ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ೬ನೇ ತರಗತಿಗಳ ಪ್ರವೇಶಕ್ಕೆ ಕೌನ್ಸಿಲಿಂಗ್

ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ೬ನೇ ತರಗತಿಗಳ ಪ್ರವೇಶಕ್ಕೆ ಕೌನ್ಸಿಲಿಂಗ್

Tue, 27 Apr 2010 17:40:00  Office Staff   S.O. News Service
ಬೆಂಗಳೂರು, ಏಪ್ರಿಲ್ ೨೭, ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ೬ ನೇ ತರಗತಿಯ ಪ್ರವೇಶಕ್ಕಾಗಿ ಮೇ ೧೦ ರಂದು ಡಾ ಬಿ.ಆರ್. ಅಂಬೇಡ್ಕರ್ ಭವನ, ಮಿಲ್ಲರ‍್ಸ್ ರಸ್ತೆ, ವಸಂತನಗರ, ಬೆಂಗಳೂರು - ೫೨ ಇಲ್ಲಿ ಕೌನ್ಸಿಲಿಂಗನ್ನು ನಡೆಸಲಾಗುವುದು.
ಕೌನ್ಸಿಲಿಂಗ್ ಸಂದರ್ಭದಲ್ಲಿ ವಿದ್ಯಾರ್ಥಿಗಳು, ೨೦೦೯-೧೦ ನೇ ಸಾಲಿನ ಜಾತಿ ಪ್ರಮಾಣ ಪತ್ತ, ಆದಾಯ ಪ್ರಮಾಣ ಪತ್ರ.  ೫ ನೇ ತರಗತಿ ತೇರ್ಗಡೆಯಾಗಿರುವ ಶಾಲಾ ಮುಖ್ಯೋಪಾಧ್ಯಾಯರಿಂದ ದೃಡೀಕರಿಸಿದ ಅಂಕಪಟ್ಟಿ,   ಮೊದಲಾದ ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು.
ಆಯ್ಕೆಯಾದ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ವಸತಿ ಶಾಲೆಗೆ ಮೇ ೨೦ ರೊಳಗೆ ದಾಖಲಾಗಬೇಕು.  ದಾಖಲಾತಿ ಸಂದರ್ಭದಲ್ಲಿ ೫ ನೇ ತರಗತಿಯ ವರ್ಗಾವಣೆ ಪತ್ರ ಹಾಗೂ ಇತ್ತೀಚಿನ ಎರಡು ಭಾವಚಿತ್ರವನ್ನು ಆಯ್ಕೆಯಾದ ವಸತಿ ಶಾಲೆಯ ಪ್ರಾಂಶುಪಾಲರಿಗೆ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳು ಅಧ್ಯಕ್ಷರು, ಜಿಲ್ಲಾ ಮಟ್ಟದ ಪ್ರವೇಶ ಪರೀಕ್ಷಾ ಸಮಿತಿ, ಬೆಂಗಳೂರು ನಗರ ಜಿಲ್ಲೆ ಇವರನ್ನು ಸಂಪರ್ಕಿಸಬಹುದಾಗಿದೆ.


Share: