ಚಿಕ್ಕಮಗಳೂರು. ಡಿ.೧೭.ಪ್ರತಿಭೆಯು ಆಸ್ತಿಯಾಗಿ ಪರಿವರ್ತನೆಯಾದರೆ ಬದುಕಿಗೆ ಭದ್ರ ನೆಲೆಸಿಗುತ್ತದೆ. ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸುವ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯುವ ಪ್ರತಿಭೆಗಳನ್ನು ಎಲ್ಲಾ ಹಂತದಲ್ಲೂ ಪೋಷಕರು, ಶಿಕ್ಷಕರು ಮತ್ತು ಸಾರ್ವಜನಿಕರು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಕಸಾಪ ಸಂಚಾಲಕ ಕುಂದೂರು ಅಶೋಕ್ ಹೇಳಿದರು.
ಇತ್ತೀಚಿಗೆ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಆಲ್ದೂರು ಹೋಬಳಿ ಕಸಾಪ ಹಾಗೂ ಸರ್ಕಾರಿ ಪ.ಪೂ.ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಆಲ್ದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಚದುರಂಗ ಸ್ಪರ್ದೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನವೋದಯ ಶಾಲೆಯ ಸಿಂಚನ ಹಾಗೂ ಡಿ.ಎ ರಾಹುಲ್‌ಗೌಡ ಎಂಬ ವಿಧ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಸನ್ಯಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಹೋಬಳಿ ಘಟಕದ ಅಧ್ಯಕ್ಷ ಹೆಚ್.ಎಲ್. ರವಿಕುಮಾರ್ ವಹಿಸಿದ್ದರು. ಕಾಲೇಜು ಪ್ರಾಂಶುಪಾಲರಾದ ಇಶ್ರತ್ ನೌಶದ್ ಭಾನು ಹಾಗು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.