ಮಂಗಳೂರು, ಎ.೧೧: ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ ೪೦ನೆ ವಾರ್ಷಿಕ ಮತ್ತು ೩೦ನೆ ಸನದು (ಬಿರುದು) ಪ್ರದಾನ ಸಮಾರಂಭವು ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲ, ಉಳ್ಳಾಲ ಖಾಝಿ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಅಧ್ಯಕ್ಷತೆಯಲ್ಲಿ ರವಿವಾರ ಮಧ್ಯಾಹ್ನ ಉಳ್ಳಾಲದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಯ್ಯಿದ್ ಇಬ್ರಾಹೀಂ ಖಲೀಲ್ ಬುಖಾರಿ ತಂಙಳ್ ಕಡಲುಂಡಿ, ಸಂಪತ್ತು ಅಧಿಕವಾದಾಗ ಮನುಷ್ಯನಿಗೆ ಅಹಂಕಾರವೂ ಹೆಚ್ಚಾ ಗುತ್ತದೆ. ಆದರೆ ಜ್ಞಾನಾರ್ಜನೆಯಿಂದ ವಿನಯಶೀಲತೆ, ತಾಳ್ಮೆ, ಪರೋಪಕಾರಿ ಮನೋಭಾವ ಬೆಳೆದುಬರುತ್ತದೆ. ಹಣ ಶಾಶ್ವ್ವತವಲ್ಲ. ಆದರೆ, ಜ್ಞಾನ ಶಾಶ್ವತ. ಅದನ್ನು ಕಿತ್ತು ಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಕಾಲಕ್ಕೆ ಅನುಗುಣವಾಗಿ ವಿದ್ಯೆ ಕಲಿಯುವ ಅನಿವಾರ್ಯತೆ ಇದೆ. ಬದುಕಿನಲ್ಲಿ ಧರ್ಮದ ನೀತಿ ಗಳನ್ನು ಪಾಲಿಸಿರಿ. ಅದರಿಂದ ಒಳಿತಿದೆ ಎಂದು ಹೇಳಿದರು.
ಅರಬಿಕ್ ಕಾಲೇಜಿನ ೪೨ ವಿದ್ಯಾರ್ಥಿಗಳಿಗೆ ಉಳ್ಳಾಲ ತಂಙಳ್ ಪ್ರಮಾಣ ಪತ್ರ ವಿತರಿಸಿದರು. ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್ ಸನದುದಾನ ಭಾಷಣ ಮಾಡಿದರು. ಖ್ಯಾತ ವಿದ್ವಾಂಸ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಭಾಷಣ ಮಾಡಿದರು.
ವೇದಿಕೆಯಲ್ಲಿ ಸಯ್ಯಿದ್ ಅಲಿ ಬಾಫಕಿ ತಂಙಳ್ ಕೊಯ್ಲಾಂಡಿ, ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಮದನಿ ಕೊಯ್ಲಾಂಡಿ, ಇ.ಸುಲೈಮಾನ್ ಮುಸ್ಲಿಯಾರ್, ಸಅದಿಯ್ಯ ಅರಬಿಕ್ ಕಾಲೇಜಿನ ಜನರಲ್ ಮ್ಯಾನೇಜರ್ ಎಂ.ಎ.ಅಬ್ದುಲ್ ಖಾದಿರ್ ಮುಸ್ಲಿಯಾರ್, ಸಯ್ಯಿದ್ ಅತಾವುಲ್ಲ ತಂಙಳ್ ಉದ್ಯಾವರ, ಸಯ್ಯಿದ್ ಉಮರುಲ್ ಫಾರೂಕ್ ತಂಙಳ್ ಪೊಸೋಟು, ಅಲ್ಹಾಜ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ, ವಿ.ಪಿ.ಎಂ.ಫೈಝಿ, ಅಬ್ದುಲ್ ಖಾದಿರ್ ಮದನಿ ಎರ್ನಾಕುಳಂ, ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ, ಯೆನೆಪೋಯ ವಿವಿಯ ಕುಲಪತಿ ವೈ.ಅಬ್ದುಲ್ಲಾ ಕುಂಞಿ, ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಖುಸ್ರೋ ಖುರೇಶಿ, ಹಾಜಿ ಕುಂಞಿ ಅಹ್ಮದ್, ಅಲ್ಹಾಜ್ ಎಸ್.ಎಂ.ರಶೀದ್, ಹಾಜಿ ಇಬ್ರಾಹೀಂ ಬಾವ, ಮದನಿ ಹಜ್ಜ್ ಟೂರ‍್ಸ್‌ನ ಸಿ. ಅಬ್ದುಲ್ ಮಜೀದ್, ಕೃಷ್ಣಾಪುರ ಜುಮಾ ಮಸೀದಿಯ ಅಧ್ಯಕ್ಷ ಮುಮ್ತಾಝ್ ಅಲಿ, ಉಸ್ಮಾನ್ ಹಾಜಿ ಮಿತ್ತೂರು, ಹಾಜಿ ಹಮೀದ್ ಕಂದಕ್ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳಾಲ ದರ್ಗಾ ಕಮಿಟಿಯ ಅಧ್ಯಕ್ಷ ಹಾಜಿ ಯು.ಕೆ. ಕಣಚೂರು ಮೋನು ಸ್ವಾಗತಿಸಿದರು. ಖಾರಿ ಟಿ.ಅಬ್ದುಲ್ಲಾ ಮುಸ್ಲಿಯಾರ್ ಕಿರಾಅತ್ ಪಠಿಸಿದರು.
ಎಸ್‌ಎಂಎಇ ಟ್ರಸ್ಟಿನ ಕಾರ್ಯದರ್ಶಿ ಹಾಜಿ ಆದಂ ಹುಸೈನ್ ವಂದಿಸಿದರು. ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಕಾರ್ಯಕ್ರಮ ನಿರೂಪಿಸಿದರು.
ಖಾಝಿ ಭವನ ಉದ್ಘಾಟನೆ
ಉಳ್ಳಾಲ ದರ್ಗಾ ಮತ್ತು ಮಸೀದಿಯ ವಠಾರದಲ್ಲಿ ನೂತನವಾಗಿ ನಿರ್ಮಿ ಸಲಾದ ‘ಖಾಝಿ ಭವನ’ವನ್ನು ಉಳ್ಳಾಲ ಖಾಝಿ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ರವಿವಾರ ಬೆಳಗ್ಗೆ ಉದ್ಘಾಟಿಸಿದರು. ಈ ಸಂದರ್ಭ ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್ ಮತ್ತು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು ಮತ್ತಿತರರು ಉಪಸ್ಥಿತರಿದ್ದರು.