ಬೆಂಗಳೂರು, ಮಾರ್ಚ್ ೧೦ (ಕರ್ನಾಟಕ ವಾರ್ತೆ)- ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಶ್ರೀ ಎಚ್. ಹಾಲಪ್ಪ ಅವರು ಮಾರ್ಚ್ ೧೦ ರಂದು ಸಂಜೆ ನವದೆಹಲಿಗೆ ತೆರಳುವರು. ಗುರುವಾರ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಂದೇ ನಗರಕ್ಕೆ ಹಿಂತಿರುಗುವರು.
ಎಸ್‌ಸಿ ಎಸ್‌ಟಿ ಕಾಲೋನಿಗಳಿಗೆ ವಿಶೇಷ ರಸ್ತೆ: ಉದಾಸಿ
ಬೆಂಗಳೂರು, ಮಾರ್ಚ್ ೧೦ (ಕರ್ನಾಟಕ ವಾರ್ತೆ)- ೨೦೦೯-೧೦ ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಗೆ ವಿಶೇಷ ಘಟಕ ಯೋಜನೆಯಡಿ ಎಸ್‌ಸಿ/ಎಸ್‌ಟಿ ಕಲ್ಯಾಣಕ್ಕಾಗಿ ೧೨,೨೬೪.೨೪ ಲಕ್ಷ ರೂ. ಮೀಸಲಿಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಶ್ರೀ ಸಿ.ಎಂ. ಉದಾಸಿ ತಿಳಿಸಿದ್ದಾರೆ.
ಅವರು ವಿಧಾನ ಪರಿಷತ್ತಿನಲ್ಲಿ ಸದಸ್ಯ ಶ್ರೀ ಡಿ.ಎಸ್. ವೀರಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್‌ಸಿ/ಎಸ್‌ಟಿ ಕಾಲೊನಿಗಳ ಅಭಿವೃದ್ಧಿ ಮತ್ತು ಅವರು ವಾಸಿಸುತ್ತಿರುವ ಕಾಲೋನಿಗಳ ರಸ್ತೆಗಳಿಗೆ ಖರ್ಚು ಮಾಡಬೇಕೆಂಬ ನಿಯಮ ಜಾರಿಯಲ್ಲಿದೆ ಅದರಂತೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಚಾಮರಾಜನಗರ ಜಿಲ್ಲೆಯ ಮಹದೇಶ್ವರ ದೇವಸ್ಥಾನದ ಬಳಿ ಠೇವಣಿ ಕೊಡುಗೆ ಆಧಾರದ ಮೇಲೆ ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಡಿ ಒಟ್ಟಾರೆ ೨೦ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ೬- ಪರಿವೀಕ್ಷಣಾ ಮಂದಿರಗಳು, ೪- ಪ್ರವಾಸಿ ಮಂದಿರಗಳು ಹಾಗೂ ೧೦ ಅತಿಥಿಗೃಹಗಳಿವೆ ಎಂದು ಸದಸ್ಯ ಸಂದೇಶ್ ನಾಗರಾಜ್ ಪ್ರಶ್ನೆಯೊಂದಕ್ಕೆ ಸಚಿವರು ಮಾಹಿತಿ ನೀಡಿದರು.
ಮಲೈ ಮಹದೇಶ್ವರ ದೇವಸ್ತಾನದ ಆಡಳಿತ ಮಂಡಳಿಸ್ವಾಧೀನದಲ್ಲಿ ೪೧೧ ಕೊಠಡಿಗಳಿದ್ದು, ಅವುಗಳ ಪೈಕಿ ೧೬ ಕೊಠಡಿಗಳನ್ನು ದೇವಸ್ಥಾನದ ಸಿಬ್ಬಂದಿಗೆ ಹಂಚಿದ್ದು ಉಳಿದ ೩೯೫ ಕೊಠಡಿಗಳನ್ನು ಆಡಳಿತ ಮಂಡಳಿ ವತಿಯಿಂದ ಭಕ್ತಾದಿಗಳಿಗೆ ಹಂಚಲಾಗುತ್ತಿದೆ ಎಂದು ಉದಾಸಿ ತಿಳಿಸಿದರು.
ಕ್ರೀಡಾಂಗಣದಲ್ಲಿ ಮದ್ಯ ಮಾರಾಟ ನಿಷೇದ ಸ್ವಾಗತಾರ್ಹ
ಬೆಂಗಳೂರು, ಮಾರ್ಚ್ ೧೦ (ಕರ್ನಾಟಕ ವಾರ್ತೆ)- ಐ.ಪಿ.ಎಲ್. ಪಂದ್ಯಾವಳಿ ಸಂದರ್ಭದಲ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮದ್ಯ ಮಾರಾಟ ನಿಷೇದಿಸಿ ಬೆಂಗಳೂರಿನ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿರುವುದನ್ನು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರು ಸ್ವಾಗತಿಸಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯ ಹಾಗೂ ಸಿಗರೇಟ್ ಸೇವನೆಗೆ ನಿಷೇದಾಜ್ಞೆ ಈಗಾಗಲೆ ಇದೆ. ಈ ನಿಷೇದಾಜ್ಞೆ ಉಲ್ಲಂಘಿಸಿ ಮದ್ಯ ಸೇವನೆ ಮಾಡುವುದು ಅಪರಾದ. ಈ ನಿಟ್ಟಿನಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಕ್ರಮತೆಗೆದುಕೊಂಡಿರುವುದು ಪ್ರಶಂಸಾರ್ಹ. ಕ್ರೀಡೆಗಳು ನಡೆಯುವ ಸ್ಥಳಗಳಲ್ಲಿ ಮದ್ಯಸೇವನೆ ಕ್ರೀಡಾ ಮನೋಭಾವಕ್ಕೆ ವ್ಯತಿರಿಕ್ತ ಎಂಬುದು ನನ್ನ ಸ್ವಷ್ಟ ಅಭಿಪ್ರಾಯವೆಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅಂಗೀಕಾರ
ಬೆಂಗಳೂರು, ಮಾರ್ಚ್ ೧೦ (ಕರ್ನಾಟಕ ವಾರ್ತೆ)- ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ವಿಧಾನಸಭೆಯಲ್ಲಿ ಇಂದು ಅಂಗಿಕರಿಸಲಾಗಿದೆ. ರಾಜ್ಯದ ಗಡಿ ಪ್ರದೇಶದಲ್ಲಿ ಬರುವ ೫೨ ತಾಲೂಕುಗಳಲ್ಲಿ ಕನ್ನಡಭಾಷೆ, ಸಂಸ್ಕೃತಿ, ಶಿಕ್ಷಣ, ನೀರಾವರಿ, ಪರಿಸರ, ಉದ್ಧಿಮೆ, ಅರೋಗ್ಯ ಮತ್ತು ಕೃಷಿಯನ್ನು ಅಭಿವೃದ್ಧಿಪಡಿಸಿ, ನಾಡಿನ ಜನತೆ ನೆರೆಯ ರಾಜ್ಯದ ಭಾಷೆ, ಸಂಸ್ಕೃತಿ ಪ್ರಭಾವಕ್ಕೆ ಸಿಲುಕಿ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಕನ್ನಡ ನಾಡಿನ ಪರಿಸರದಿಂದ ದೂರ ಸರಿಯದಂತೆ ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿದೆ. ಅಲ್ಲದೆ ಗಡಿನಾಡ ಕನ್ನಡಿಗರ ಪ್ರಯೋಜನೆಕ್ಕಾಗಿ ಅಗತ್ಯವಾದ ಕರಕುಶಲ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗುವುದರಿಂದ ೭೧೧ ಲಕ್ಷ ರೂಪಾಯಿಗಳ ಆವರ್ತಕ ವೆಚ್ಚ ಮತ್ತು ೨೮೯ ಲಕ್ಷ ರೂಪಾಯಿಗಳ ಅನಾವರ್ತಕ ವೆಚ್ಚ ಉಂಟಾಗಲಿದೆ.
437 ಪದವಿಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗ ಆರಂಭ : ಕಾಗೇರಿ
ಬೆಂಗಳೂರು, ಮಾರ್ಚ್ ೧೦ (ಕರ್ನಾಟಕ ವಾರ್ತೆ)- ಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದ ೪೩೭ ಜೂನಿಯರ್ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗವನ್ನು ಆರಂಭಿಸಲು ರಾಜ್ಯಸರ್ಕಾರ ನಿರ್ಧರಿಸಿದೆ. ಈ ವಿಷಯವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಬುಧವಾರ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದ ವಿಷಯದತ್ತ ಹೆಚ್ಚು ಆಸಕ್ತಿ ಬೆಳೆಸಬೇಕೆಂಬ ಉದ್ದೇಶದಿಂದ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೆ, ಇದೇ ೨೭೦ ಪದವಿಪೂರ್ವ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗವನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಈ ವೇಳೆ ತಿಳಿಸಿದರು. ಜೊತೆಗೆ ಈಗಾಗಲೇ ಅರಂಭಗೊಂಡಿರುವ ನೂತನ ಪದವಿಪೂರ್ವ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ. ಅಂದಾಜು ೩೦೦ ಕೋಟಿ ರೂಪಾಯಿ ವೆಚ್ಚದಲ್ಲಿ ೫೦೦೦ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ನೀರಿನ ಸಮಸ್ಯೆ ನಿವಾರಣೆಗೆ ಹಣ ಬಿಡುಗಡೆ : ಸಚಿವ ಶೆಟ್ಟರ್
ಬೆಂಗಳೂರು, ಮಾರ್ಚ್ ೧೦ (ಕರ್ನಾಟಕ ವಾರ್ತೆ)- ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಶಾಸಕರ ನೇತೃತ್ವದಲ್ಲಿ ರಚಿಸಿರುವ ಟಾಸ್ಕ್ ಫೋರ್ಸ್‌ಗಳಿಗೆ ತಕ್ಷಣವೇ ಹಣ ಬಿಡುಗಡೆ ಮಾಡಲಾಗುವುದೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ನೀರಿನ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿ ಹೊಸದಾಗಿ ಕೊಳವೆಬಾವಿ ಕೊರೆಸುವುದು ಮತ್ತು ಕೊಳವೆಬಾವಿಗಳಿಗೆ ಯಂತ್ರಗಳನ್ನು ಅಳವಡಿಸಲು ತಕ್ಷಣವೇ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಆರ್‌ಬಿಐ ಅಮೃತ ಮಹೋತ್ಸವ ರಸಪ್ರಶ್ನೆ ಸ್ವರ್ಧೆ
ಬೆಂಗಳೂರು, ಮಾರ್ಚ್ ೧೦ (ಕರ್ನಾಟಕ ವಾರ್ತೆ)- ೭೫ ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವ ಭಾರತೀಯ ರಿಸರ್ವ್‌ಬ್ಯಾಂಕ್ ಅಮೃತ ಮಹೋತ್ಸವದ ಸಡಗರದಲ್ಲಿದೆ.
ಮಹೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರದ ಸಹಯೋಗದಡಿ ಆರ್ಥಿಕ ಸಾಕ್ಷರತೆ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ವರ್ಧೆ ಏರ್ಪಡಿಸಿದೆ ಎಂದು ತಿಳಿಸಲಾಗಿದೆ.
೫,೭, ೮ ಮತ್ತು ೯ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸ್ವರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸ್ವರ್ದೆ ನಡೆಯಲಿದ್ದು, ಎರಡೂ ಭಾಷೆಯಲ್ಲಯೂ ಮೊದಲ ಮೂವರಿಗೆ ಬಹುಮಾನ ನೀಡಲಾಗುವುದು.
ಮಾರ್ಚ್ ೨೨ ರಂದು ಕೇಂದ್ರ ಸಚಿವ ಶ್ರೀ ಪಿ. ಚಿದಂಬರಂ ವಿಜೇತರಿಗೆ ಬಹುಮಾನ ವಿತರಿಸಲಿದ್ದು, ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ರೋಗಿಗಳನ್ನು ಗುಣಪಡಿಸಲು ವೈದ್ಯರಿಗೆ ಆರನೆ ಕಣ್ಣಿರಬೇಕು- ಸಚಿವ ರಾಮಚಂದ್ರಗೌಡ
ಬೆಂಗಳೂರು, ಮಾರ್ಚ್ ೧೦ (ಕರ್ನಾಟಕ ವಾರ್ತೆ)- ಹೋಮಿಯೋಪತಿ ವೈದ್ಯಕೀಯ ಪದ್ದತಿಯಲ್ಲಿ ವೈದ್ಯರು ಪವಾಡವನ್ನು ಸೃಷ್ಠಿಸಬಲ್ಲರು. ಈ ಪದ್ದತಿ ಬೇರಾವುದೇ ವೈದ್ಯಕೀಯ ಪದ್ದತಿಗೆ ಕಡಿಮೆಯಿಲ್ಲ. ರೋಗಿಗಳನ್ನು ಗುಣಪಡಿಸಲು ವೈದ್ಯರಿಗೆ ಆರನೇ ಕಣ್ಣಿರಬೇಕು. ನುರಿತ ವೈದ್ಯನಾಗಲು ಅನುಭವ ಮುಖ್ಯ ನಿವೇಲ್ಲರೂ ವೈದ್ಯರಾಗಿ ಒಳ್ಳೆಯ ಹೆಸರು ಮಾಡಿರಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶ್ರೀ ರಾಮಚಂದ್ರೇಗೌಡ ಅವರು ಪದವಿ ಪಡೆದ ವೈದ್ಯರಿಗೆ ಆರನೇ ಕಣ್ಣಿರಬೇಕು. ನುರಿತ ವೈದ್ಯನಾಗಲು ಅನುಭವ ಮುಖ್ಯ ನಿವೇಲ್ಲರೂ ವೈದ್ಯರಾಗಿ ಒಳ್ಳೆಯ ಹೆಸರು ಮಾಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶ್ರೀ ರಾಮಚಂದ್ರಗೌಡ ಅವರು ಪದವಿ ಪಡೆದ ವೈದ್ಯರಿಗೆ ಕರೆಯಿತ್ತರು.
ಅವರು ಪುರಭವನದಲ್ಲಿ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ತೆ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹೋಮಿಯೋಪತಿಯು ನ್ಯಾನೋ ತಂತ್ರಜ್ಞಾನ ಇದ್ದಂತೆ ಬರೀ ಪ್ರಶ್ನೆಗಳ ಮೂಲಕ ನಾವು ಸಮಸ್ಯೆಗಳನ್ನು ತಿಳಿದುಕೊಳ್ಳುತ್ತೇವೆ. ಆಲೋಪತಿಗೆ ಹೋಲಿಸಿದರೆ ಇದರ ಚಿಕಿತ್ಸಾ ಹಾಗೂ ಔಷಧಿ ವೆಚ್ಚವು ಸಹ ಬಹಳ ಕಡಿಮೆ. ಈಗ ಉತ್ಸಾಹದಿಂದ ಪದವಿ ಪಡೆದು ಹೊರಹೊಮ್ಮುತ್ತಿರುವ ಯುವ ವೈದ್ಯರು ಕನಿಷ್ಟ ಎರಡು ವರ್ಷಗಳ ಕಾಲವಾದರೂ ಹಳ್ಳಿಗಳಲ್ಲಿ ಕೆಲಸ ಮಾಡಬೇಕೆಂದು ಅವರು ಕಿವಿಮಾತು ಹೇಳಿದರು.
ಯುವ ವೈದ್ಯರಿಗೆ ಸಚಿವರ ವೈದ್ಯಕೀಯ ಪ್ರಮಾಣ ವಚನ ಭೋಧಿಸಿದರು. ಹಾಗೂ ಎಲ್ಲರಿಗೂ ಪದವಿ ಪ್ರಧಾನ ಮಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಯುಷ್ ಇಲಾಖೆಯ ನಿರ್ದೇಶಕರಾದ ಶ್ರೀ ಜಿ.ಎನ್. ಶ್ರೀಕಂಠಯ್ಯ ಅವರು ಯುವ ವೈದ್ಯರನ್ನು ಅಭಿನಂದಿಸಿ ಎಲ್ಲರೂ ಅತ್ಯುತ್ತಮ ವೈದ್ಯರಾಗಬೇಕೆಂದು ಶುಭ ಹಾರೈಸಿದರು.
ರಾಜೀವ್‌ಗಾಂಧಿ ಎದೆರೋಗಗಳು ಮತ್ತು ಎಸ್.ಡಿಎಸ್.ಟಿಬಿ. ಸಂಸ್ಥೆಯ ನಿರ್ದೇಶಕರಾದ ಶ್ರೀ ಶಶಿಧರ ಬುಗ್ಗೆಯವರು ತಾವು ಎಲ್ಲಾ ವೈದ್ಯಪದ್ದತಿಗಳನ್ನು ನಂಬುವುದಾಗಿ ತಿಳಿಸಿದರು. ಎಲ್ಲದರಲ್ಲೂ ಅದರದೇ ಆದ ಒಳ್ಳೇಯ ಹಾಗೂ ಕೆಟ್ಟ ಪರಿಣಾಮಗಳುಂಟು, ವೈದ್ಯರು ಅದರ ಪರಿಮಿತಿಯನ್ನು ಅರಿತು ಪ್ರಾಮಾಣಿಕವಾಗಿ ಚಿಕಿತ್ಸೆ ಕೊಡಬೇಕು. ರೋಗಿಗಳ ಮುಖದಲ್ಲಿ ನಗೆ ಮೂಡಿಸುವ ಕೆಲಸ ಕೇವಲ ವೈದ್ಯನಿಂದ ಮಾತ್ರ ಸಾಧ್ಯ ಎಂದರು.
