ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಆಸ್ಪತ್ರೆ ನಿರ್ವಾಹಣೆಯಲ್ಲಿ ವೃತ್ತಿಪರತೆ ತರಬೇತಿ ಕೋರ್ಸ್ ಗೆ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಮ್) ಇದರ ವತಿಯಿಂದ ನಡೆಯುವ ಆಸ್ಪತ್ರೆ ನಿರ್ವಹಣೆಯಲ್ಲಿ ವೃತ್ತಿಪರತೆ ಕೋರ್ಸಗೆ ರಾಜ್ಯದ ೨೦ ಮಂದಿ ವೈದ್ಯರಲ್ಲಿ ಭಟ್ಕಳದ ಸವಿತಾ ಕಾಮತ್ ಆಯ್ಕೆಯಾಗಿದ್ದಕ್ಕೆ ಇಲ್ಲಿನ ಸಾರ್ವಜನಿಕರು, ವಿವಿಧ ಸಂಘಸಂಸ್ಥೆಗಳ ಮುಖಂಡರು ಪದಾಧಿಕಾರಿಗಳು ಸಂತೋಷ ಪಡುತ್ತಿದ್ದಾರೆ.