ಪಡುಬಿದ್ರಿ, ಡಿಸೆಂಬರ್ 20: ರಸ್ತೆ ಮಧ್ಯೆ ನಿಲ್ಲಿಸಿದ ಟ್ಯಾಂಕರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ರಾತ್ರಿ ಇಲ್ಲಿನ ಬೀಡು ಬಳಿ ನಡೆದಿದೆ.
ಮೃತ ಬೈಕ್ ಸವಾರನನ್ನು ಜೋಕಟ್ಟೆಯ ಇಸ್ಮಾಯೀಲ್ (25) ಎಂದು ಗುರುತಿಸಲಾಗಿದೆ. ಸಹಸವಾರ ಮುಹಮ್ಮದ್ ರಶೀದ್ ಗಾಯಗೊಂಡಿದ್ದಾನೆ. ಕಾಯಿನ್ ಬಾಕ್ಸ್ ಮಾರಾಟ ಮತ್ತು ದುರಸ್ಥಿ ಮಾಡುವ ಇಸ್ಮಾಯೀಲ್ ಕಾರ್ಕಳದಿಂದ ಪಡುಬಿದ್ರಿಯಾಗಿ ಜೋಕಟ್ಟೆಗೆ ಬೈಕ್ನಲ್ಲಿ ತೆರಳಿದ್ದ. ಈ ವೇಳೆ ಡಾಮಾರು ತುಂಬಿದ ಟ್ಯಾಂಕರ್ ಕೆಟ್ಟು ರಸ್ತೆ ಮಧ್ಯೆಯೇ ನಿಂತಿತ್ತು. ಎದುರಿನಿಂದ ಬಂದ ವಾಹನದ ಬೆಳಕಿನಿಂದ ನಿಯಂತ್ರಣ ತಪ್ಪಿದ ಬೈಕ್ ಸವಾರ ನಿಂತಿದ್ದ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಎಂದು ಪ್ರಕರಣ ದಾಖಲಿಸಿಕೊಂಡ ಪಡುಬಿದ್ರಿ ಪೊಲೀಸರು ತಿಳಿಸಿದ್ದಾರೆ.
ವರದಿ: ಹಮೀದ್, ಪಡುಬಿದ್ರಿ