ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಜಾಲಿಯಲ್ಲಿ ಬೀಚ್ ಸ್ವಚ್ಛತಾ ಅಭಿಯಾನ: ಅಂಜುಮನ್ ಬಿಎಡ್ ವಿದ್ಯಾರ್ಥಿಗಳಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ

ಜಾಲಿಯಲ್ಲಿ ಬೀಚ್ ಸ್ವಚ್ಛತಾ ಅಭಿಯಾನ: ಅಂಜುಮನ್ ಬಿಎಡ್ ವಿದ್ಯಾರ್ಥಿಗಳಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ

Fri, 20 Sep 2024 01:15:19  Office Staff   SOnews

ಭಟ್ಕಳ: ಅಂಜುಮನ್ ಕಾಲೇಜ್ ಆಫ್ ಎಜುಕೇಶನ್ (ಬಿಎಡ್) ವಿದ್ಯಾರ್ಥಿಗಳು ಜಾಲಿ ಬೀಚ್ನಲ್ಲಿ ಗುರುವಾರ ಬೀಚ್ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡರು.

ಕಾರ್ಯಕ್ರಮವನ್ನು ಭಟ್ಕಳ ಮುಸ್ಲಿಂ ಯುತ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮುಬಶಿರ್ ಹಲ್ಲಾರೆ ಉದ್ಘಾಟಿಸಿದರು.

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಬೆಳಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಮುಬಶಿರ್, "ಶುಚಿತ್ವವು ನಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ಪರಿಸರ ಸುಧಾರಣೆಯಲ್ಲೂ ಮಹತ್ವದ ಪಾತ್ರವಹಿಸುತ್ತದೆ," ಇದು ಕೇವಲ ಒಂದು-ಬಾರಿ ಮಿಷನ್ ಆಗದೆ ದೈನಂದಿನ ಅಭ್ಯಾಸವಾಗಿರಬೇಕು ಎಂದರು. ವಿದ್ಯಾರ್ಥಿಗಳು ಸಮುದ್ರ ಕಿನಾರೆಯ ತ್ಯಜ್ಯವನ್ನು ಸ್ವಚ್ಚಗೊಳಿಸುವುದರ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಚತೆಯ ಕುರಿತು ಜಾಗೃತಿ ಮೂಡಿಸಿದರು.

ವೇಳೆ ಪ್ರಾಂಶುಪಾಲ ಹಸನ್ ಬಾಗೇವಾಡಿ, ಉಪನ್ಯಾಸಕರಾದ ಶ್ವೇತಾ ಕುಮಾರಿ, ಮೋಹನ್ ಮೇಸ್ತ, ತೇಜಸ್ವಿನಿ ಹೊಸದ್, ತಬಸ್ಸುಮ್ ಅರಾ ಶೇಖ್, ಹಾಗೂ ತಸ್ಲೀಂ ಬಾಟಿಯಾ ಉಪಸ್ಥಿತರಿದ್ದು ಸ್ವಚ್ಚತೆಯ ಕಾರ್ಯದಲ್ಲಿ ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸಿದರು.

 


Share: