ಗಂಗೊಳ್ಳಿ,ಡಿಸೆಂಬರ್ 26: ದಿನಾಂಕ ೨೪/೧೨/೦೯ರಂದು ಬೆಳಿಗ್ಗೆ ಸಮಯ ೦೫:೦೦ಗಂಟೆಗೆ ಗಂಗೊಳ್ಳಿ ಠಾಣಾ ಸರಹದ್ದಿನ ಹೆಮ್ಮಾಡಿಯ ಸಂತೋಷ ನಗರದ ವಾಸಿ ಯೂಸುಫ್ (೩೪ವರ್ಷ)ರವರು ತನ್ನ ನೆರೆಮನೆಯವರಾದ ಬಿ. ಜಾಫರ್ ಸಾಹೇಬ್‌ರೊಂದಿಗೆ ಬಜಾಜ್ ಎಂ. ೮೦ ಮೋಟಾರು ಸೈಕಲಿನಲ್ಲಿ ಗಂಗೊಳ್ಳಿಯಲ್ಲಿರುವ ತನ್ನ ಹೆಂಡತಿ ಮನೆಗೆ ಹೋಗುತ್ತಿರುವಾಗ ಮುಲ್ಲಿಕಟ್ಟಿ ಎಂಬಲ್ಲಿ ಬಿ. ಜಾಫರ್‌ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮೋಟಾರು ಸೈಕಲ್‌ನ್ನು ಚಲಾಯಿಸಿದ ಪರಿಣಾಮ ಹತೋಟಿ ತಪ್ಪಿ ಯೂಸುಫ್‌ರವರು ಕೆಳಗೆ ಬಿದ್ದು ಬಲಕೈ ಮೂಳೆ ಮುರಿತ ಮತ್ತು ಹಣೆಯಲ್ಲಿ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಈ ಬಗ್ಗೆ ಗಾಯಾಳು ಯೂಸುಫ್‌ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ ೧೨೨/೦೯ ಕಲಂ ೨೭೯, ೩೩೮ ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಗೊಳ್ಳಿ: ದಿನಾಂಕ ೨೩/೧೨/೦೯ ರಂದು ಸಮಯ ೨೦:೧೫ ಗಂಟೆಗೆ ಗಂಗೊಳ್ಳಿ ಠಾಣಾ ಸರಹದ್ದಿನ ರಾಷ್ಟ್ರೀಯ ಹೆದ್ದಾರಿ ೧೭ರ ಮುಳ್ಳಿಕಟ್ಟೆ ಜಂಕ್ಷನ್ ಬಳಿ ನಡೆದ ಎರಡು ಮೋಟಾರು ಸೈಕಲ್‌ಗಳ ಮುಖಾಮುಖಿಯಲ್ಲಿ ಮೋಟಾರು ಸೈಕಲ್ ಸವಾರರಾದ ಉಪ್ಪಿನಕುದ್ರುವಿನ ಮಹಾಬಲೇಶ್ವರ ಶೇರಿಗಾರ (೫೫ ವರ್ಷ) ಹಾಗೂ ಅವರ ತಮ್ಮನ ಮಗನಾದ ಅಜಿತ್‌ರವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಎದುರಿನಿಂದ ಢಿಕ್ಕಿ ಹೊಡೆದ ಬೈಕ್ ಸವಾರರಾದ ರೋಹಿತಾಶ್ವ ಅಚಾರ್ಯರಿಗೂ ಸಣ್ಣಪುಟ್ಟ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಮಹಾಬಲೇಶ್ವರ ಶೇರಿಗಾರರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ ೧೨೩/೦೯ ಕಲಂ ೨೭೯, ೩೩೭ ಐಪಿಸಿ ಮತ್ತು ೧೩೪(ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಚಿತ್ರ, ವರದಿ: ಇಬ್ರಾಹಿಂ, ಗಂಗೊಳ್ಳಿ