ಭಟ್ಕಳ: ಹಿರಿಯ ಪುರೋಹಿತರೂ ಚಿತ್ರಾಪುರ ಮಠದ ಅರ್ಚಕರು ಆದ ರಾಮೇಶ್ವರ ಗಂಗಾಧರ ಹರಿದಾಸ (೬೮) ಇವರು ತೀವ್ರ ಹೃದಯಾಘಾತದಿಂದ ನಿದನರಾದರು.
ಮೃತರು ಕಳೆದ ಸುಮಾರು ೪೪ ವರ್ಷಗಳ ಕಾಲ ಚಿತ್ರಾಪುರ ಮಠದಲ್ಲಿ ಅರ್ಚಕರಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು ಶ್ರೀ ಮಠದ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ಶ್ರೀಯುತರು ತಮ್ಮ ವಯೋವೃದ್ಧ ತಾಯಿ ಮೀರಾ ಹರಿದಾಸ (೯೪) ಹಾಗೂ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.