ಸಕಲೇಶಪುರ, ಡಿಸೆಂಬರ್ 30: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರೈಸ್ತರೊಬ್ಬರ ಮನೆಯ ಮುಂದೆ ನಿರ್ಮಿಸಿದ್ದ ಗೋದಲಿ(ಕ್ರಿಬ್)ಬೊಂಬೆಗಳನ್ನು ಕಿಡಿಗೇಡಿಗಳು ಬುದವಾರ ರಾತ್ರಿ ವಿರೂಪಗೊಳಿಸಿರುವ ಘಟನೆ ತಾಲೂಕಿನ ಸುಂಡೆಕೆರೆ ಗ್ರಾಮದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂದಿಸಿದಂತೆ ಇಲ್ಲಿಯ ಪಾದ್ರಿ ಊರಿನ ಶಾಂತಿಗಾಗಿ ಪ್ರಾಯಶ್ಚಿತ ಪ್ರಾರ್ಥನೆ ಸಲ್ಲಿಸಿ ಸಮಾಜಕ್ಕೆ ವಿಷೇಶತೆಯನ್ನು ತೋರಿದ್ದಾರೆ.
ವಿಗ್ರಹಗಳಿಗೆ, ಪ್ರಾರ್ಥನಾ ಮಂದಿರಗಳಿಗೆ, ಸಾಧಕರ ಪ್ರತಿಮೆಗಳಿಗೆ ಉದೇಶಪೋರ್ವಕವಾಗಿ ಕಿಡಿಗೇಡಿಗಳು ಅವಮಾನ ಮಾಡಿದಾಗ ಜನ ರೊಚ್ಚಿಗೆದ್ದು ಬೀದಿರಂಪ ಮಾಡಿ ಆಕೋಶ ವ್ಯಕ್ತಪಡಿಸಿ ಸಮಾಜಗಾತಕರ ತಂತ್ರಕ್ಕೆ ಒತ್ತುನೀಡುವುದು ಸಹಜಕ್ರಿಯೆ ಆದರೆ ಸುಂಡೆಕೆರೆ ಗ್ರಾಮದ ಕ್ರೈಸ್ತರು ಗಾಂದಿಗರಿಯ ಮೂಲಖ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಘಟನೆಯ ವಿವರ:ಮಾರ್ಷಲ್ ಪಿಂಟೂ ಎಂಬುವರ ಮನೆಯ ಮುಂದೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಿರ್ಮಿಸಿದ್ದ ಗೋದಲಿ(ಕ್ರಿಬ್)ಅನ್ನು ರಾತ್ರಿ ಕಿಡಿಗೇಡಿಗಳು ಕುರಬರ ಹಾಗೂ ಮೂರು ಜ್ಯೋತಿಷಿಗಳ ಬೊಂಬೆಗಳನ್ನು ಕಲ್ಲಿನಿಂದ ಒಡೆದು ಹಾಕಿದ್ದಾರೆ. ಈ ಕೃತ್ಯ ರಾತ್ರಿ ೧೧ ಗಂಟೆಯ ನಂತರ ನಡೆದಿದೆ. ಮಾರ್ಷಲ್ ಪಿಂಟೂ ದಂಪತಿಗಳು ರಾತ್ರಿ ಮಂಗಳೂರಿಗೆ ಮದುವೆಗಾಗಿ ತೆರಳಿದ್ದರೆಂದು ಮನೆಯಲ್ಲಿ ಕೆಲಸದ ಹುಡುಗ ಸತ್ಯ ಮಾತ್ರ ಇದ್ದನೆಂದು ಹೇಳಲಾಗಿದೆ.
ವಿಶೇಷ ಪ್ರಾರ್ಥನೆ : ಸುದ್ದಿಗಾರರೊಂದಿಗೆ ಮಾತನಾಡಿದ ಸುಂಡೆಕೆರೆ ಚರ್ಚ್ನ ಫಾದರ್ ಪಾಸ್ಕಲ್ ಮರಿಯಪ್ಪ, ಈ ಕೃತವನ್ನು ದುರುದ್ದೇಶದಿಂದ ಮಾಡಲಾಗಿದೆ ದೇವರನ್ನು ಅವಮಾನಿಸುವ ಕೃತ್ಯ ಖಂಡನೀಯ, ಈ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ದೇವರು ಕ್ಷಮಿಸಲಿ, ಅವರಿಗೆ ಶಾಪ ಹಾಕುವುದಿಲ್ಲ, ಈ ಪ್ರಯುಕ್ತ ಇಂದು ಸಂಜೆ ಚರ್ಚ್ನಲ್ಲಿ ಪ್ರಾಯಶ್ಚಿತ್ತ ಪ್ರಾರ್ಥನೆ ನಡೆಸುವುದಾಗಿ ತಿಳಿಸಿದರು.
ಖಂಡನೆ : ಸ್ಥಳಿಯ ಮುಖಂಡ ನಾಗರಾಜೇಗೌಡ ಮಾತನಾಡಿ ಸುಂಡೆಕರೆ ಸೌಹಾರ್ದಕ್ಕೆ ಪ್ರಸಿದ್ದಿಯಾದ ಗ್ರಾಮವಾಗಿದೆ. ಕೇವಲ ೫೦ ಮೀಟರ್ ಅಂತರದಲ್ಲಿ ಚರ್ಚ್, ಮಸೀದಿ ಮತ್ತು ಗಣಪತಿ ದೇವಸ್ಥಾನವಿದೆ. ಇಲ್ಲಿಯವರೆಗೆ ಇಂತಹ ಘಟನೆ ನಡೆದಿಲ್ಲ ಈ ಕೃತ್ಯ ನಡೆಸಿರುವರ ವಿರುದ್ಧ ಪೋಲೀಸರು ಗಂಭೀರವಾಗಿ ತನಿಖೆ ನಡೆಸಿ ಆರೋಪಿಗಳನ್ನು ಕೂಡಲೆ ಬಂದಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಒಗ್ಗಟ್ಟಿದೆ:ಕಲಾವಿದ ಹೊನ್ನೇಗೌಡ ಮಾತನಾಡಿ, ಈ ಗ್ರಾಮದಲ್ಲಿನ ಶಾಂತಿಯನ್ನು ಕದಡಲು ಯಾರಿಂದಲು ಸಾದ್ಯವಿಲ್ಲಾ ಎಲ್ಲಾ ಧರ್ಮದವರು ಒಗ್ಗಟ್ಟಿನಿಂದ ಬದುಕುತಿದ್ದಾರೆ. ಆದ್ದರಿಂದ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲಾ. ಮತೀಯ ಭಾವನೆ ಕೆರಳಿಸುವ ಕುತಂತ್ರಿಗಳ ತಂತ್ರ ಸಪಲವಾಗಲು ಬಿಡುವುದಿಲ್ಲಾ ಎಂದರು.
ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಗಣೇಶ್, ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.