ಬೆಂಗಳೂರು.ಮಾ.೪: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ೨೦೦೯ - ೧೦ ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡಿಸಿದರು.
ವರದಿಯ ಮುಖ್ಯಾಂಶಗಳು ಈ ರೀತಿ ಇವೆ.
೨೦೦೯-೧೦ ನೇ ಸಾಲಿನ ಮುನ್ಸೂಚನಾ ಅಂದಾಜುಗಳ ಪ್ರಕಾರ ರಾಜ್ಯದ ಒಟ್ಟು ಅಂತರಿಕ ಉತ್ಪನ್ನ ಅಥವಾ ರಾಜ್ಯಾದಾಯದ ನೈಜ ಬೆಳವಣಿಗೆಯ ದರವು ಶೇಕಡ ೫.೫ ರಷ್ಟು ಅಗಬಹುದೆಂದು ನಿರೀಕ್ಷೆ. ಪ್ರಾಥಮಿಕ ವಲಯದಲ್ಲಿ ಶೇಕಡ ೦.೧ ರಷ್ಟು, ದ್ವಿತೀಯ ವಲಯದಲ್ಲಿ ಶೇಕಡ ೭.೫ ಮತ್ತು ತೃತೀಯ ವಲಯದಲ್ಲಿ ಶೆಕಡ ೬.೨ರಷ್ಟು ಹೆಚ್ಚಾಗಬಹುದೆಂದು ಅಂದಾಜು.
೨೦೦೮-೦೯ನೇ ಸಾಲಿನ ಶೀಘ್ರ ಅಂದಾಜುಗಳ ಪ್ರಕಾರ ಒಟ್ಟು ಆಂತರಿಕ ಉತ್ಪನ್ನದ ನೈಜ ಬೆಳವಣಿಗೆಯ ದರವು ಶೇ. ೪.೫ ರಷ್ಟು.
ಸೇವಾ ವಲಯವು ರಾಜ್ಯದ ಅರ್ಥ ವ್ಯವಸ್ಥೆಯಲ್ಲಿ ಮುಂಚೂಣೆಯಲ್ಲಿದ್ದು, ೨೦೦೯-೧೦ನೇ ಸಾಲಿನ ಮುನ್ಸೂಚನಾ ಅಂದಾಜುಗಳ ಪ್ರಕಾರ ಪ್ರಸಕ್ತ ಬೆಲೆಗಳಲ್ಲಿ ರಾಜ್ಯದ ಒಟ್ಟು ಅಂತರಿಕ ಉತ್ಪನ್ನದಲ್ಲಿ ತೃತೀಯ ವಲಯದ ಪಾಲು ಶೇ. ೫೪ ರಷ್ಟಾಗಿದೆ. ದ್ವಿತೀಯ ವಲಯದ ಪಾಲು ಶೇ. ೨೯ ಮತ್ತು ಪ್ರಾಥಮಿಕ ವಲಯದ ಪಾಲು ಶೇ. ೧೭ ರಷ್ಟು ಆಗಿರುತ್ತದೆ.
೨೦೦೮-೦೯ ನೇ ಸಾಲಿನ ಸ್ಥಿರ ಬೆಲೆಗಳಲ್ಲಿ ತಲಾ ಆದಾಯವು ೩೧.೦೪೧ ರೂಪಾಯಿಗಳಷ್ಟಿದ್ದು, ೨೦೦೯-೧೦ ನೇ ಸಾಲಿನಲ್ಲಿ ೩೨.೪೧೧ ರೂಪಾಯಿಗಳಷ್ಟಾಗಬಹುದು.
ಸಗಟು ಬೆಲೆ ಸೂಚ್ಯಂಕದಲ್ಲಿನ ಚಲನೆಯಿಂದ ವ್ಯಕ್ತವಾದ ಹಣದುಬ್ಬರದ ಪ್ರಮಾಣವು ಕಳೆದ ವರ್ಷದ ಶೇಕಡ ೬.೧೫ಕ್ಕೆ ಹೋಲಿಸಿದಾಗ ೨೦೦೯ನೇ ಸಾಲಿನ ಡಿಸೆಂಬರ್ ಅಂತ್ಯಕ್ಕೆ ಶೇಕಡ ೭.೩೧ ರಷ್ಟಕ್ಕೆ ಏರಿಕೆ.
ಔದ್ಯಮಿಕ ಕಾರ್ಮಿಕ ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರದ ಪ್ರಮಾಣವು ೨೦೦೯ನೇ ಸಾಲಿನ ಡಿಸೆಂಬರ್ ಅಂತ್ಯಕ್ಕೆ ೧೪. ರಷ್ಟಾಲಿಸಿದಾಗ ೨೦೦೯ನೇ ಸಾಲಿನ ಇದೇ ಅವಧಿಯಲ್ಲಿ ಈ ಪ್ರಮಾಣವು ಶೇಕಡ ೯.೭ ರಷ್ಟಿತ್ತು.
