ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಗೋಕರ್ಣ : ಕುಡ್ಲೆ ಬೀಚಿನಲ್ಲಿ ಮೂರು ಪ್ರವಾಸಿಗರ ಜೀವ ರಕ್ಷಣೆ

ಗೋಕರ್ಣ : ಕುಡ್ಲೆ ಬೀಚಿನಲ್ಲಿ ಮೂರು ಪ್ರವಾಸಿಗರ ಜೀವ ರಕ್ಷಣೆ

Mon, 11 Mar 2024 04:55:55  Office Staff   SO News

ಗೋಕರ್ಣ : ಬೆಂಗಳೂರು ಮೂಲದ ಮೂವರು ಪ್ರವಾಸಿಗರನ್ನ ಗೋಕರ್ಣದಲ್ಲಿ ರಕ್ಷಣೆ ಮಾಡಲಾಗಿದೆ.

ಸ್ಮಿತಾ ರವಿಚಂದ್ರನ್ (೨೩) ನಿಹಾರಿಕಾ ಗಿರಿ (೨೨) ಪವಿತ್ರ ಸುಂದರ್ (೨೨)ರಕ್ಷಣೆಗೊಳಗಾದವರು. ಇವರು ಗೋಕರ್ಣ ಪ್ರವಾಸಕ್ಕಾಗಿ ಬಂದಿದ್ದು ಭಾನುವಾರ ಕುಡ್ಲೇಬೀಚಿನಲ್ಲಿ ಈಜಲು ತೆರಳಿದ್ದಾಗ  ಘಟನೆ ನಡೆದಿದೆ

ಈಜುವ ಸಂದರ್ಭದಲ್ಲಿ  ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದನ್ನು  ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ನವೀನ್ ಅಂಬಿಗ, ಮಂಜುನಾಥ್ ಹರಿಕಂತ್ರ ತಕ್ಷಣ ರಕ್ಷಣೆಗೆ ಧಾವಿಸಿದ್ದರು. ಅವರಿಗೆ  ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ ಅವರ ಜೆಟ್ ಸ್ಕೀ ಮೂಲಕ ಸಹಾಯ ಮಾಡಿ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.


Share: