ಹಾವೇರಿ, ಮಾ.೧೧: ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಮಕ್ಕಳ ಸಾಹಿತ್ಯದ ಐದು ಪ್ರಕಾರಗಳಿಗೆ ೨೦೦೯-೧೦ನೇ ಸಾಲಿಗಾಗಿ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದ್ದು, ಇದೇ ಮಾರ್ಚ ೧೭ರೊಳಗಾಗಿ ಕೃತಿಗಳನ್ನು ಆಹ್ವಾನಿಸಿದೆಯೆಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ ೨೦೦೮ರಿಂದ ಫೆಬ್ರುವರಿ ೨೦೧೦ರವರೆಗೆ ಪ್ರಕಟಗೊಂಡ ಸ್ವರಚಿತ ಕವಿತಾ ಸಂಕಲನ, ಕಥಾ ಸಂಕಲನ, ನಾಟಕ (ಪಠ್ಯಾಧಾರಿತ ಬಿಟ್ಟು) ಕಾದಂಬರಿ ಹಾಗೂ ಬೇರೆ ಭಾಷೆಗಳಿಂದ ಅನುವಾದಗೊಂಡ ಯಾವುದೇ ಮಕ್ಕಳ ಸಾಹಿತ್ಯ ಕೃತಿಗಳನ್ನು ಪ್ರಶಸ್ತಿಗಾಗಿ ಸಲ್ಲಿಸಬಹುದಾಗಿದ್ದು, ಕೃತಿಯ ೪ ಪ್ರತಿಗಳನ್ನು ಕಳಿಸಬೇಕು.
೧೮ ವರ್ಷದ ಒಳಗಿನ ಮಕ್ಕಳು ಪ್ರಕಟಿಸಿದ ಕಾವ್ಯ ಹಾಗೂ ಕಥೆಗಳ ಕೃತಿಗಳನ್ನೂ ಪ್ರಶಸ್ತಿಗಾಗಿ ಆಹ್ವಾನಿಸಲಾಗಿದ್ದು, ಪ್ರಶಸ್ತಿಗೆ ಆಯ್ಕೆಯಾದ ಕೃತಿಗಳಿಗೆ ರೂ.೫೦೦೦/- ನಗದು ಬಹುಮಾನ ನೀಡಿ ಲೇಖಕರನ್ನು ಗೌರವಿಸಲಾಗುವುದು. ಲೇಖಕರು ತಮ್ಮ ಕೃತಿಗಳನ್ನು ನಿಗದಿತ ಅವಧಿಯೊಳಗಾಗಿ ಅಧ್ಯಕ್ಷರು, ಮಕ್ಕಳ ಚಂದಿರ, ಪ್ರಶಸ್ತಿ ಆಯ್ಕೆ ಸಮಿತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಪೋಲೀಸ್ ಹೆಡ್ ಕ್ವಾಟರ್ಸ ರಸ್ತೆ, ಮಹಾಂತೇಶ ನಗರ, ಧಾರವಾಡ-೦೮” ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಕೃತಿಗಳನ್ನು ತಲುಪಿಸಬೇಕೆಂದು ಯೋಜನಾಧಿಕಾರಿಗಳು ತಿಳಿಸಿದ್ದಾರೆ.