ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಜಾಗತಿಕ ಸುದ್ದಿ / ಭಟ್ಕಳ: ಜನವರಿ 2 ರಂದು ಮಾವಳ್ಳಿ ಪಂಚಾಯತ್ ಜನಸ್ಪಂದನಾ ಕಾರ್ಯಕ್ರಮ

ಭಟ್ಕಳ: ಜನವರಿ 2 ರಂದು ಮಾವಳ್ಳಿ ಪಂಚಾಯತ್ ಜನಸ್ಪಂದನಾ ಕಾರ್ಯಕ್ರಮ

Thu, 31 Dec 2009 18:29:00  Office Staff   S.O. News Service
ಭಟ್ಕಳ, ಡಿಸೆಂಬರ್ 31:ಜ.2 ರಂದು ಪೂರ್ವಾಹ್ನ ೧೧ ಗಂಟೆಗೆ ತಾಲೂಕಿನ ಮಾವಳ್ಳಿ ಪಂಚಾಯತ್ ವ್ಯಾಪ್ತಿಯ ಜನಸ್ಪಂದನ ಸಭೆಯನ್ನು ಮಾವಳ್ಳಿಯ ಓಲಗ ಮಂಟಪದಲ್ಲಿ ಆಯೋಜಿಸಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಹಾವಾಲುಗಳನ್ನು ನೀಡಬಹುದಾಗಿದೆ ಎಂದು ತಹಸಿಲ್ದಾರ್ ಕಾರ್ಯಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಿದ್ದು ಇದರಲ್ಲಿ ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಡಿ.ನಾಯ್ಕ ಹಾಗೂ  ತಾಲೂಕಾ ಮಟ್ಟದ  ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿರುವರು. ಅಂಗವಿಕಲರ ವೇತನ, ಸಂಧ್ಯಾ ಸುರಕ್ಷಾ ವಿಧವಾ ವೇತನ, ವೃದ್ಧಪ್ಯಾ ವೇತನ ಹಾಗೂ ಇತರ ಇಲಾಖೆಯ ಮುಖ್ಯಸ್ಥರು ಫಲಾನುಭವಿಗಳ ಆದೇಶ ವಿತರಣೆಯನ್ನು ಮಾಡಲಿರುವರು ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯಬೇಕೆಂದು ಪ್ರಕಟಣೆಯಲ್ಲಿ ತಹಸಿಲ್ದಾರರು ಕೋರಿದ್ದಾರೆ.
 
ತಾಲೂಕಿನಲ್ಲಿ ನಡೆಯು ವಿವಿಧ ಜನಸ್ಪಂದನ ಸಭೇಗಳ ವಿವಿರ:  ಜ.೨ ಮಾವಳ್ಳಿ, ೧೬ ಸೋಸಗಡಿ ಗ್ರಾಮಪಂಚಾಯತ್ ಮಾವಿನಕುರ್ವೆ, ೩೦ ರಂದು ಗ್ರಾ.ಪಂ.ಹೆಬಳೆ, ಫೆ.೬ ಗ್ರಾಮಪಂಚಾಯತ್ ಬೇಂಗ್ರೆ, ಫೆ.೨೦ ಗ್ರಾ.ಪಂ ಮುಂಡಳ್ಳಿ, ಮಾ.೧ ಗ್ರಾ.ಪಂ ಕೊಪ್ಪ(ಉತ್ತರಕೊಪ್ಪ), ಮಾ.೬ ಗ್ರಾ.ಪಂ. ಹಾಡುವಳ್ಳಿ, ಮಾ.೨೦ ಗ್ರಾ.ಪಂ.ಬೈಲೂರು, ಮಾ.೨೭ ಪುರಸಭೆ ಭಟ್ಕಳ, ಎ.೩ ಗ್ರಾ.ಪಂ ಕಾಯ್ಕಿಣಿ ಗಳಲ್ಲಿ ಜರುಗುವುದು.

ವರದಿ: ಎಮ್ಮಾರ್ ಮಾನ್ವಿ, ಭಟ್ಕಳ

Share: