ಭಟ್ಕಳ, ಜನವರಿ 30: ಇಲ್ಲಿನ ಸಮಾಜ ಸೇವಕ ನಿಸಾರ್ ಅಹ್ಮದ್ ರುಕ್ನುದ್ದೀನರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದ ಅಸ್ತಿತ್ವಕ್ಕೆ ನೂತನ ಟಾಪ್ ಎಮರ್ಜೆನ್ಸಿ ಹೆಲ್ಪಿಂಗ್ ಅಸೋಶಿಯೇಶನ್ ತುರ್ತುಸೇವಾ ಘಟಕವು ಗಣರಾಜ್ಯೋತ್ಸವ ದಿನದಂದು ಪುರಸಭಾ ಆವರಣದಲ್ಲಿ ಶಾಸಕ ಜೆ ಡಿ ನಾಯ್ಕ ರಿಂದ ಉದ್ಘಾಟನೆಗೊಂಡಿತು
ನಂತರ ಮಾತನಾಡಿದ ಅವರು ತುರ್ತು ಸೇವಾ ಘಟಕ ಸ್ಥಾಪಿಸಿದ್ದರಿಂದ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಯಾವುದೇ ಸಂಘವನ್ನು ಸ್ಥಾಪಿಸುವುದು ಸುಲಭ. ಆದರೆ ಅದನ್ನು ಕ್ರೀಯಾಶೀಲತೆಯಿಂದ ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸ. ಸಾರ್ವಜನಿಕರ ಅನುಕೂಲಕ್ಕಾಗಿ ನಿಸಾರರು ಸ್ಥಾಪಿಸಿದ ತುರ್ತು ಸೇವಾ ಘಟಕ ಯಶಸ್ವಿಯಾಗಿ ಬೆಳೆಯಬೇಕು.ಇದರಿಂದ ಜನರಿಗೆ ಅನುಕೂಲವಾಗಬೇಕು ಎಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಡಿವೈಸ್ಪಿ ವೇದಮೂರ್ತಿ, ಪುರಸಭಾ ಅಧ್ಯಕ್ಷ ಪರ್ವೇಜ ಕಾಶೀಂ ಜಿ,ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕಮೀಷನ ಕೆ ವಿ ತ್ರಿಲೋಕಚಂದ್ರ ತುರ್ತು ಸೇವಾ ಘಟಕ ಸ್ಥಾಪಿಸಿದ್ದರಿಂದ ಅಪಘಾತ, ನೆರೆ ಹಾವಳಿ ಸೇರಿದಂತೆ ತುರ್ತು ಪರಿಸ್ಥಿತಿಯಲ್ಲಿ ಅನುಕೂಲವಾಗಲಿದ್ದು, ಆ ನಿಟ್ಟಿನಲ್ಲಿ ನಿಸಾರ್ ರುಕ್ನುದ್ದೀನರರ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷೆ ಗೌರಿ ಮೊಗೇರ,ತಂಜೀಂ ಪ್ರಧಾನ ಕಾರ್ಯದರ್ಶಿ ಎಸ್ ಜೆ ಖಾಲೀದ್, ತಹಶೀಲ್ದಾರ ಎಸ್ ಎಂ ನಾಯ್ಕ, ತಾಪಂ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಂಜುನಾಥ ಶೆಟ್ಟಿ, ಅಸೋಶಿಯೇಶನ್ನ ಅಧ್ಯಕ್ಷ ನಿಸಾರ್ ಅಹ್ಮದ್ ರುಕ್ನುದ್ದೀನ ಉಪಸ್ಥಿತರಿದ್ದರು. ಆರಂಭದಲ್ಲಿ ಝೇಂಕಾರ್ ಮೆಲೋಡಿಸ್ನ ಪ್ರಸನ್ನ ಪ್ರಭು ಸ್ವಾಗತಿಸಿದರು. ಡಾ. ಆರ್ ವಿ ಸರಾಪ ಪ್ರಾಸ್ತಾವಿಕ ಮಾತನಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪಿ ಜೆ ಪರ್ನಾಂಡಿಸ್ ನಿರೂಪಿಸಿದರು. ಹನ್ನೊಂದು ಸದಸ್ಯರನ್ನೊಳಗೊಂಡ ಟಾಪ್ ಎಮರ್ಜೆನ್ಸಿ ಹೆಲ್ಪಿಂಗ್ ಅಸೋಶಿಯೇಶನ್ ಪ್ರವಾಹ ಸಂದರ್ಭದಲ್ಲಿ ತುರ್ತು ಊಟೋಪಚಾರವನ್ನು ಕಲ್ಪಿಸುವುದು,ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸುವುದು, ಬಡವರಿದ್ದಲ್ಲಿ ಚಿಕಿತ್ಸಾ ವೆಚ್ಚವನ್ನು ಭರಿಸುವುದು ಹಾಗೂ ಗಾಯಾಳುಗಳ ಮಾಹಿತಿ ಸಂಗ್ರಹಿಸಿ ಕುಟುಂಬಕ್ಕೆ ಮಾಹಿತಿ ನೀಡುವುದು, ಅನಾಥ ಶವಗಳ ಧಪನ ಮಾಡುವುದು,ಹಳ್ಳಿಗಳ ಶಾಲೆ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಏರ್ಪಡಿಸುವುದು. ೧ರಿಂದ ೫ ನೇ ತರಗತಿಯ ವರೆಗಿನ ಕಡುಬಡವ ಮಕ್ಕಳಿಗೆ ಓದಲು ಬರೆಯಲು ಬೇಕಾದಂತಹ ಸೌಕರ್ಯ ಒದಗಿಸುವುದು, ವಿವಿಧ ಕ್ಷೇತ್ರದಲ್ಲಿನ ಬಡ ಪ್ರತಿಭೆ ಹಾಗೂ ಪ್ರತಿಭಾವಂತರ ಅನ್ವೇಷಣೆ ಮತ್ತು ಪುರಸ್ಕಾರ ನೀಡಿ ಪ್ರೋತ್ಸಾಹಿಸುವುದು. ಸಮಾಜದಲ್ಲಿ ಸೌಹಾರ್ದತೆ ಸಾಮರಸ್ಯದ ವೃದ್ದಿಗೆ ಶ್ರಮಿಸುವುದು ಸೇರಿದಂತೆ ಹಲವು ಉದ್ದೇಶಗಳನ್ನು ಹೊಂದಿದೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ೦೮೩೮೫-೩೨೫೭೦೨ ಹಾಗೂ ೯೮೮೬೧೮೧೭೮೬ ಗೆ ಸಂಪರ್ಕಿಸಬಹುದಾಗಿದೆ.