ನವೆಂಬರ್ ೨೦೦೯ರ ಅಂತ್ಯಕ್ಕೆ ಕರ್ನಾಟಕ್ಕೆ ಕೃಷಿ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕವು ಶೇ. ೧೭.೫ರಷ್ಟು ಏರಿಕೆಯನ್ನು ದಾಖಲಿಸಿದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ ಶೇ.೧೨.೭ ರಷ್ಟು ಹೆಚ್ಚಾಗಿರುತ್ತದೆ. ಅಖಿಲ ಭಾತರ ಮಟ್ಟದಲ್ಲಿ ಸೂಚ್ಯಕವು ಶೇ.೧೪.೯ ರಷ್ಟು ಏರಿಕೆಯಾಗಿದ್ದರೆ, ಕಳೆದ ಸಾಲಿನ ಇದೇ ಅವಧಿಯಲ್ಲಿ ಶೇ. ೮.೭ ರಷ್ಟು ಹೆಚ್ಚಳವಾಗಿತ್ತು.
೨೦೦೯-೧೦ರಲ್ಲಿ ೧೧೮.೩೫ ಲಕ್ಷ ಟನ್ನುಗಳ ಒಟ್ಟು ಆಹಾರ ಉತ್ಪಾದನಾ ಗುರಿಗೆ ಪ್ರತಿಯಾಗಿ ೧೦೬.೫೩ ಲಕ್ಷ ಟನ್ನುಗಳ ಆಹಾರ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ. ಎಣ್ಣೆಕಾಳುಗಳ ೧೬ ಲಕ್ಷ ಟನ್ನುಗಳ ಉತ್ಪಾದನೆಯ ಗುರಿಗನುಸಾರವಾಗಿ ೧೧.೦೩ ಲಕ್ಷ ಟನ್ನುಗಳ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ.
ಎಲ್ಲ ಮೂರು ವಿಧದ (ಭಾರಿ, ಮಧ್ಯಮ ಮತ್ತು ಸಣ್ಣ) ನೀರಾವರಿ ಯೋಜನೆಗಳಿಂದ ೨೦೦೯-೧೦ ರ ಅಂತ್ಯದವರೆಗೆ ಸೃಷ್ಟಿಯಾಗಬಹುದಾದ ಸಂಚಿತ ನೀರಾವರಿ ಸಾಮರ್ಥ್ಯ ೩೪.೮೪ ಲಕ್ಷ ಹೆಕ್ಟೇರುಗಳಾಗಿದೆ.
ಕರ್ನಾಟಕದ ಕೈಗಾರಿಕಾ ಉತ್ಪಾದನಾ ಸೂಚ್ಯಾಂಕವು (ಆಧಾರ ವರ್ಷ ೧೯೯೯-೨೦೦) ೨೦೦೭-೦೮ರಲ್ಲಿ ೧೫೮.೯೮ ಆಗಿದ್ದು, ೨೦೦೮-೦೯ ರಲ್ಲಿ ೧೬೬೬.೮೫ಕ್ಕೆ ಏರಿಕೆಯಾಗಿದೆ.
ಸಣ್ಣ ಕೈಗಾರಿಕಾ ವಲಯದಲ್ಲಿ ರೂ. ೭೦೫.೫೦ ಕೋಟಿಗಳ ಹೂಡಿಕೆಯೊಂದಿಗೆ ೧೦.೦೮೧ ಅತಿ ಸಣ್ಣ, ಸಣ್ಣ ಮತ್ತು ಉಧ್ಯಮ ಪ್ರಮಾಣದ ಕೈಗಾರಿಕಾ ಘಟಕಗಳು ನೋಂದಣಿಯಾಗಿದ್ದು, ೬೭೧೬೨ ಜನರಿಗೆ ಉದ್ಯೋಗ ನೀಡಿದೆ.
ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ್ಲಲಿ ಒಟ್ಟು ರೂ. ೪೨೯೮.೧೭ ಕೋಟಿಗಳ ಬಮಡವಾಳ ಹೂಡಿಕೆಯೊಂದಿಗೆ ೬೩೦೭೨ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ೧೮೧ ಯೋಜನೆಗಳಿಗೆ ಅನುಮೋದನೆಯನ್ನು ನೀಡಿದೆ.
ರಾಜ್ಯದ ಉನ್ನತಮಟ್ಟದ ಅನುಮೋದನಾ ಸಮಿತಿಯು ರೂ. ೫೧೧.೯೧೪.೭೩ ಕೋಟಿ ಬಂಡವಾಳದೊಂದಿಗೆ ೯೨೩೫೪ ಜನರಿಗೆ ಉದ್ಯೋಗಾವಾಕಾಶ ಕಲ್ಪಿಸುವ ೩೮ ಯೋಜನೆಗಳಿಗೆ ಅನುಮೋದನೆಯನ್ನು ನೀಡಿದೆ.
