ಭಟ್ಕಳ:26, ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಬ್ಯಾಂಕಿನ ನಿವ್ವಳ ಲಾಭವು ರೂ 2,00,57,160 ಗಳಿಗೆ ತಲುಪಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ. ಎಮ್.ಜಲಾಲುದ್ದೀನ್ ಘೋಷಿಸಿದರು.
ಅವರು ಇಂದು ಬ್ಯಾಂಕಿನ ನವೀಕೃತ ಹಾಫಿಜ್ಕಾ ಹಾಲಿನಲ್ಲಿ ಜರುಗಿದ ಬ್ಯಾಂಕಿನ 45 ನೆ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುತ್ತಿದ್ದರು.
2009-10ನೆ ಸಾಲಿನಲ್ಲಿ 200 ಕೋಟಿ ರೂ ಠೇವಣಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಬ್ಯಾಂಕಿನ ಬಂಡವಾಳ ರೂ. 27,90,32,563.97 ತಲುಪಿದ್ದು, ಬ್ಯಾಂಕ್ ಎಲ್ಲ ವಿಧದಲ್ಲಿಯೂ ಸಧೃಡವಾಗಿದೆ ಎಂದು ಹೇಳಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್.ಎ.ರಝಾಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ವ್ಯವಸ್ಥಾಪಕ ವಿ.ಬಿ.ಭಟ್ಕಳಕರ್ ಹಿಂದಿನ ವರ್ಷದ ವರದಿ ಮಂಡಿಸಿದರು. ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಅಬೂಬಕರ್ ಅಲಿ ಕಾಸಿಮಜಿ, ನಿರ್ದೇಶಕರಾದ ಗಣಪತಿ ಎಚ್.ಪೈ, ದಾಮದ್ದಾ ಮುಹಮ್ಮದ್ ಇಬ್ರಾಹೀಂ, ಮಾಸ್ತಿ ಎಸ್.ಮೊಗರ್, ಅಬ್ದುಲ್ ಮಜೀದ್ ಚೌಗ್ಲೆ, ಸೈಯದ್ ಝೈನುಲ್ ಆಬಿದೀನ್ ಫಾರೂಖಿ, ಮುಹಮ್ಮದ್ ಅಕ್ರಮ್ ಮಿಸ್ಬಾ ಮುಂತಾದವರು ಉಪಸ್ಥಿತರಿದ್ದರು.