ನಾಲ್ಕು ವರ್ಷಗಳ ಹೋಮಿಯೋಪತಿಯಲ್ಲಿ ಮೊದಲಸ್ಥಾನ ಚಿನ್ನದ ಪದಕ ಹಾಗೂ ೧೪ ಪ್ರಶಸ್ತಿಗಳನ್ನು ಪಡೆದ ಡಾ: ವರಲಕ್ಷ್ಮಿಯನ್ನು ಎಲ್ಲರೂ ಅಭಿನಂದಿಸಿದರು.
ಸರ್ಕಾರಿ ಹೋಮಿಯೋಪತಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ: ಎ.ಎಲ್. ಪಾಟೀಲ್ ಸ್ವಾಗತ ಭಾಷಣ ಮಾಡಿದರು. ಸಂಸ್ಥೆಯ ಜಂಟಿ ನಿರ್ದೇಶಕರಾದ ಆಂಜನಯ್ಯಮೂರ್ತಿ ಉಪಸ್ಥಿತರಿದ್ದರು.
ರಾಜ್ಯ ಯೋಜನಾ ಗಾತ್ರ ಕಳೆದ ಬಾರಿಗಿಂತ ಶೇ. ೧೯ ರಷ್ಟು ಹೆಚ್ಚಳ
ಬೆಂಗಳೂರು, ಮಾರ್ಚ್ ೧೦ (ಕರ್ನಾಟಕ ವಾರ್ತೆ)- ಪ್ರಸಕ್ತ ಸಾಲಿನ ರಾಜ್ಯ ಯೋಜನಾ ಗಾತ್ರ ಕಳೆದ ಬಾರಿಗಿಂತ ಶೇ. ೧೯ ರಷ್ಟು ಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದರು. ರಾಜ್ಯ ಯೋಜನಾ ಗಾತ್ರದ ಬಗ್ಗೆ ನಿನ್ನೆ ದೆಹಲಿಯಲ್ಲಿ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಶ್ರೀ ಮಾಂಟೆಕ್ ಸಿಂಗ್ ಅಹ್ಲುವಾಲಿಯ ಅವರೊಂದಿಗೆ ಚರ್ಚಿಸಲಾಯಿತು. ಈ ವರ್ಷ ರಾಜ್ಯದ ಯೋಜನಾ ಗಆತ್ರ ೩೧೦೫೦ ಕೋಟಿ ರೂ. ಆಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದೆಉ.
೨೦೦೯-೧೦ ಕ್ಕಿಂತ ಪ್ರಸಕ್ತ ಸಾಲಿನಲ್ಲಿ ಯೋಜನಾ ಗಾತ್ರ ಶೇ. ೧೯ ರಷ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು. ಅಲ್ಲದೆ ರಾಜ್ಯದಲ್ಲಿ ವಿತ್ತೀಯ ಕೊರತೆಯನ್ನು ತಗ್ಗಿಸಿ ನಿವ್ವಳ ಲಾಭದತ್ತ ಕೊಂಡೊಯ್ಯಲಾಗಿದೆ ಎಂದು ಅವರು ತಿಳಿಸಿದರು.
ಗೃಹ ಸಚಿವರು ಶ್ರೀ ಪಿ. ಚಿದಂಬರಂ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಸಂಭವಿಸಿರುವ ನೆರೆ ಪರಿಸ್ಥಿತಿ ನಿರ್ವಹಣೆಗೆ ರಾಜ್ಯಕ್ಕೆ ೨ ಲಕ್ಷ ಮನೆಗಳನ್ನು ಮಂಜೂರು ಮಾಡುವಂತೆ ಕೋರಲಾಗಿದೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಮುಖ್ಯಮಂತ್ರಿ ಅವರು ತಿಳಿಸಿದರು. ಅಲ್ಲದೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿರುವ ಸಂಬಂಧ ಅನುದಾನ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದು ಕೇಂದ್ರ ಸಚಿವ ಚಿದಂಬರಂ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವಿಷಯವಾಗಿ ಅವರಿಗೆ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.