ಮಾಹಿತಿ ತಂತ್ರಜ್ಞಾನದ ವಲಯದಲ್ಲಿ ತಂತ್ರಾಂಶದ ರಫ್ತು ೨೦೦೭-೦೮ರಲ್ಲಿ ರೂ.೫೯.೫೦೦ ಕೋಟಿ ಇದ್ದು, ೨೦೦೮-೦೯ರಲ್ಲಿ ರೂ. ೭೦.೩೭೫ ಕೋಟಿಗಳಿಗೆ ಏರಿಕೆಯಾಗಿದೆ. ಹೊರಗುತ್ತಿಗೆ ವಲಯದಲ್ಲಿ ರಫ್ತು ೨೦೦೭-೦೮ಕ್ಕೆ ರೂ. ೭೬೦೦ ಕೋಟಿಗಳಾಗಿದ್ದರೆ. ೨೦೦೮-೦೯ರಲ್ಲ ರೂ. ೧೫.೦೧೪ ಕೋಟಿಗಳಿಗೆ ಏರಿಕೆಯಾಗಿದೆ.
ಉದ್ಯೋಗ ವಲಯದಲ್ಲಿ ಪ್ರಸ್ತುತ ವರ್ಷದ ೨೦೦೯ರ ಸೆಪ್ಟೆಂಬರ್ ಅಂತ್ಯದವರೆಗೆ ವಿವಿಧ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ೯.೭೧ ಕೋಟಿ ಮಾನವ ದಿನಗಳನ್ನು ಉತ್ಪಾದಿಸಲಾಗಿದೆ.
೨೦೦೫ ರ ೫ನೇ ಆರ್ಥಿಕ ಗಣತಿ ಪ್ರಕಾರ ಕೃಷಿ ಮತ್ತು ಕೃಷಿಯೇತರ ಉದ್ಯಮಗಳಲ್ಲಿನ ಉದ್ಯೋಗವು ಹಿಂದಿನ ಆರ್ಥಿಕ ಗಣತಿಗೆ ಹೋಲಿಸಿದಲ್ಲಿ ಶೇಕಡ ೨೧ ರಷ್ಟು ಹೆಚ್ಚಾಗಿದೆ.
ಸಂಘಟಿತ ವಲಯದ ಉದ್ಯೋಗ ಮಾರ್ಚ್ ೨೦೦೯ರ ಅಂತ್ಯಕ್ಕೆ ೨೨.೩೪ ಲಕ್ಷಗಳಿಂದ ಸೆಪ್ಟೆಂಬರ್ ೨೦೦೯ರ ಅಂತ್ಯಕ್ಕೆ ೨೨.೫೬ ಲಕ್ಷಗಳಿಗೆ ಮುಟ್ಟಿದ್ದು ಶೇ. ೦೯೮ರಷ್ಟು ಏರಿಕೆಯಾಗಿದೆ.
ಸಂಘಟಿತ ವಲಯದ ಉದ್ಯೋಗ ಮಾರ್ಚ್ ೨೦೦೯ ಅಂತ್ಯಕ್ಕೆ ೨೨.೩೪ ಲಕ್ಷಗಳಿಂದ ಸೆಪ್ಟೆಂಬರ್ ೨೦೦೯ರ ಅಂತ್ಯಕ್ಕೆ ೨೨.೫೬ ಲಕ್ಷಗಳಿಗೆ ಮುಟ್ಟಿದ್ದು, ಶೇಕಡ ೦.೯೮ ರಷ್ಟು ಏರಿಕೆಯಾಗಿದೆ.
ಶಿಶು ಮರಣ ಪ್ರಮಾಣವು ಕರ್ನಾಟಕದ್ಲಲಿ ಪ್ರತಿ ಸಾವಿರಕ್ಕೆ ೪೫ ಅಂದರೆ ಅಖಿಲ ಭಾರತ ಪ್ರಮಾಣವು ೫೩ ಆಗಿದೆ.
ಆಸ್ಪತ್ರೆಗಳಲ್ಲಿನ ಪ್ರತಿ ಹಾಸಿಗೆಗೆ ಜನಸಂಖ್ಯೆಯ ಪ್ರಮಾಣವು ಕರ್ನಾಟಕದಲ್ಲಿ ೧೩೧೯ ಆಗಿದ್ದರೆ ಅಖಿಲ ಭಾರತ ಮಟ್ಟದ್ಲಲಿ ೧೫೦೩ ಆಗಿದೆ.