ಭಟ್ಕಳ:ನಾರಾಯಣ ಗುರುಗಳ ಅನುಯಾಯಿಗಳು ಕೇವಲ ಗುರಮಂದಿರ ಕಟ್ಟಿದರಷ್ಟೇ ಸಾಲದು ಜ್ಞಾನವನ್ನು ಹೆಚ್ಚಿಸಲು ಗ್ರಂಥಾಲಗಳನ್ನು ಸ್ಥಾಪಿಸಿ, ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿAದ ಬಲಿಷ್ಟರಾಗಿ ಎಂಬ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಜೆ. ಹರಿಪ್ರಸಾದ ಹೇಳಿದರು.
ಅವರು ಭಟ್ಕಳದ ಕರಿಕಲ್ ದ್ಯಾನ ಮಂದಿರದಲ್ಲಿ ಶ್ರೀ ನಾರಾಯಣ ಗುರುಗಳ ೧೭೦ ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಹಿಂದೆ ಕೇರಳದ ದೇವಸ್ಥಾನದಲ್ಲಿ ದುರ್ಬಲ ವರ್ಗದವರಿಗೆ ಪ್ರವೇಶ ನಿಷೇದವಿದ್ದ ಕಾಲದಲ್ಲಿ ಶ್ರೀ ನಾರಾಯಣ ಗುರುಗಳು ರಕ್ತರಹಿತ ಕ್ರಾಂತಿಯನ್ನು ಉಂಟು ಮಾಡಿ ದುರ್ಬಲ ವರ್ಗದವರಿಗಾಗಿಯೇ ಅನೇಕ ಶಿವನ ಮಂದಿರಗಳನ್ನು ಕಟ್ಟಿ ದೇಶದಲ್ಲಿ ಭಾತೃತ್ವ ,ಸಹೋದರತೆ ಹಾಗೂ ಸಮಬಾಳ್ವೆಯ ಬಗ್ಗೆ ಅರಿವು ಮೂಡಿಸಿದ ಮಹಾನ ಪುರುಷರಾಗಿದ್ದಾರೆ, ದುರ್ಬಲ ವರ್ಗದವರ ಹೀನ ಸ್ಥಿತಿಯನ್ನು ಅರಿತ ನಾರಾಯಣ ಗುರುಗಳು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಬಹಳಷ್ಟು ಪ್ರಯತ್ನಮಾಡಿದರು. ಧರ್ಮದಲ್ಲಿ ಸಮಾನತೆ ಇಲ್ಲದ ಸಮಯದಲ್ಲಿ ಶ್ರೀ ಗುರುಗಳು ಯಾರ ವಿರುದ್ದವೂ ಮಾತನಾಡದೇ ದುರ್ಬಲರಿಗೆ ಶಿಕ್ಷಣದ ಅರಿವು ಮೂಡಿಸುವ ಕೆಲಸ ಮಾಡಿ ಅವರನ್ನು ಶಿಕ್ಷಣವಂತರಾಗಿಸಲು ಬಹಳಷ್ಟು ಪ್ರಯತ್ನ ಮಾಡಿ ದಾರ್ಶನಿಕರಾದರು. ಕಂದಾಚಾರ , ದುಂದು ವೆಚ್ಚಕ್ಕೆ ಶ್ರೀ ಗುರುಗಳು ವಿರೋಧಿಸಿದ್ದರು ಎಂದರು.
ಶ್ರೀ ನಾರಾಯಭ ಗುರುಗಳ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿ ನೆರದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ನಾರಯಣ ಗುರುಗಳು ಯಾವುದೇ ಒಂದು ಜಾತಿ ಪಂಥಗಳಿಗೆ ಸೀಮಿತರಾಗಿರದೇ ದುರ್ಬಲರಿಗೆ ಹಿಂದುಳಿದವರಿಗೆ ಒಪ್ಪುವಂತೆ ಭೋಧನೆ ಮಾಡಿ ಕೇರಳದಲ್ಲಿ ಅಕ್ಷರ ಕಾಂತಿಯನ್ನುAಟುಮಾಡಿದ ಪರಿಣಾಮವಾಗಿ ಹಿಂದೆ ಕೇರಳದಲ್ಲಿ ಅಪರಾದ ಪ್ರಕರಣಗಳು ನಿಯಂತ್ರಣಕ್ಕೆ ಬಂದವು. ಎನ್ನುವ ವರದಿಯನ್ನು ಉಲ್ಲೇಖಿಸಿದರು. ಎಲ್ಲರಿಗೂ ಸಂಸ್ಕಾರ, ಶಿಕ್ಷಣ ದೊರೆಯಬೆಕು ಎಂದು ಗುರುಗಳು ಪ್ರತಿಪಾದಿಸಿದರು ಎಂದರಲ್ಲದೇ ಮೊದಲು ನಮ್ಮ ಅಂತರಾಳವನ್ನು ಪ್ರೀತಿಸಬೇಕು ಹಾಗೆಯ ನಮ್ಮ ಸುತ್ತಮುತ್ತಲಿನವನ್ನು ಪ್ರೀತಿಸುವ ಕೆಲಸ ಮಾಡಬೇಕು ಎಂದ ಶ್ರೀಗಳು ನಾರಯಣಗುರುಗಳು ಯಾರನ್ನೂ ದ್ವೇಷಿಸದೇ ಪ್ರೀತಿಯಿಂದಲೇ ಎಲ್ಲರ ಮನ ಗೆದ್ದಿದ್ದಾರೆ . ಇಂದು ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಮಾಜಮುಖಿ ಕೆಲಸ ಮಾಡಬೇಕು ಎಂದರು.
ಪ್ರಾರAಭದಲ್ಲಿ ಶ್ರೀ ನಾರಾಯಣ ಗುರುಗಳ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಭಟ್ಕಳ ಗುರುಮಠದ ದೇವಸ್ಥಾನದ ಅಧ್ಯಕ್ಷ ಅರುಣ್ ನಾಯ್ಕ, ಶಿರಾಲಿ ಸಾರದಹೊಳೆ ಹಳೆಕೋಟೆ ಹನುಮಂತ ದೇವಸ್ಥಾನದ ಅದ್ಯಕ್ಷರಾದ ಆರ್.ಕೆ. ನಾಯ್ಕ, ಜಿಲ್ಲಾ ಅರಣ್ಯ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ, ಚಾತುರ್ಮಾಸ ಸಮಿತಿಯ ಅಧ್ಯಕ್ಷರಾದ ಕೃಷ್ಣ ನಾಯ್ಕ, ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ, ಮಂಜುನಾಥ ನಾಯ್ಕ, ಅಂಕೋಲಾ, ಚಾತುರ್ಮಾಸ ಸಮಿತಿಯ ಸಂಚಾಲಕ ಕೃಷ್ಣ ನಾಯ್ಕ ಪ್ರಥ್ವಿ ವೇದಿಕೆಯಲ್ಲಿದ್ದರು.
ವೇದಿಕೆಯಲ್ಲಿ ಶ್ರೀ ನಾರಾಯಣ ಗುರುಗಳ ಬಗ್ಗೆ ನಡೆದ ಭಾಷಣ ಸ್ಪರ್ದೇಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶ್ರೀ ಗುರುಗಳಿಂದ ಬಹುಮಾನ ವಿತರಿಸಲಾಯಿತು. ಶ್ರೀ ನಾರಾಯಣಗುರು ಸಂಘದ ಸಂಚಾಲಕ ಮನಮೋಹನ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕರಾದ ನಾರಾಯಣ ನಾಯ್ಕ, ಹಾಗೂ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ನಾರಾಯಣಗುರು ಜಯಂತ್ಯೋತ್ಸವ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡ ನಾರಾಯಣ ಗುರುಗಳ ಬಗ್ಗೆ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳಿಗೆ ಶ್ರೀಗಳಿಂದ ಬಹುಮಾನ ವಿತರಿಸಲಾಯಿತು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಂಗಳೂರು ಸಂಸದ ಬ್ರಜೇಶ ಚೌಟ ಸೇರಿದಂತೆ ಹಲವು ಗಣ್ಯರು, ಭಟ್ಕಳದ ದೇವಾಡಿಗ ಸಮಾಜ, ಸಾಗರ, ಧರ್ಮಸ್ಥಳ, ಸಿದ್ದಾಪುರ ಸೇರಿದಂತೆ ವಿವಿದೆಡೆಯಿಂದ ಆಗಮಿಸಿದ ಭಕ್ತರು ಸ್ವಾಮೀಜಿಗಳ ಮಂತ್ರಾಕ್ಷತೆ ಪಡೆದರು.