ ಹುಸೇನ್ ಸೆಂಟರ್ ಫಾರ್ ಸ್ಟಡೀಸ್ ವಿಭಾಗದ ಅಸಿಸ್ಟೆಂಟ್ ಪ್ರೋಫೆಸರ್ ಡಾ. ಪ್ರದೀಪ್ ಚೌದ್ರಿ ಅವರ ಮಾರ್ಗದರ್ಶನದಲ್ಲಿ ಎಕಾನಾಮಿಕ್ಸ್ ಆಫ್ ಎಜುಕೇಶನ್ ಎಂಬ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.

ಅವರು ಈ ಮುಂಚೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡೆವಲಪ್ಮೆಂಟ್ ಸ್ಟಡೀಸ್ ನಲ್ಲಿ ಎಮ್.ಎ ಮತ್ತು JNU ನಲ್ಲಿ ಎಕಾನಾಮಿಕ್ಸ್ ಆಫ್ ಎಜುಕೇಶನ್ ನಲ್ಲಿ ಎಮ್.ಫೀಲ್ ಪದವಿ ಪಡೆದಿದ್ದರು.

ಡಾ. ಸಾದತ್ ಹುಸೇನ್ ಎಸ್.ಐ.ಓ ಸಂಘಟನೆಯ ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಇವರು ಕಿರಿಮಂಜೇಶ್ವರದ ನಿವಾಸಿಗಳಾದ ಬಿಕೆ ಅಲಿ ಸಾಹೇಬ್ ಮತ್ತು ಬಿ ಸಫೂರಾ ಅವರ ಪುತ್ರರಾಗಿದ್ದಾರೆ.

 


Share: